ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ಬಿಗಿ ನಿಯಮ: ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದ ಆಸ್ಟ್ರೇಲಿಯಾ

Australia

ಮಾರ್ಚ್‌ನಲ್ಲಿ ಆರಂಭವಾಗಲಿದ್ದ ನ್ಯೂಜಿಲೆಂಡ್ ಪ್ರವಾಸವನ್ನ ಆಸ್ಟ್ರೇಲಿಯಾ ತಂಡವು ಅಧಿಕೃತವಾಗಿ ರದ್ದುಗೊಳಿಸಿದೆ. ಉಭಯ ರಾಷ್ಟ್ರಗಳ ನಡುವಿನ ಗಡಿ ನಿರ್ಬಂಧಗಳು ಮತ್ತು ಕ್ವಾರಂಟೈನ್
ನಿಯಮಗಳನ್ನ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಗಡಿಯಲ್ಲಿನ ನಿರ್ಬಂಧಗಳನ್ನು ಸರಾಗಗೊಳಿಸುವ ನ್ಯೂಜಿಲೆಂಡ್ ಸರ್ಕಾರದ ಯೋಜನೆಗಳ ಆಧಾರದ ಮೇಲೆ ಮೂರು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಯನ್ನು ಆಯೋಜಿಸಲಾಗಿತ್ತು. ಎರಡು ಕ್ರಿಕೆಟ್ ಮಂಡಳಿಗಳಾದ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್, ಕೋವಿಡ್ ನಿಯಮಗಳು ಗಣನೀಯವಾಗಿ ವಿಲಂಬವಾಗುವುದರಿಂದ ಸರಣಿಯನ್ನ ಸ್ಥಗಿತಗೊಳಿಸಲು ಒಪ್ಪಿಕೊಂಡವು. ಏಕೆಂದರೆ ನ್ಯೂಜಿಲೆಂಡ್‌ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೂ ಸಹ ಕಡ್ಡಾಯ ಪ್ರತ್ಯೇಕತೆ ಮತ್ತು ಕ್ವಾರಂಟೈನ್ ಒಳಗಾಗಬೇಕಾಗುತ್ತದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿದ ಪಾಕಿಸ್ತಾನಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿದ ಪಾಕಿಸ್ತಾನ

ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲಿ ಐಸಿಸಿ ವೆಬ್‌ಸೈಟ್‌ಗೆ ಪ್ರವಾಸ ರದ್ದತಿ ಕುರಿತಂತೆ ಪ್ರಕಟಿಸಿದ್ದಾರೆ. ''ಸರಣಿಯನ್ನು ಆಯೋಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ನಾವು ನ್ಯೂಜಿಲೆಂಡ್ ಕ್ರಿಕೆಟ್‌ಗೆ ಧನ್ಯವಾದಗಳನ್ನ ಅರ್ಪಿಸುತ್ತೇವೆ. ದುರದೃಷ್ಟವಶಾತ್ ಗಡಿ ನಿರ್ಬಂಧಗಳು ಮತ್ತು ಕ್ವಾರಂಟೈನ್ ನಿಯಮಗಳಿಂದ ಇದು ಸಾಧ್ಯವಾಗಲಿಲ್ಲ'' ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರವಾಗಿ ನ್ಯೂಜಿಲೆಡ್ ಕ್ರಿಕೆಟ್ ಸಿಇಒ ಡೇವಿಡ್ ವೈಟ್ ಕೂಡ ಸ್ಪಷ್ಟಪಡಿಸಿದ್ದು, ಆಸ್ಟ್ರೇಲಿಯಾ ಪ್ರವಾಸವು ಓಮಿಕ್ರಾನ್‌ನಿಂದಾಗಿ ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದ್ದಾರೆ.

Surya Kumar Yadaw , ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಮಾಡಿದ್ದಾರೆ | Oneindia Kannada

ಶ್ರೀಲಂಕಾ ವಿರುದ್ಧ ಐದು ಟಿ20 ಪಂದ್ಯ
ಸ್ಟ್ರೇಲಿಯಾ ಕ್ರಿಕೆಟ್ ತಂಡವು ಫೆಬ್ರವರಿ 11 ರಿಂದ ಶ್ರೀಲಂಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಪಂದ್ಯಗಳ ಸರಣಿಯಲ್ಲಿ ಕಾಣಿಸಿಕೊಳ್ಳಲಿದೆ. ಸಿಡ್ನಿ ಕ್ರಿಕೆಟ್ ಮೈದಾನವು ಸರಣಿಯ ಆರಂಭಿಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ತಮ್ಮ ಮೊದಲ T20 ಸರಣಿಯನ್ನು ಆಡಲಿದೆ.

Story first published: Wednesday, February 9, 2022, 17:39 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X