ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಪಾಕಿಸ್ತಾನ, ಅಂತಿಮ ಟೆಸ್ಟ್, 3ನೇ ದಿನದಾಟ, ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ ಆಸಿಸ್: Live ಸ್ಕೋರ್

Australia va Pakistan, Final test, Day 4, Live score, Playing XI details, Lahore

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅದ್ಭುತವಾಗಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನ ತಂಡ ದಿಢೀರ್ ಕುಸಿತಕ್ಕೆ ಒಳಗಾಗಿ ಅನಿರೀಕ್ಷಿತ ರೀತಿಯಲ್ಲಿ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ.

ಮೂರನೇ ದಿನದಾಟದಲ್ಲಿ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 248 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಅದಾದ ಬಳಿಕ ಆಸಿಸ್ ವೇಗಿಗಳು ಪಾಕ್ ದಾಂಡಿಗರನ್ನು ಕಂಗೆಡಿಸುವಲ್ಇ ಯಶಸ್ವಿಯಾದರು. ಕೇವಲ 20 ರನ್‌ಗಳ ಅಂತರದಲ್ಲಿ ಪಾಕಿಸ್ತಾನ ತಂಡ ತನ್ನ ಅಂತಿಮ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮಹತ್ವದ 123 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
52520

ಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾ

ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಆಸ್ಟ್ರೇಲಿಯಾ ತಂಡ 391 ರನ್‌ ಗಳಿಸಲು ಯಶಸ್ವಿಯಾಗಿತ್ತು. ಉಸ್ಮಾನ್ ಖವಾಜ, ಸ್ವೀವ್ ಸ್ಮಿತ್, ಕ್ಯಾಮರೂನ್ ಗ್ರೀನ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಪ್ರವಾಸಿ ಆಸಿಸ್ ಬಳಗ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಗಿತ್ತು.

ಈ ಮೊತ್ತಕ್ಕೆ ಪ್ರತಿಯಾಗಿ ಪಾಕಿಸ್ತಾನ ಬ್ಯಾಟಿಂಗ್ ಆರಂಭಿಸಿ ಮೊದಲ ವಿಕೆಟ್‌ಅನ್ನು 20 ರನ್‌ಗಳಷ್ಟರಲ್ಲಿ ಕಳೆದುಕೊಮಡಿದ್ದರೂ ನಂತರ 2ನೇ ವಿಕೆಟ್‌ಗೆ 150 ರನ್‌ಗಳ ಜೊತೆಯಾಟದಿಂದಾಗಿ ಚೇತರಿಕೆ ಕಂಡಿತು. ಅಗ್ರ ಕ್ರಮಾಂಕದ ಮೂವರು ಪ್ರಮುಖ ಆಟಗಾರರಾದ ಶಫೀಕ್, ಅಜರ್ ಅಲಿ ಹಾಗೂ ನಾಯಕ ಬಾಬರ್ ಅಜಂ ಅರ್ಧ ಶತಕ ಸಿಡಿಸಿ ಮಿಂಚಿದರು. ಆದರೆ ಈ ಆಟಗಾರರು ವಿಕೆಟ್ ಕಳೆದುಕೊಂಡ ಬಳಿಕ ಪಾಕಿಸ್ತಾನ ತಂಡ ಭಾರೀ ಆಘಾತವನ್ನು ಅನುಭವಿಸಿತು. ಮಧ್ಯಮ ಕ್ರಮಾಂಕದ ಇತರ ಆಟಗಾರರು ಸಂಪೂರ್ಣ ವೈಫಲ್ಯವನ್ನು ಅನುಭವಿಸುವ ಮೂಲಕ ಪಾಕ್ ಪಡೆ ಭಾರೀ ನಿರಾಸೆ ಅನುಭವಿಸಿತು. ಈ ಮೂಲಕ ಕೇವಲ 268 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಆಗಿದೆ.

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ್ದು ಎಷ್ಟು ದೊಡ್ಡ ಗುರಿಯನ್ನು ಪಾಕಿಸ್ತಾನ ತಂಡಕ್ಕೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಡ್ರಾ ಫಲಿತಾಂಶದೊಂದಿಗೆ ಅಂತ್ಯ ಕಂಡಿದೆ. ರಾವಲ್ಪಿಂಡಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ನೀರಸವಾಗಿ ಡ್ರಾ ಕಂಡಿದ್ದರೆ ಕರಾಚಿಯಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅದ್ಭುತ ಹೋರಾಟ ನಡೆಸಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿತ್ತು. ಇದೀಗ ಸರಣಿಯ ಕೊನೇಯ ಟೆಸ್ಟ್ ಪಂದ್ಯದಲ್ಲಿ ಯಾವ ರೀತಿಯ ಫಲಿತಾಂಶ ಬರಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
ಬೆಂಚ್: ಜೋಶ್ ಹ್ಯಾಜಲ್ವುಡ್, ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮಾರ್ಕ್ ಸ್ಟೆಕೆಟೀ, ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಜೋಶ್ ಇಂಗ್ಲಿಸ್

ಪಾಕಿಸ್ತಾನ ಪ್ಲೇಯಿಂಗ್ XI: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ನಸೀಮ್ ಶಾ, ಸಾಜಿದ್ ಖಾನ್, ಹಸನ್ ಅಲಿ, ನೌಮನ್ ಅಲಿ, ಶಾಹೀನ್ ಅಫ್ರಿದಿ
ಬೆಂಚ್: ಶಾನ್ ಮಸೂದ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್ , ಹರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ಜಾಹಿದ್ ಮಹಮೂದ್, ಫಹೀಮ್ ಅಶ್ರಫ್

Story first published: Thursday, March 24, 2022, 10:43 [IST]
Other articles published on Mar 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X