ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ತ್, 2ನೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 146 ರನ್ ಸೋಲು

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 146 ರನ್ ಸೋಲು..! | Oneindia Kannada
Australia vs India, 2nd Test - Live Cricket Score

ಪರ್ತ್, ಡಿಸೆಂಬರ್ 18: ಕೆಎಲ್ ರಾಹುಲ್ ಸತತ ವೈಫಲ್ಯ ಜೊತೆಗೆ ಅನುಭವಿ ಆಟಗಾರರ ಅನಿರೀಕ್ಷಿತ ಸೋಲು ಪರ್ತ್ ನಲ್ಲಿ ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಸೋಲಿನ ಕಹಿ ಅನುಭವಿಸುವಂತೆ ಮಾಡಿತು. ವಿರಾಟ್ ಕೊಹ್ಲಿ ಬಳಗ 146 ರನ್ ಗಳಿಂದ ಪರಾಭವಗೊಂಡಿದೆ.

ಇದರೊಂದಿಗೆ 4 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಇನ್ನೆರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಥವಾ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯ ಡ್ರಾಗೊಂಡರಷ್ಟೇ ಐಸಿಹಾಸಿಕ ಸರಣಿ ಭಾರತದ ವಶವಾಗಲಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43624

ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ 31 ರನ್ ಸೋಲನುಭವಿಸಿದ್ದ ಆತಿಥೇಯ ಆಸ್ಟ್ರೇಲಿಯಾ, ದ್ವಿತೀಯ ಟೆಸ್ಟ್ ನಲ್ಲಿ ಉತ್ತಮ ಆರಂಭ ಕಂಡಿತ್ತು. ಮುನ್ನಡೆಯೂ ಸಾಧಿಸಿತ್ತು. ಆಸ್ಟ್ರೇಲಿಯಾ 326+243 ರನ್ ಕಲೆ ಹಾಕಿದ್ದರೆ, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 283 ರನ್ ಕಲೆ ಹಾಕಲು ಶಕ್ತವಾಗಿತ್ತು. ಸೋಮವಾರ ದಿನದಾಂತ್ಯಕ್ಕೆ ಭಾರತದ ಗೆಲುವಿಗೆ 175 ರನ್‌ಗಳ ಅಗತ್ಯವಿತ್ತು. ಆದರೆ ಭಾರತ ಮಂಗಳವಾರ (ಡಿ. 18) 56 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 140 ರನ್ ಗಳಿಸಿ ಶರಣಾಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ಕಸ್ ಹ್ಯಾರಿಸ್ 70, ಆ್ಯರನ್ ಫಿಂಚ್ 50, ಶಾನ್ ಮಾರ್ಷ್ 45, ಟ್ರಾವಿಸ್ ಹೆಡ್ 58 ರನ್ ನೆರವಿನೊಂದಿಗೆ 326 ರನ್ ಗಳಿಸಿತ್ತು. ಭಾರತಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 123, ಅಜಿಂಕ್ಯ ರಹಾನೆ 51 ರನ್ ಬೆಂಬಲ ಮಾತ್ರ ಗಮನಾರ್ಹವೆನಿಸಿತು.

ಈ ವೇಳೆ ಭಾರತ ಪರ ಇಂಶಾಂತ್ ಶರ್ಮಾ 4, ಜಸ್‌ಪ್ರೀತ್‌ ಬೂಮ್ರಾ, ಹನುಮ ವಿಹಾರಿ, ಉಮೇಶ್ ಯಾದವ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು. ಭಾರತ ಇನ್ನಿಂಗ್ಸ್ ವೇಳೆ ಆಸೀಸ್‌ನ ನಾಥನ್ ಲಿಯಾನ್ ಬರೋಬ್ಬರಿ 5 ವಿಕೆಟ್ ಕೆಡವಿ ಗಮನ ಸೆಳೆದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ ನ ಉಸ್ಮಾನ್ ಖವಾಜಾ 72, ನಾಯಕ ಟಿಮ್‌ ಪೈನೆ 37 ರನ್ ನೊಂದಿಗೆ ತಂಡವನ್ನು ಬೆಂಬಲಿಸಿದರೆ, ಭಾರತದ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಕೆಎಲ್ ರಾಹುಲ್ 0, ಮುರಳಿ ವಿಜಯ್ 20, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 17, ಅಜಿಂಕ್ಯ ರಹಾನೆ 30, ಹನುಮ ವಿಹಾರಿ 28, ರಿಷಬ್ ಪಂತ್ 30 ರನ್ ನೊಂದಿಗೆ ವಿಕೆಟ್ ಒಪ್ಪಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯ್ತು.

ಭಾರತ ತಂಡ : ಲೋಕೇಶ್ ರಾಹುಲ್, ಮುರಳಿ ವಿಜಯ್, ವಿರಾಟ್ ಕೊಹ್ಲಿ (ಸಿ), ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆ), ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸೀಸ್ ತಂಡ : ಆ್ಯರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝೆಲ್ವುಡ್.

Story first published: Tuesday, December 18, 2018, 11:48 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X