ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಟಿಮ್ ಪೈನ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 105.4 ಓವರ್ಗೆ 338 ರನ್ ಕಲೆ ಹಾಕಿತ್ತು. ಭಾರತ, ಮೊದಲ ಇನ್ನಿಂಗ್ಸ್ನಲ್ಲಿ 100.4 ಓವರ್ಗೆ 244 ರನ್ ಬಾರಿಸಿ 94 ರನ್ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ ಸದ್ಯ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.
ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ವಿಲ್ ಪುಕೊವ್ಸ್ಕಿ 62, ಮಾರ್ನಸ್ ಲಾಬುಶೇನ್ 91, ಸ್ಟೀವನ್ ಸ್ಮಿತ್ 131, ಮ್ಯಾಥ್ಯೂ ವೇಡ್ 13, ಮಿಚೆಲ್ ಸ್ಟಾರ್ಕ್ 24 ರನ್ ಬಾರಿಸಿದ್ದರು. ಆಸೀಸ್ 105.4 ಓವರ್ಗೆ 338 ರನ್ ಪೇರಿಸಿತ್ತು. ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ ಶುಕ್ರವಾರ ಎರಡನೇ ದಿನದಾಟದ ಅಂತ್ಯಕ್ಕೆ 45 ಓವರ್ಗೆ 2 ವಿಕೆಟ್ ಕಳೆದು 96 ರನ್ ಗಳಿಸಿತ್ತು.
ಭಾರತ vs ಆಸ್ಟ್ರೇಲಿಯಾ, 3ನೇ ಟೆಸ್ಟ್, Live ಸ್ಕೋರ್ಕಾರ್ಡ್
ಮೊದಲ ಇನ್ನಿಂಗ್ಸ್ನಲ್ಲಿ ಭಾರತದಿಂದ ರೋಹಿತ್ ಶರ್ಮಾ 26, ಶುಬ್ಮನ್ ಗಿಲ್ 50, ಚೇತೇಶ್ವರ್ ಪೂಜಾರ 50, ನಾಯಕ ಅಜಿಂಕ್ಯ ರಹಾನೆ 22, ರಿಷಭ್ ಪಂತ್ 36, ರವೀಂದ್ರ ಜಡೇಜಾ ಅಜೇಯ 28, ರವಿಚಂದ್ರನ್ ಅಶ್ವಿನ್ 10, ಮೊಹಮ್ಮದ್ ಸಿರಾಜ್ 6 ರನ್ ಬಾರಿಸಿದರು. ಭಾರತ 100.4 ಓವರ್ಗೆ ಎಲ್ಲಾ ವಿಕೆಟ್ ಕಳೆದು 244 ರನ್ ಪೇರಿಸಿತು.
ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ವಿಲ್ ಪುಕೊವ್ಸ್ಕಿ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮೆರಾನ್ ಗ್ರೀನ್, ಟಿಮ್ ಪೈನ್ (ಸಿ & ಡಬ್ಲ್ಯೂಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್ವುಡ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಸಿ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ.