ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!

Australia vs India: Ashwell Prince reacted for Team Indias historic Series win

ಕೇಪ್‌ಟೌನ್: ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿರುವ ಅಜಿಂಕ್ಯ ರಹಾನೆ ಪಡೆ ಇತಿಹಾಸ ನಿರ್ಮಿಸಿದೆ.

'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!''ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'

ಟೀಮ್ ಇಂಡಿಯಾದ ಐತಿಹಾಸಿಕ ಸಾಧನೆಗೆ ಅನೇಕ ಕ್ರಿಕೆಟ್‌ ಪರಿಣಿತರು, ಅಭಿಮಾನಿಗಳು ಶ್ಲಾಘಿಸಿದ್ದಾರೆ. ತಂಡದ ಅದ್ಭುತ ಸಾಧನೆಯನ್ನು ಮೆಚ್ಚಿ ಬಂದ ಅನೇಕ ಸಂದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್‌ ಅಶ್ವೆಲ್ ಪ್ರಿನ್ಸ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆಯುತ್ತಿದೆ.

ಭಾರತಕ್ಕೆ ಸರಣಿ ಗೆಲುವು: ನನ್ನ ಜೀವನದ ಶ್ರೇಷ್ಠವಾದ ಕ್ಷಣ ಎಂದು ಬಣ್ಣಿಸಿದ ರಿಷಭ್ ಪಂತ್ಭಾರತಕ್ಕೆ ಸರಣಿ ಗೆಲುವು: ನನ್ನ ಜೀವನದ ಶ್ರೇಷ್ಠವಾದ ಕ್ಷಣ ಎಂದು ಬಣ್ಣಿಸಿದ ರಿಷಭ್ ಪಂತ್

ಟ್ವೀಟ್‌ನಲ್ಲಿ ನಾಲ್ಕೇ ಸಾಲು ಬರೆದಿರುವ ಅಶ್ವೆಲ್ ಪ್ರಿನ್ಸ್, ನಾಲ್ಕು ಸಾಲುಗಳಲ್ಲೇ ಭಾರತ ನೀಡಿದ ಪ್ರದರ್ಶನ, ಹೋರಾಟ, ಕಂಡ ಹಿನ್ನಡೆ, ಅನುಭವಿಸಿದ ಮುಖಭಂಗ, ಎದುರಾಳಿಗೆ ನೀಡಿದ ಪ್ರತಿರೋಧ, ಐತಿಹಾಸಿಕ ಸಾಧನೆ, ಇದ್ದ ಅನಾನುಕೂಲತೆಗಳು ಎಲ್ಲವನ್ನೂ ವಿವರಿಸಿದ್ದಾರೆ.

ಟ್ವೀಟ್‌ ಮಾಡಿರುವ ಅಶ್ವೆಲ್, 'ಆಧುನಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಅತೀ ಶ್ರೇಷ್ಠ ಸರಣಿ ಗೆಲುವು. 2005ರ ಆ್ಯಷಸ್ ಗೆಲುವು ಐತಿಹಾಸಿಕ ಅಂತ ಇಂಗ್ಲೆಂಡ್ ಹೇಳಬಹುದು. ಆದರೆ ಮೊದಲ ಟೆಸ್ಟ್‌ನಲ್ಲಿ 36ಕ್ಕೆ ಆಲ್ ಔಟ್ ಆಗಿ, ಆಸ್ಟ್ರೇಲಿಯಾ ಪ್ರೇಕ್ಷಕರಿಂದ ನಿಂದಿಸಲ್ಪಟ್ಟು, ನಾಯಕ ವಿರಾಟ್ ಕೊಹ್ಲಿ ಇಲ್ಲದೆ, ಗಾಯದಿಂದ ಕಾಡಿಸಲ್ಪಟ್ಟು, ಅಂತಿಮ ಟೆಸ್ಟ್‌ನಲ್ಲಿ ಮೊದಲ ಆಯ್ಕೆಯ ಬೌಲರ್‌ ಇಲ್ಲದೆ ಭಾರತ ತಂಡ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆದ್ದಿದ್ದು ನನ್ನ ಪ್ರಕಾರ ಶ್ರೇಷ್ಠ ವಿಜಯ' ಎಂದು ಬರೆದುಕೊಂಡಿದ್ದಾರೆ.

Story first published: Tuesday, January 19, 2021, 15:51 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X