ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ವಾರಂಟೈನ್ ನಿಯಮ ಸಡಿಲಿಸುವಂತೆ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಪತ್ರ

Australia vs India: BCCI writes to Cricket Australia on relaxation of Brisbane hard quarantine

ಸಿಡ್ನಿ: ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್‌ ಪಂದ್ಯ ನಡೆಯುವ ಬ್ರಿಸ್ಬೇನ್‌ನಲ್ಲಿ ಕೊರೊನಾವೈರಸ್ ಕಠಿಣ ನಿಯಮ ಸಡಿಲಿಸುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಪತ್ರ ಬರೆದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ಕಠಿಣ ಕ್ವಾರಂಟೈನ್‌ ನಿಯಮದ ಅಡಿಯಲ್ಲಿದೆ.

ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್

ಬಲ್ಲ ಮಾಹಿತಿಯ ಪ್ರಕಾರ ಬಿಸಿಸಿಐ ಮುಖ್ಯಸ್ಥರು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಅರ್ಲ್ ಎಡ್ಡಿಂಗ್ಸ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರವಾಸದ ವಿಧಾನಗಳು, ಕಠಿಣ ಕ್ವಾರಂಟೈನ್ ನಿಯಮಗಳ ಸಡಿಲಿಕೆಯ ಬಗ್ಗೆ ಬರೆಯಲಾಗಿದೆ ಎನ್ನಲಾಗಿದೆ.

'ಚರ್ಚೆಗಳು ಇನ್ನೂ ನಡೆಯುತ್ತಿವೆ ಆದರೆ ಇಂದು ಬಿಸಿಸಿಐ ತನ್ನ ಆಟಗಾರರಿಗೆ ಬ್ರಿಸ್ಬೇನ್‌ನಲ್ಲಿ ಪಂದ್ಯವನ್ನು ನಡೆಸಬೇಕಾದರೆ ಕಠಿಣ ಕ್ವಾರಂಟೈನ್ ಅನ್ನು ಸಡಿಲಿಸುವಂತೆ ಕೋರಿ ಔಪಚಾರಿಕವಾಗಿ ಪತ್ರವನ್ನು ಕಳುಹಿಸಿದೆ' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಐಪಿಎಲ್ 2021: ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಎಂಎಸ್ ಧೋನಿ!ಐಪಿಎಲ್ 2021: ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಎಂಎಸ್ ಧೋನಿ!

ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಜನವರಿ 15ರಿಂದ ಆರಂಭಗೊಳ್ಳಲಿದೆ. ಸದ್ಯ ಇತ್ತಂಡಗಳ ಮಧ್ಯೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿಯಮಗಳನ್ನು ಆಸ್ಟ್ರೇಲಿಯಾ ಕಠಿಣಗೊಳಿಸಿದೆ.

Story first published: Thursday, January 7, 2021, 21:26 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X