ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಬಾಕ್ಸಿಂಗ್‌ ಡೇ ಟೆಸ್ಟ್‌ಗೆ 25,000 ವೀಕ್ಷಕರಿಗೆ ಅವಕಾಶ

Australia vs India Boxing Day Test: MCG to allow maximum 25,000 spectators

ಸಿಡ್ನಿ: ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿರುವ ಭಾರತ ತಂಡ ಅಲ್ಲಿ ಮೂರು ಏಕದಿನ, ಮೂರು ಟಿ20ಐ, ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದರಲ್ಲಿ ಟೆಸ್ಟ್ ವೇಳೆ ಸುಮಾರು 25,000 ವೀಕ್ಷಕರಿಗೆ ಅವಕಾಶ ಮಾಡಿಕೊಡಲು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಿರ್ಧರಿಸಿದೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದ ಯಾವುದೇ ಅಂತಾರಾಷ್ಟ್ರೀಯ ಅಥವಾ ಲೀಗ್ ಟೂರ್ನಿಗಳ ವೇಳೆ ವೀಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕಿತರ ಸಾವಿನ ಹೊಸ ಪ್ರಕರಣ ಇಲ್ಲವಾದ್ದರಿಂದ ಬಹುನಿರೀಕ್ಷಿತ ಟೆಸ್ಟ್ ಸರಣಿ ವೇಳೆ ವೀಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನ ಸಾಮರ್ಥ್ಯ ಸುಮಾರು 1,00,024 ಆಗಿದೆ. ಹೀಗಾಗಿ 25,000 ವೀಕ್ಷಕರಿಗೆ ಅವಕಾಶವೆಂದರೆ ಮೈದಾನದ ಕಾಲ ಭಾಗದಷ್ಟು ವೀಕ್ಷಕರು ಇದ್ದಂತಾಗುತ್ತದೆ. ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ.

ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!

'ನಮ್ಮ ಹೊಸ ಕೋವಿಡ್ ಸೇಫ್ ಪ್ರೋಟೋಕಾಲ್‌ಗಳ ಅಡಿಯಲ್ಲಿ, ಈ ವರ್ಷದ ಬಾಕ್ಸಿಂಗ್ ಡೇ ಟೆಸ್ಟನ್ನು ಎಂಸಿಜಿಯಲ್ಲಿ ಆಯೋಜಿಸಲು ನಾವು ವಿಕ್ಟೋರಿಯನ್ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ,' ಎಂದು ಎಂಸಿಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಟುವರ್ಟ್ ಫಾಕ್ಸ್ ಹೇಳಿದ್ದಾರೆ.

Story first published: Wednesday, October 28, 2020, 14:22 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X