ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ನಾಯಕನಾಗಿ ದಾಖಲೆಗಳ ಬರೆದ ಅಜಿಂಕ್ಯ ರಹಾನೆ!

Australia vs India: Captain Ajinkya Rahane created unique record

ಮೆಲ್ಬರ್ನ್: ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದುದರ ಮಧ್ಯೆಯೇ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ (ಡಿಸೆಂಬರ್ 29) ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿ ಭಾರತದ ಮುಂದಾಳತ್ವ ವಹಿಸಿದ್ದ ರಹಾನೆ ನಾಯಕತ್ವ, ಯೋಜನೆ, ಬ್ಯಾಟಿಂಗ್, ಫೀಲ್ಡಿಂಗ್‌ಗಾಗಿ ಗಮನ ಸೆಳೆದಿದ್ದಾರೆ.

ಮ್ಯಾಥ್ಯೂ ವೇಡ್-ರಿಷಭ್ ಪಂತ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ: ವಿಡಿಯೋಗಳುಮ್ಯಾಥ್ಯೂ ವೇಡ್-ರಿಷಭ್ ಪಂತ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ: ವಿಡಿಯೋಗಳು

ದ್ವಿತೀಯ ಪಂದ್ಯದ ಗೆಲುವಿನೊಂದಿಗೆ ಅಜಿಂಕ್ಯ ರಹಾನೆ ಹೆಸರಿಗೆ ದಾಖಲೆಗಳು ಸೇರ್ಪಡೆಗೊಂಡಿವೆ. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 27 ರನ್ ಬಾರಿಸಿರುವ ರಹಾನೆ ಪಂದ್ಯದ ಗೆಲುವಿಗೆ ಪ್ರಮುಖ ಕಾರಣರೂ ಎನಿಸಿದ್ದಾರೆ.

ಐಸಿಸಿ ದಶಕದ ಪ್ರಶಸ್ತಿಗಳು: ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಕಿಡಿಐಸಿಸಿ ದಶಕದ ಪ್ರಶಸ್ತಿಗಳು: ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಕಿಡಿ

ವಿಶೇಷವೆಂದರೆ ಅಜಿಂಕ್ಯ ರಹಾನೆಯವರು ಭಾರತದ ನಾಯಕತ್ವ ವಹಿಸಿಕೊಂಡ ಪಂದ್ಯಗಳಲ್ಲಿ ಗೆದ್ದಿದ್ದೇ ಹೆಚ್ಚು. ಆ ಪಂದ್ಯಗಳ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

* ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 195 ರನ್ ಬಾರಿಸಿತ್ತು.
* ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 115.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 326 ರನ್ ಗಳಿಸಿ 131 ರನ್ ಮುನ್ನಡೆ ಸಾಧಿಸಿತ್ತು.
* ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 103.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿತ್ತು.
* ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಕೇವಲ 70 ರನ್ ಬೇಕಿತ್ತು. ರಹಾನೆ ಪಡೆ 15.5 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 70 ರನ್ ಬಾರಿಸಿತು.

ರಹಾನೆ ಕ್ಯಾಪ್ಟನ್ಸಿಯಲ್ಲಿ ಭಾರತಕ್ಕೆ ಗೆಲುವು

ರಹಾನೆ ಕ್ಯಾಪ್ಟನ್ಸಿಯಲ್ಲಿ ಭಾರತಕ್ಕೆ ಗೆಲುವು

ರಹಾನೆ ನಾಯಕತ್ವ ವಹಿಸಿದ ಕೆಳಗಿನ ಈ ಮೂರೂ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ
* ಭಾರತ vs ಆಸ್ಟ್ರೇಲಿಯಾ, ಧರ್ಮಶಾಲಾ, 2017
* ಭಾರತ vs ಬಾಂಗ್ಲಾದೇಶ, ಬೆಂಗಳೂರು, 2018
* ಭಾರತ vs ಆಸ್ಟ್ರೇಲಿಯಾ, ಮೆಲ್ಬರ್ನ್, 2020*

ಅಜಿಂಕ್ಯ ಹೆಸರಿಗೆ ವಿಶೇಷ ದಾಖಲೆ

ಅಜಿಂಕ್ಯ ಹೆಸರಿಗೆ ವಿಶೇಷ ದಾಖಲೆ

ಆಸೀಸ್ ವಿರುದ್ಧದ ದ್ವಿತೀಯ ಪಂದ್ಯದ ಗೆಲುವಿನೊಂದಿಗೆ ರಹಾನೆ ಹೆಸರಿಗೆ ವಿಶೇಷ ದಾಖಲೆಯೊಂದು ಸೇರ್ಪಡೆಯಾಗಿದೆ. ಭಾರತ ಟೆಸ್ಟ್ ತಂಡಕ್ಕೆ ನಾಯಕರಾಗಿದ್ದು ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಪಟ್ಟಿಯಲ್ಲಿ ರಹಾನೆ ಕೂಡ ಈಗ ಸೇರ್ಪಡೆಯಾಗಿದ್ದಾರೆ. ಈ ದಾಖಲೆಯೀಗ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ, ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಸ್ಮಾರ್ಟ್ ಕ್ಯಾಪ್ಟನ್ ಅಜಿಂಕ್ಯ ರಹಾನೆ ಹೆಸರಿನಲ್ಲಿದೆ.ಅಂತೂ 2020ರ ವರ್ಷಾಂತ್ಯ ಅಜಿಂಕ್ಯ ರಹಾನೆ ಪಾಲಿಗಂತೂ ಖುಷಿ ನೀಡಿದೆ.

Story first published: Tuesday, December 29, 2020, 22:38 [IST]
Other articles published on Dec 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X