ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಅತೀ ಕೆಟ್ಟ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!

Australia vs India: India created bad record for lowest score

ಅಡಿಲೇಡ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಅತೀ ಕೆಟ್ಟ ದಾಖಲೆಯೊಂದಕ್ಕೆ ಕಾರಣವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಅತೀ ಕಡಿಮೆ ರನ್ ಬಾರಿಸಿದ ತಂಡಗಳ ಸಾಲಿಗೆ ವಿರಾಟ್ ಕೊಹ್ಲಿ ಪಡೆ ಸೇರಿಕೊಂಡಿದೆ. ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ನಲ್ಲಿ ಈ ಕೆಟ್ಟ ದಾಖಲೆ ಸೃಷ್ಟಿಯಾಗಿದೆ. ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ 244 ರನ್ ಬಾರಿಸಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ ಮುನ್ನಡೆ ಸಾಧಿಸಿತ್ತು.

ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!

ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೆಟ್ಟ ಬ್ಯಾಟಿಂಗ್‌ ಮಾಡಿದ ಭಾರತ 21.2 ಓವರ್‌ಗೆ 9 ವಿಕೆಟ್ ಕಳೆದು ಕೇವಲ 36 ರನ್ ಬಾರಿಸಿ ಡಿಕ್ಲೇರ್ ಘೋಷಿಸುವುದರೊಂದಿಗೆ ಬೇಡದ ದಾಖಲೆಗೆ ಕಾರಣವಾಗಿದೆ. ಈ ಮೊದಲು 1974ರಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 42 ರನ್ ಬಾರಿಸಿದ್ದೇ ಭಾರತದ ಅತೀ ಕಡಿಮೆ ಟೆಸ್ಟ್ ರನ್ ಆಗಿತ್ತು.

ಆಸ್ಟ್ರೇಲಿಯಾದಲ್ಲಿ ಮಗು ಹೊಂದಲು ಕೊಹ್ಲಿ-ಅನುಷ್ಕಾಗೆ ಬ್ರೆಟ್‌ ಲೀ ಆಹ್ವಾನಆಸ್ಟ್ರೇಲಿಯಾದಲ್ಲಿ ಮಗು ಹೊಂದಲು ಕೊಹ್ಲಿ-ಅನುಷ್ಕಾಗೆ ಬ್ರೆಟ್‌ ಲೀ ಆಹ್ವಾನ

1
48440

ಈಗ 36 ರನ್ ಬಾರಿಸಿ ಭಾರತ ತಂಡ ಕೆಟ್ಟ ದಾಖಲೆ ಪಟ್ಟಿಯಲ್ಲಿ ಇನ್ನೂ ಮೇಲಿನ ಸ್ಥಾನಕ್ಕೆ ಹೋಗಿದೆ. ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್‌ ದಾಖಲೆಯಿರುವುದು ನ್ಯೂಜಿಲೆಂಡ್‌ ಹೆಸರಿನಲ್ಲಿ.

ಅತೀ ಕಡಿಮೆ ರನ್ ದಾಖಲೆ

ಅತೀ ಕಡಿಮೆ ರನ್ ದಾಖಲೆ

1955ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್‌ ಒಂದರಲ್ಲಿ 26 ರನ್ ಬಾರಿಸಿತ್ತು. ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಅತೀ ಕಡಿಮೆ ಒಟ್ಟು ರನ್ ಇದು. ಅದು ಬಿಟ್ಟರೆ 1896ರಲ್ಲಿ ದಕ್ಷಿಣ ಆಫ್ರಿಕಾ ತಂಡ ಪೋರ್ಟ್ ಎಲಿಝಬೆತ್‌ನಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ಬಾರಿಸಿದ್ದ 30 ರನ್ ದ್ವಿತೀಯ ಕೆಟ್ಟ ದಾಖಲೆಯೆನಿಸಿದೆ.

ಭಾರತ ನೀರಸ ಬ್ಯಾಟಿಂಗ್‌

ಭಾರತ ನೀರಸ ಬ್ಯಾಟಿಂಗ್‌

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ರನ್ ಪಟ್ಟಿ ನೋಡಿದರೆ, ಪೃಥ್ವಿ ಶಾ 4, ಮಾಯಾಂಕ್ ಅಗರ್ವಾಲ್ 9, ಚೇತೇಶ್ವರ ಪೂಜಾರ 0, ವಿರಾಟ್ ಕೊಹ್ಲಿ (ಸಿ) 4, ಅಜಿಂಕ್ಯ ರಹಾನೆ 0, ಹನುಮಾ ವಿಹಾರಿ 8, ವೃದ್ಧಿಮಾನ್ ಸಹಾ (ವಿಕೆ) 4, ರವಿಚಂದ್ರನ್ ಅಶ್ವಿನ್ 0, ಉಮೇಶ್ ಯಾದವ್ 4, ಮೊಹಮ್ಮದ್ ಶಮಿ 1, ಜಸ್ಪ್ರೀತ್ ಬುಮ್ರಾ 2 ರನ್ ಬಾರಿಸಿದ್ದರು.

ಮುನ್ನಡೆಯಲ್ಲಿದ್ದ ಭಾರತಕ್ಕೆ ಹಿನ್ನಡೆ

ಮುನ್ನಡೆಯಲ್ಲಿದ್ದ ಭಾರತಕ್ಕೆ ಹಿನ್ನಡೆ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿದ್ದರೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ಶುಕ್ರವಾರ (ಡಿಸೆಂಬರ್ 18) ಎರಡನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (4 ರನ್) ವಿಕೆಟ್ ಕಳೆದುಕೊಂಡಿತ್ತು. ಶನಿವಾರ ಭಾರತ ಇನ್ನೂ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತು.

Story first published: Saturday, December 19, 2020, 13:03 [IST]
Other articles published on Dec 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X