ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಹೆಸರಲ್ಲಿ ವಿಶೇಷ ದಾಖಲೆ

Australia vs India: Indian players created unique record in 3rd test

ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಜಿಂಕ್ಯ ರಹಾನೆ ಬಳಗ ಅಪರೂಪದ ದಾಖಲೆಗೆ ಕಾರಣವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಆರಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳು 50+ ಎಸೆತಗಳನ್ನು ಎದುರಿಸಿದ್ದು ಟೆಸ್ಟ್‌ ಇತಿಹಾಸದಲ್ಲೇ ಇದೇ ಮೊದಲು. ಭಾರತೀಯರ ಈ ದಿಟ್ಟ ಬ್ಯಾಟಿಂಗ್‌ನಿಂದಲೇ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಂಡಿತಲ್ಲದೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲೇ ಹಿಡಿದಿಟ್ಟುಕೊಂಡಿದೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣುಮಗು ಜನನವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣುಮಗು ಜನನ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದ್ದು ನಿಜ. ಅಸಲಿಗೆ ಪಂದ್ಯದಲ್ಲಿ ಭಾರತ ಸೋಲಿನ ಭೀತಿಯಲ್ಲಿತ್ತು. ಆದರೆ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಅರ್ಧ ಶತಕ ಬಾರಿಸಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಬೇಗನೆ ಇನ್ನಿಂಗ್ಸ್ ಮುಗಿಸಲಿಲ್ಲ.

ಆರಂಭಿ ಇನ್ನಿಂಗ್ಸ್‌ನಲ್ಲಿ 94 ರನ್ ಹಿನ್ನಡೆ ಅನುಭವಿಸಿದ್ದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬೇಗನೆ ಸರ್ವ ಪತನ ಕಾಣುವ ಭೀತಿ ಎದುರಿಸಿತ್ತು. ಆದರೆ ಶರ್ಮಾ 52, ಪೂಜಾರ 77, ರಿಷಭ್ ಪಂತ್ 97 ರನ್, ಹನುಮ ವಿಹಾರಿ ಅಜೇಯ 23, ರವಿಚಂದ್ರನ್ ಅಶ್ವಿನ್ ಅಜೇಯ 39 ರನ್ ಬಾರಿಸಿದ್ದರಿಂದ ಭಾರತ ಐದನೇ ದಿನದಾಟ ಮುಗಿಯುವ ವೇಳೆಗೆ 131 ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 334 ರನ್ ಗಳಿಸಿತ್ತು.

ಭಾರತ vs ಆಸೀಸ್: ಕುತಂತ್ರವೆಸಗಿ ಮತ್ತೆ ಸಿಕ್ಕಿಬಿದ್ದ ಸ್ಟೀವ್ ಸ್ಮಿತ್-ವಿಡಿಯೋಭಾರತ vs ಆಸೀಸ್: ಕುತಂತ್ರವೆಸಗಿ ಮತ್ತೆ ಸಿಕ್ಕಿಬಿದ್ದ ಸ್ಟೀವ್ ಸ್ಮಿತ್-ವಿಡಿಯೋ

ಮೂರನೇ ಟೆಸ್ಟ್‌ ನಲ್ಲಿ 50+ ಎಸೆತ ಎದುರಿಸಿದ ಭಾರತದ ಆರು ಬ್ಯಾಟ್ಸ್‌ಮನ್‌ಗಳು
* ರೋಹಿತ್ ಶರ್ಮಾ, 98 ಎಸೆತ
* ಶುಬ್ಮನ್ ಗಿಲ್, 64 ಎಸೆತ
* ಚೇತೇಶ್ವರ ಪೂಜಾರ, 205 ಎಸೆತ
* ರಿಷಭ್ ಪಂತ್, 118 ಎಸೆತ
* ಹನುಮ ವಿಹಾರಿ, 161 ಎಸೆತ
* ರವಿಚಂದ್ರನ್ ಅಶ್ವಿನ್, 139 ಎಸೆತ

Story first published: Monday, January 11, 2021, 17:29 [IST]
Other articles published on Jan 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X