ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ

Australia vs India: Justin Langer confirms playing XI for Boxing Day Test

ಮೆಲ್ಬರ್ನ್: ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಈಗಾಗಲೇ 1-0ಯ ಮುನ್ನಡೆ ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ದ್ವಿತೀಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಲು ಯೋಚಿಸುತ್ತಿದೆ. ಕುತೂಹಲಕಾರಿ ಪಂದ್ಯಕ್ಕಾಗಿ ಎರಡೂ ತಂಡಗಳು ತಯಾರಿ ನಡೆಸುತ್ತಿವೆ. ಎರಡೂ ತಂಡಗಳಲ್ಲೂ ಪ್ರಮುಖ ಬದಲಾವಣೆಗಳಾಗುತ್ತಿವೆ.

ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್

ಡಿಸೆಂಬರ್ 26ರಿಂದ ಮೆಲ್ಬರ್ನ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ಗಾಗಿ ಭಾರತದ ಪ್ಲೇಯಿಂಗ್‌ XI ಇನ್ನಷ್ಟೇ ಪ್ರಕಟವಾಗಬೇಕಿದೆ. ಆದರೆ ಆಸ್ಟ್ರೇಲಿಯಾದ ಪ್ಲೇಯಿಂಗ್‌ XI ಈಗಾಗಲೇ ಪ್ರಕಟಗೊಂಡಿದೆ. ದ್ವಿತೀಯ ಟೆಸ್ಟ್‌ಗೆ ಇದೇ ಪ್ಲೇಯಿಂಗ್‌ XI ಎಂದು ಜಸ್ಟಿನ್ ಲ್ಯಾಂಗರ್ ಖಾತರಿಪಡಿಸಿದ್ದಾರೆ.

ICC T20I Rankings : ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದುICC T20I Rankings : ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದು

ದ್ವಿತೀಯ ಟೆಸ್ಟ್‌ಗಾಗಿ ಆಸ್ಟ್ರೇಲಿಯಾ ಪ್ರಕಟಿಸಿರುವ ತಂಡ ಭಾರತ ವಿರುದ್ಧ ಮೇಲುಗೈ ಸಾಧಿಸಲು ಸಮರ್ಥವಾಗಿದೆ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಹ್ಯಾಝಲ್ವುಡ್, ಕಮಿನ್ಸ್‌ಗೆ ಸ್ಥಾನ

ಹ್ಯಾಝಲ್ವುಡ್, ಕಮಿನ್ಸ್‌ಗೆ ಸ್ಥಾನ

ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವೇಗಿಗಳಾದ ಜೋಶ್ ಹ್ಯಾಝಲ್ವುಡ್ 1+5, ಪ್ಯಾಟ್ ಕಮಿನ್ಸ್ 4+3, ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದಿದ್ದರು. ದ್ವಿತೀಯ ಟೆಸ್ಟ್‌ನಲ್ಲೂ ಈ ಮೂವರೂ ಪ್ರಮುಖ ಬೌಲರ್‌ಗಳು ಆಸೀಸ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಜೋ ಬರ್ನ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್‌ನಂತ ಪ್ರಮುಖ ಬ್ಯಾಟ್ಸ್‌ಮನ್‌ಗಳೂ ಇದ್ದಾರೆ.

ಭಾರತ ತಂಡ ಹೇಗಿದೆ?

ಭಾರತ ತಂಡ ಹೇಗಿದೆ?

ಭಾರತ ತಂಡದ ಪ್ಲೇಯಿಂಗ್‌ XI ಪ್ರಕಟವಾಗಿಲ್ಲ. ಆದರೆ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದೆ. ಕೆಎಲ್ ರಾಹುಲ್, ಶುಬ್ಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊಹಮ್ಮದ್ ಶಮಿ, ಪೃಥ್ವಿ ಶಾ, ವೃದ್ಧಿಮಾನ್ ಸಹಾ ಪ್ಲೇಯಿಂಗ್‌ XIನಿಂದ ಹೊರ ಬೀಳುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್‌ XI

ಆಸ್ಟ್ರೇಲಿಯಾ ಪ್ಲೇಯಿಂಗ್‌ XI

ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲ್ಯಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಡ್ ಹೆಡ್, ಕ್ಯಾಮರಾನ್ ಗ್ರೀನ್, ಟಿಮ್ ಪೈನ್ (ನಾಯಕ, ವಿಕೆ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಿಯಾನ್, ಜೋಶ್ ಹ್ಯಾಝಲ್ವುಡ್ (ಬಹುತೇಕ ಆರಂಭಿಕ ಟೆಸ್ಟ್‌ನಲ್ಲಿ ಆಡಿದ್ದ ತಂಡವೇ ದ್ವಿತೀಯ ಟೆಸ್ಟ್‌ನಲ್ಲೂ ಆಡಲಿದೆ).

Story first published: Thursday, December 24, 2020, 14:09 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X