ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!

Australia vs India: Justin Langer identifies India’s ‘greatest strength’

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಆರಂಭಿಕ ಪಂದ್ಯದಲ್ಲಿನ 8 ವಿಕೆಟ್ ಹೀನಾಯ ಸೋಲಿಗೆ ಕೇಳಿ ಬಂದಿದ್ದ ಟೀಕೆಗಳಿಗೆ ತಿರುಗೇಟು ನೀಡಿತ್ತು. ಅಡಿಲೇಡ್‌ನಲ್ಲಿ ನಡೆದಿದ್ದ ಆರಂಭಿಕ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ ಬಾರಿಸಿದ್ದ ಭಾರತ, ಮೆಲ್ಬರ್ನ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ 8 ವಿಕೆಟ್ ಗೆಲುವನ್ನಾಚರಿಸಿತ್ತು. ದ್ವಿತೀಯ ಟೆಸ್ಟ್‌ನಲ್ಲಿ ಗೆಲುವಿನ ಬಳಿಕ ಭಾರತ ತಂಡದ ಬಗ್ಗೆ ಅನೇಕ ಕ್ರಿಕೆಟಿಗರು, ಅಭಿಮಾನಿಗಳು ಮೆಚ್ಚುಗೆಯೂ ವ್ಯಕ್ತಪಡಿಸಿದ್ದರು.

ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಶ್ಚಾರ್ಜ್ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಶ್ಚಾರ್ಜ್

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸೋತಿದ್ದು ನೋಡಿ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 4-0ಯಿಂದ ಗೆಲ್ಲಬಹುದು ಅಂದುಕೊಂಡಿತ್ತೋ ಏನೋ. ಆದರೆ ದ್ವಿತೀಯ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿದ್ದ ಭಾರತ ಎದುರಾಳಿಗೆ ತಕ್ಕ ತಿರುಗೇಟು ನೀಡಿತ್ತು.

3ನೇ ಟೆಸ್ಟ್‌ಗೆ ಮಯಾಂಕ್ ಬದಲು ರೋಹಿತ್, ಬ್ರಿಸ್ಬೇನ್‌ನಲ್ಲೇ 4ನೇ ಟೆಸ್ಟ್3ನೇ ಟೆಸ್ಟ್‌ಗೆ ಮಯಾಂಕ್ ಬದಲು ರೋಹಿತ್, ಬ್ರಿಸ್ಬೇನ್‌ನಲ್ಲೇ 4ನೇ ಟೆಸ್ಟ್

ಇತ್ತೀಚಿನ ದಿನಗಳಲ್ಲಿ ಭಾರತ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಮಿನುಗುತ್ತಿರುವುದಕ್ಕೆ ಪ್ರಮುಖ ಕಾರಣವೊಂದಿದೆ. ಅದೇನು ಅನ್ನೋದನ್ನು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿಕೊಂಡಿದ್ದಾರೆ.

ಶಿಸ್ತುಬದ್ಧ ಪ್ರದರ್ಶನ

ಶಿಸ್ತುಬದ್ಧ ಪ್ರದರ್ಶನ

ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್‌ನಲ್ಲಿ ಗೆದ್ದಿದ್ದು ನೋಡಿ ಅನೇಕ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು ಹೊಗಳಿದ್ದರು. ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ದ್ವಿತೀಯ ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನವನ್ನು ಯೋಜಿತ, ಶಿಸ್ತುಬದ್ಧ ಪ್ರದರ್ಶನ ಎಂದಿದ್ದಾರೆ. ಮುಖ್ಯವಾಗಿ ಬೌಲಿಂಗ್‌ನಲ್ಲಿ ಭಾರತದ ಪ್ರದರ್ಶನ ಚತುರವಾಗಿತ್ತು ಎಂದು ಶ್ಲಾಘಿಸಿದ್ದಾರೆ.

ಭಾರತದ ಪ್ರಮುಖ ಶಕ್ತಿ

ಭಾರತದ ಪ್ರಮುಖ ಶಕ್ತಿ

'ಕಳೆದ ಕೆಲವು ಸರಣಿಗಳಲ್ಲಿ ನಾನು ಗಮನಿಸಿದಂತೆ ಭಾರತದ ಪ್ರಮುಖ ಶಕ್ತಿಯೇನೆಂದರೆ ಅವರ ಶಿಸ್ತು. ಭಾರತದ್ದು ತುಂಬಾ ಶಿಸ್ತುಬದ್ಧ ತಂಡ. ಕಳೆದ ಎರಡು ಟೆಸ್ಟ್‌ಗಳು ನನಗೆ ತುಂಬಾ ಇಷ್ಟ. ಯಾಕೆಂದರೆ ಅಲ್ಲಿ ಬ್ಯಾಟ್‌ ಮತ್ತು ಬಾಲ್‌ ಮಧ್ಯೆ ಪಿಚ್ ಸ್ಪರ್ಧೆ ನಡೆಸಿತು. ಹೀಗಾಗಿ ನೀವು ಪಂದ್ಯ ಗೆಲ್ಲಬೇಕಾದರೆ ಇನ್ನೂ ಪರಿಶ್ರಮ ಪಡಬೇಕು. ಟೆಸ್ಟ್ ಕ್ರಿಕೆಟ್ ಅಂದರೆ ಇದೇ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಸರಣಿ ಗೆಲ್ಲುವತ್ತ ತಂಡಗಳ ಚಿತ್ತ

ಸರಣಿ ಗೆಲ್ಲುವತ್ತ ತಂಡಗಳ ಚಿತ್ತ

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಜನವರಿ 7ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ಗೆಲುವಿನ ಹಾದಿ ಸುಲಭ ಮಾಡಿಕೊಳ್ಳುವತ್ತ ಎರಡೂ ತಂಡಗಳು ಕಣ್ಣಿಟ್ಟಿವೆ. ಎರಡೂ ತಂಡಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಭಾರತ ತಂಡದಲ್ಲಿ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಆಡಲಿದ್ದಾರೆ.

Story first published: Wednesday, January 6, 2021, 10:03 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X