ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus: ಗಾಯಕ್ಕೀಡಾಗಿರುವ ಭಾರತದ ಆಟಗಾರರ ಸಂಪೂರ್ಣ ಪಟ್ಟಿ

Australia vs India: List of Indian players and there Injuries

ಸಿಡ್ನಿ: ಕುತೂಹಲಕಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಗಾಯಕ್ಕೀಡಾಗಿರುವ ಆಟಗಾರರ ಪಟ್ಟಿ ಬೆಳೆಯುತ್ತಲೇ ಸಾಗುತ್ತಿದೆ. ಟೆಸ್ಟ್ ಸರಣಿ ರೋಚಕ ಹಂತಕ್ಕೆ ತಲುಪಿರುವಾಗಲೇ ಭಾರತದ ತಂಡ ನಿರ್ವಹಣಾ ಸಮಿತಿಗೆ ತಲೆನೋವು ಶುರುವಾಗಿದೆ. ತಂಡದ ಪ್ರಮುಖ ಆಟಗಾರರೇ ಗಾಯಕ್ಕೀಡಾಗಿ ಹೊರ ಬೀಳುತ್ತಿರುವುದರಿಂದ ತಂಡದಲ್ಲಿ ಅನುಭವಿಗಳ ಕೊರತೆ ಕಾಣಲಾರಂಭಿಸಿದೆ.

ಐಪಿಎಲ್ 2021: ದುರ್ವರ್ತನೆ ತೋರಿದ ಸ್ಟೀವ್ ಸ್ಮಿತ್‌ಗೆ ಕಂಟಕ!ಐಪಿಎಲ್ 2021: ದುರ್ವರ್ತನೆ ತೋರಿದ ಸ್ಟೀವ್ ಸ್ಮಿತ್‌ಗೆ ಕಂಟಕ!

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮುಕ್ತಾಯಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿತ್ತು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ. ಈ ಮಧ್ಯೆ ತಂಡದ ಪ್ರಮುಖ ಆಟಗಾರರೆಲ್ಲಾ ಗಾಯಕ್ಕೀಡಾಗಿ ತಂಡದಿಂದ ಹೊರ ಬೀಳುತ್ತಿದ್ದಾರೆ.

ಆರ್‌ ಅಶ್ವಿನ್ ಎದುರು ಕಾಲುಕರೆದಿದ್ದಕ್ಕೆ ಕ್ಷಮೆ ಕೋರಿದ ಟಿಮ್ ಪೈನ್ಆರ್‌ ಅಶ್ವಿನ್ ಎದುರು ಕಾಲುಕರೆದಿದ್ದಕ್ಕೆ ಕ್ಷಮೆ ಕೋರಿದ ಟಿಮ್ ಪೈನ್

4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿರುವ, ಗಾಯದ ಭೀತಿ ಅನುಭವಿಸುತ್ತಿರುವ ಭಾರತದ ಆಟಗಾರರ ಪಟ್ಟಿ ಕೆಳಗಿದೆ.

ಪ್ರಮುಖ ಬದಲಾವಣೆಗಳು ಸಾಧ್ಯತೆ

ಪ್ರಮುಖ ಬದಲಾವಣೆಗಳು ಸಾಧ್ಯತೆ

ಟೆಸ್ಟ್ ಸರಣಿಯಲ್ಲಿ ತಂಡದ ಎಂದಿನ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವೃದ್ಧಿಮಾನ್ ಸಹಾ ಕೂಡ ಹೇಳಿಕೊಳ್ಳುವಂತ ಫಾರ್ಮ್‌ನಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಇದು ಭಾರತಕ್ಕೆ ಹಿನ್ನಡೆಯ ಸಂಗತಿಯಾಗಿ ಕಾಣಿಸಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಏನೆಲ್ಲ ಬದಲಾವಣೆ ಮಾಡಿಕೊಳ್ಳಲಿದೆ ಅನ್ನೋದು ಕುತೂಹಲ ಮೂಡಿಸಿದೆ.

ಜನವರಿ 15ಕ್ಕೆ 4ನೇ ಟೆಸ್ಟ್

ಜನವರಿ 15ಕ್ಕೆ 4ನೇ ಟೆಸ್ಟ್

ಭಾರತ-ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಟೆಸ್ಟ್ ಪಂದ್ಯ ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಜನವರಿ 15ರಿಂದ ಆರಂಭಗೊಳ್ಳಲಿದೆ. ಪಂದ್ಯ 5:30 AMಗೆ ಆರಂಭಗೊಳ್ಳಲಿದೆ. ಅಂತಿಮ ಪಂದ್ಯ ಗೆದ್ದು ಸರಣಿ ಗೆಲ್ಲುವತ್ತ ಎರಡೂ ತಂಡಗಳು ಕಣ್ಣಿಟ್ಟಿವೆ. 4ನೇ ಟೆಸ್ಟ್ ಮುಕ್ತಾಯದೊಂದಿಗೆ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರೆ ಬೀಳಲಿದೆ.

ಗಾಯಕ್ಕೀಡಾಗಿರುವ ಭಾರತದ ಆಟಗಾರರು

ಗಾಯಕ್ಕೀಡಾಗಿರುವ ಭಾರತದ ಆಟಗಾರರು

* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ರಿಷಭ್ ಪಂತ್, ಮೊಣಕೈಗೆ ಗಾಯ, ತಂಡದಿಂದ ಹೊರ ಬೀಳುವ ಭೀತಿ
* ಹನುಮ ವಿಹಾರಿ, ಹ್ಯಾಮ್‌ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್‌ಪ್ರೀತ್‌ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ಗಾಯದ ಭೀತಿ

Story first published: Wednesday, January 13, 2021, 9:50 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X