ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!

Australia vs India: Mohammad Shami has a hole in his left shoe

ಅಡಿಲೇಡ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ಆತಿಥೇಯರ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯ (ಪಿಂಕ್‌ಬಾಲ್‌ ಟೆಸ್ಟ್) ಆಡುತ್ತಿದೆ. ಎರಡೂ ತಂಡಗಳು ಮೊದಲನೇ ಇನ್ನಿಂಗ್ಸ್‌ ಮುಗಿಸಿದ್ದು, ದ್ವಿತೀಯ ಇನ್ನಿಂಗ್ಸ್‌ ಆಡುತ್ತಿವೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 53 ರನ್‌ ಮುನ್ನಡೆ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಹೆಚ್ಚಿನ ರನ್ ಬಾರಿಸಿ ಪಂದ್ಯ ಗೆದ್ದುಕೊಳ್ಳುವತ್ತ ವಿರಾಟ್ ಕೊಹ್ಲಿ ಪಡೆ ಕಣ್ಣಿಟ್ಟಿದೆ.

ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!

ಎರಡನೇ ದಿನದಾಟವಾದ ಶುಕ್ರವಾರ (ಡಿಸೆಂಬರ್ 18) ಭಾರತದ ವೇಗಿ ಮೊಹಮ್ಮದ್ ಶಮಿ ಪ್ರಮುಖ ಕಾರಣಕ್ಕಾಗಿ ಗಮನ ಸೆಳೆದಿದ್ದರು. ಯಾಕೆಂದರೆ ಶಮಿ ತೂತಾದ ಶೂ ಧರಿಸಿ ಮೈದಾನಕ್ಕಿಳಿದಿದ್ದು ಕಂಡು ಬಂದಿತ್ತು.

ವಿರಾಟ್ ಕೊಹ್ಲಿ ರನ್‌ಔಟ್‌ಗೆ ನಿರಾಸೆ ವ್ಯಕ್ತಪಡಿಸಿದ ಶೇನ್‌ವಾರ್ನ್ವಿರಾಟ್ ಕೊಹ್ಲಿ ರನ್‌ಔಟ್‌ಗೆ ನಿರಾಸೆ ವ್ಯಕ್ತಪಡಿಸಿದ ಶೇನ್‌ವಾರ್ನ್

ಈ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದಿಷ್ಟು ಮಂದಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅನ್ನು ಟೀಕಿಸತೊಡಗಿದ್ದಾರೆ.

ಶಮಿಯ ಎಡ ಶೂನಲ್ಲಿ ತೂತು

ಶಮಿಯ ಎಡ ಶೂನಲ್ಲಿ ತೂತು

ಶುಕ್ರವಾರದ ಪಂದ್ಯದ ವೇಳೆ ಶಮಿ ಆಡುತ್ತಿದ್ದಾಗ ಅವರ ಎಡಗಾಲಿನ ಶೂ ತೂತಾಗಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಎಡಗಾಲಿನ ಹೆಬ್ಬೆರಳಿನ ಭಾಗದಲ್ಲಿ ಬೆರಳು ಫ್ರೀ ಆಗುವಂತೆ ಶಮಿ ತೂತು ಮಾಡಿಕೊಂಡಿದ್ದರು. ಪ್ರಮುಖ ಪಂದ್ಯದ ವೇಳೆ ಶಮಿ ತೂತಾದ ಶೂ ಧರಿಸಿದ್ದು ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡಾಗಿದೆ. ಶಮಿ ಸ್ಟೈಲ್ ಕಡೆ ಗಮನ ಕೊಡದೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಕಡೆ ಗಮನ ಕೊಟ್ಟಿದ್ದಾರೆ, ಸರಳತೆ ಮೆರೆದಿದ್ದಾರೆ ಎಂದು ಕೆಲವರು ಶಮಿ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಹಿಂದಿದೆ ಕುತೂಹಲಕಾರಿ ಕಾರಣ

ಹಿಂದಿದೆ ಕುತೂಹಲಕಾರಿ ಕಾರಣ

ಕ್ರಿಕೆಟಿಗರು ಮುಖ್ಯವಾಗಿ ವೇಗದ ಬೌಲರ್‌ಗಳು ತೂತಾದ ಶೂ ಧರಿಸಿ ಮೈದಾನಕ್ಕಿಳಿದಿದ್ದು ಇದೇ ಮೊದಲಲ್ಲ. ಹಿಂದೆಯೂ ಒಂದಿಷ್ಟು ಸಾರಿ ಇಂಥ ದೃಶ್ಯ ಕಾಣಸಿಕ್ಕಿದೆ. ಇದಕ್ಕೊಂದು ಕುತೂಹಲಕಾರಿ ಕಾರಣವಿದೆ. ವೇಗಿ ಬೌಲರ್ ಬೌಲಿಂಗ್ ಮಾಡುವಾಗ ಲ್ಯಾಂಡ್‌ ಆಗುವಾಗ ಗಡುಸಾದ ಶೂವಿನ ಮುಂಭಾಗ ಹೆಬ್ಬೆರಳಿಗೆ ಒತ್ತಿ ನೋವಾಗಲಾರಂಭಿಸುತ್ತದೆ. ಹೀಗಾಗಿ ಆ ಭಾಗದಲ್ಲಿ ತೂತು ಮಾಡಿ ಬೆರಳು ಫ್ರೀ ಆಗುವಂತೆ ಮಾಡಿ ಕೆಲ ಆಟಗಾರರು ಆಡುತ್ತಾರೆ.

ಹಳೆ ವಿಧಾನವಿದು

ಹಳೆ ವಿಧಾನವಿದು

ಶಮಿ ಚರ್ಚೆಗೀಡಾಗಿದ್ದಕ್ಕೂ ಕಾರಣವಿದೆ. ಯಾಕೆಂದರೆ ತೀರಾ ಇತ್ತೀಚೆಗೆ ಇಂಥ ದೃಶ್ಯ ನೋಡಿದವರು ಕಡಿಮೆ. ಕೊಂಚ ಹಿಂದೆ ಕ್ರಿಕೆಟ್ ದಿನಗಳಲ್ಲಿ ಈ ವಿಧಾನ ಬಳಸಿ ಕ್ರಿಕೆಟಿಗರು ಮೈದಾನಕ್ಕಿಳಿಯುತ್ತಿದ್ದರು. ಆದರೆ ಇತ್ತೀಚೆಗೆ ಆಟಗಾರರು ಈ ವಿಧಾನ ಬಳಸೋದು ಕಡಿಮೆ. ಆದರೆ ಶೂನ ಬೆರಳಿನ ಭಾಗ ತೂತು ಮಾಡಿದರೆ ಬೆರಳು ನೋವಾಗೋದು ತಪ್ಪುತ್ತದೆ. ಈ ಕಾರಣಕ್ಕಾಗಿ ಶಮಿ ಹಳೆ ವಿಧಾನದ ಮೊರೆ ಹೋಗಿದ್ದಾರೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್

ಪಂದ್ಯದ ಸಂಕ್ಷಿಪ್ತ ಸ್ಕೋರ್

ಮೊದಲ ಇನ್ನಿಂಗ್ಸ್‌ನಲ್ಲಿ ಶಮಿ 17 ಓವರ್‌ ಎಸೆದಿದ್ದರಾದರೂ ಅವರಿಗೆ ಒಂದೂ ವಿಕೆಟ್ ಲಭಿಸಿರಲಿಲ್ಲ. ಆದರೆ ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ 3, ಜಸ್‌ಪ್ರೀತ್‌ ಬೂಮ್ರಾ 2, ಆರ್‌ ಅಶ್ವಿನ್ 4 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ರನ್ ಬಾರಿಸಿದ್ದರೆ, ಆಸ್ಟ್ರೇಲಿಯಾ 72.1 ಓವರ್‌ಗೆ 191 ರನ್ ಬಾರಿಸಿತ್ತು.

Story first published: Friday, December 18, 2020, 17:49 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X