ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವಿರುದ್ಧ ಭಾರತಕ್ಕೆ ಜಯ, ಸಚಿನ್, ಸೆಹ್ವಾಗ್ ಟ್ವೀಟ್ ವಿಶ್

ವಿಶ್ ಮಾಡಿದ ದಿಗ್ಗಜರು..! | Oneindia Kannada
Australia Vs India: Sachin Tendulkar, VVS Laxman lead in wishing Team India on Adelaide Test triumph

ಅಡಿಲೇಡ್, ಡಿಸೆಂಬರ್ 10 : ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 31ರನ್ ಗಳ ಅಂತರದ ಜಯ ದಾಖಲಿಸಿದೆ.

ಸರಿ ಸುಮಾರು 15 ವರ್ಷಗಳ ಬಳಿಕ ಅಡಿಲೇಡ್ ನಲ್ಲಿ ಟೀಂ ಇಂಡಿಯಾವು ವಿಜಯೋತ್ಸವ ಆಚರಿಸಿದೆ. 2003ರಲ್ಲಿ ಸೌರವ್ ಗಂಗೂಲಿ ನೇತೃತ್ವದ ತಂಡ ಗೆಲುವು ಸಾಧಿಸಿತ್ತು.

323ರನ್ ಚೇಸ್ ಮಾಡಿದ ಆಸ್ಟ್ರೇಲಿಯಾವನ್ನು 291ಕ್ಕೆ ನಿಯಂತ್ರಿಸುವಲ್ಲಿ ಭಾರತೀಯ ಬೌಲರ್ ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಸರಣಿಯಲ್ಲಿ 1-0ರಲ್ಲಿ ಕೊಹ್ಲಿ ಪಡೆ ಮುನ್ನಡೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಟ್‌ ಜಯ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಟ್‌ ಜಯ

104/4 ಸ್ಕೋರಿನಿಂದ ಇನ್ನಿಂಗ್ಸ್ ಆರಂಭಿಸಿದ ಅಸ್ಟ್ರೇಲಿಯಾ ಕೂಡಾ ಪಂದ್ಯವನ್ನು ಸುಲಭವಾಗಿ ಕಳೆದುಕೊಳ್ಳಲಿಲ್ಲ. 184ರನ್ ಸೇರಿಸಿದ್ದಲ್ಲದೆ, ಆಸೀಸ್ ಬಾಲಂಗೋಚಿಗಳು, ಭಾರತದ ಬೌಲರ್ ಗಳನ್ನು ಕೆಲ ಕಾಲ ಕಾಡಿದರು.

ಟಿಮ್ ಪೈನ್ 41, ನಾಥನ್ ಲಯಾನ್ 38 ಅಜೇಯ, ಪ್ಯಾಟ್ ಕುಮಿನ್ಸ್ 28, ಮಿಚೆಲ್ ಸ್ಟಾರ್ಕ್ 28ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಆದರೆ, ಟೀಂ ಇಂಡಿಯಾದ ಬೌಲರ್ ಗಳಾದ ಜಸ್ ಪ್ರೀತ್ ಬೂಮ್ರಾ 3/68, ಆರ್ ಅಶ್ವಿನ್ 3/92 ಹಾಗೂ ಮೊಹಮ್ಮದ್ ಶಮಿ 3/65 ಗಳಿಸಿ ಭಾರತಕ್ಕೆ ಜಯ ತಂದಿತ್ತರು.

ಚೇತೇಶ್ವರ್ ಪೂಜಾರಾ 123 ಹಾಗೂ 71ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರು. ಅರ್ಹ ಜಯ ದಾಖಲಿಸಿದ ಭಾರತವನ್ನು ಮಾಜಿ ಕ್ರಿಕೆಟರ್ ಗಳು, ಕಾಮೆಂಟೆಟರ್ ಗಳು ಹಾಡಿ ಹೊಗಳಿದ್ದಾರೆ.

3ನೇ ಕ್ರಮಾಂಕದ ಶಕ್ತಿಯನ್ನು ಹೊಗಳಿದ ಬಿಸಿಸಿಐ

2003ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ರಾಹುಲ್ ದ್ರಾವಿಡ್ ಅವರು ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು. 2018ರಲ್ಲಿ ನಂ.3 ಚೇತೇಶ್ವರ್ ಪೂಜಾರಾ ಅವರು ಪಂದ್ಯಶ್ರೇಷ್ಠರಾಗಿದ್ದಾರೆ. ಇತಿಹಾಸ ಮರುಕಳಿಸುತ್ತದೆ

ಟೀಂ ಇಂಡಿಯಾಕ್ಕೆ ಇದು ಶುಭಾರಂಭ : ಸಚಿನ್

ಸರಣಿ ಆರಂಭ ಮಾಡಲು ಇದಕ್ಕಿಂತ ಉತ್ತಮ ಮಾರ್ಗವಿದೆಯೇ? ಇದು ಭಾರತಕ್ಕೆ ಶುಭಾರಂಭ. ಚೇತೇಶ್ವರ್ ಪೂಜಾರಾ ಎರಡು ಇನ್ನಿಂಗ್ಸ್ ಗಳಲ್ಲೂ ಉತ್ತಮ ಬ್ಯಾಟಿಂಗ್, ಅಜಿಂಕ್ಯ ರಹಾನೆ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಕೊಡುಗೆ ನೀಡಿದರು. ನಾಲ್ವರು ಬೌಲರ್ ಗಳ ಕೊಡುಗೆ ಮರೆಯುವಂತಿಲ್ಲ. 2003ರ ಸ್ಮರಣೆ ತಂದುಕೊಟ್ಟಿದೆ ಎಂದ ಸಚಿನ್ ತೆಂಡೂಲ್ಕರ್.

ಆಸೀಸ್ ಹೋರಾಟವನ್ನು ಮೆಚ್ಚಲೇಬೇಕು

ಆಸ್ಟ್ರೇಲಿಯಾದ ಬಾಲಂಗೋಚಿಗಳು ಆಡಿದ ರೀತಿಯನ್ನು ನಾವು ಶ್ಲಾಘಿಸಬೇಕು. ನಮ್ಮ ಬೌಲರ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರು. ಇದೇ ರೀತಿ ಆಟವನ್ನು ಪರ್ತ್ ನಲ್ಲೂ ಮುಂದುವರೆಸಲಿ ಎಂದು ಬಯಸುತ್ತೇನೆ.

ಟೆಸ್ಟ್ ಕ್ರಿಕೆಟ್ ಬೆಸ್ಟ್ ಕ್ರಿಕೆಟ್

41/4ರ ಪ್ರಥಮ ಇನ್ನಿಂಗ್ಸ್ ಪರಿಸ್ಥಿತಿಯಿಂದ ಗೆಲುವಿನ ಮಟ್ಟಕ್ಕೇರಿದ್ದು, ಪೂಜಾರಾ ಬ್ಯಾಟಿಂಗ್, ಬೌಲರ್ ಗಳ ಪ್ರದರ್ಶನ ಆಶಾದಾಯಕವಾಗಿದೆ ಎಂದ ವೀರೇಂದ್ರ ಸೆಹ್ವಾಗ್.

Story first published: Monday, December 10, 2018, 14:35 [IST]
Other articles published on Dec 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X