ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೋ-ಆಸಿಸ್ ಸರಣಿ: ಸ್ಟೀವ್ ಸ್ಮಿತ್ ಪಡೆಗೆ ಎಚ್ಚರಿಕೆ ನೀಡಿದ ಮಾಜಿ ಆಸ್ಟ್ರೇಲಿಯಾ ನಾಯಕ

Australia vs India: Sledging will not work against Team india, says Steve Waugh

ಐಪಿಎಲ್ ಮುಗಿದ ಕೆಲವೇ ಸಮಯಗಳ ಅಂತರದಲ್ಲಿ ಬಹು ನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಹಾಗೂ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗ ಸ್ಟೀವ್ ವಾ ಸಲಹೆಯ ರೂಪದಲ್ಲಿ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

3 ಏಕದಿನ 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪೈಪೋಟಿಯನ್ನು ನಡೆಸಲಿದೆ. ಇದರಲ್ಲಿ ಪ್ರಮುಖವಾಗಿ ಟೆಸ್ಟ್ ಸರಿಯಲ್ಲಿ ಆಸ್ಟ್ರೇಲಿಯಾ ಪದಗಳ ಯುದ್ಧದ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರೆ ಅದು ಆಸ್ಟ್ರೇಲಿಯಾಗೆ ತಿರುಗುಬಾಣವಾಗಲಿದೆ ಎಂದಿದ್ದಾರೆ ಸ್ಟೀವ್ ವಾ.

ಹೆಚ್ಚು ಕಾಲ ಬಯೋ ಬಬಲ್ಸ್‌ನಲ್ಲಿ ಉಳಿದುಕೊಳ್ಳೋದು ಕಷ್ಟ: ಕೊಹ್ಲಿಹೆಚ್ಚು ಕಾಲ ಬಯೋ ಬಬಲ್ಸ್‌ನಲ್ಲಿ ಉಳಿದುಕೊಳ್ಳೋದು ಕಷ್ಟ: ಕೊಹ್ಲಿ

ಆಸ್ಟ್ರೇಲಿಯಾ ತಂಡ ಎದುರಾಳಿಗಳ ವಿರುದ್ಧ ಸ್ಲಡ್ಜಿಂಗ್ ಮಾಡಿ ಸಾಕಷ್ಟು ಯಶಸ್ಸನ್ನು ಸಾಧಿಸಿದೆ. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿರುದ್ಧ ಈ ಪ್ರಯತ್ನವನ್ನು ಮಾಡುವುದು ಬೇಡ ಎಂದಿದ್ದಾರೆ ಸ್ಟೀವ್ ವಾ. ಸ್ಲೆಡ್ಜಿಂಗ್ ವಿರಾಟ್ ಪಡೆಯನ್ನು ಹಿಮ್ಮೆಟ್ಟಿಸಲಾರದು. ಶ್ರೇಷ್ಠ ಆಟಗಾರರ ಮುಂದೆ ಅದು ನಡೆಯಲಾರದು. ಅದನ್ನು ಕೈಬಿಡುವುದು ಒಳ್ಳೆಯದು ಎಂದು ಸ್ಟೀವ್ ವಾ ಆಸಿಸ್ ಆಟಗಾರರಿಗೆ ನೇರವಾದ ಸಲಹೆಯನ್ನು ನೀಡಿದ್ದಾರೆ.

ಈ ರೀತಿಯ ಪ್ರಯತ್ನಗಳಿಂದ ಅವರು ಇನ್ನಷ್ಟು ಪ್ರೇರಣೆಯನ್ನು ಪಡೆಯುತ್ತಾರೆ. ಈ ಮೂಲಕ ಮತ್ತಷ್ಟು ರನ್ ಗಳಿಸಲು ಎದುರಾಳಿಗಳಿಗೆ ಸಹಾಯವಾಗುತ್ತದೆ. ಹಾಗಾಗಿ ನೀವು ಅವರಿಗೆ ಏನನ್ನೂ ಹೇಳದೆ ಸುಮ್ಮನಿದ್ದರೆ ಅವರಷ್ಟಕ್ಕೇ ಆಡಲು ಬಿಟ್ಟರೆ ಉತ್ತಮ ಎಂಬುದನ್ನು ಸ್ಟೀವ್ ವಾ ಹೇಳಿದ್ದಾರೆ. 2018-19ರ ಟೆಸ್ಟ್ ಸರಣಿಯನ್ನು ಭಾರತ ವಶಪಡಿಸಿಕೊಂಡು ಇತಿಹಾಸವನ್ನು ನಿರ್ಮಿಸಿತ್ತು

ನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾ

ಇನ್ನು ಇದೇ ಸಂದರ್ಭದಲ್ಲಿ ಸ್ಟೀವ್ ವಾ ವಿರಾಟ್ ಕೊಹ್ಲಿಯನ್ನು ಪ್ರಶಂಸಿಸಿದ್ದಾರೆ. ವಿರಾಟ್ ಕೊಹ್ಲಿ ಸಾಕಷ್ಟು ಪ್ರಬುದ್ಧರಾಗಿದ್ದಾರೆ ಎಂದಿರುವ ಸ್ಟೀವ್ ವಾ ನಂಬರ್ 1 ಶ್ರೇಯಾಂಕದಲ್ಲಿರುವ ಭಾರತವನ್ನು ವಿದೇಶಿ ನೆಲದಲ್ಲೂ ಶ್ರೇಷ್ಠ ಪ್ರದರ್ಶನ ನೀಡುವುದನ್ನು ವಿರಾಟ್ ಬಯಸುತ್ತಾರೆ. ಈ ಮೂಲಕ ಮೊದಲ ಸ್ಥಾನಕ್ಕೆ ಇನ್ನಷ್ಟು ನ್ಯಾಯ ನೀಡಲು ಬಯಸಿದ್ದಾರೆ. ಭಾರತ ತಂಡ ಹಿಂದೆಂದೂ ಏರದ ಎತ್ತರಕ್ಕೆ ತಂಡವನ್ನು ಏರಿಸಿದ್ದಾರೆ ಎಂದು ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ.

Story first published: Friday, November 6, 2020, 15:43 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X