ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿ

Australia vs India: Team India to don new jersey in the Test series

ಸಿಡ್ನಿ: ಭಾರತ-ಆಸ್ಟ್ರೇಲಿಯಾ ನಡುವಿನ ನಿಯಮಿತ ಓವರ್‌ಗಳ ಕ್ರಿಕೆಟ್ ಮುಕ್ತಾಯಗೊಂಡಿದೆ. ಮುಂದೆ ಸಾಂಪ್ರದಾಯಿಕ ಕ್ರಿಕೆಟ್‌ ಮಾದರಿಯಾದ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ನೂತನ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಭಾರತ ತಂಡಕ್ಕೆ ಹೊಸ ವಿನ್ಯಾಸದ ಕಿಟ್ ನೀಡಿದೆ.

ನಟರಾಜನ್ ತುಂಬಾ ವಿಶ್ವಾಸದಿಂದ ಬೌಲಿಂಗ್ ಮಾಡಿದ್ದಾರೆ: ಖಲೀಲ್ ಅಹ್ಮದ್ನಟರಾಜನ್ ತುಂಬಾ ವಿಶ್ವಾಸದಿಂದ ಬೌಲಿಂಗ್ ಮಾಡಿದ್ದಾರೆ: ಖಲೀಲ್ ಅಹ್ಮದ್

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ನಾಲ್ಕು ಪಂದ್ಯಗಳಲ್ಲಿ ಒಂದು ಡೇ-ನೈಟ್ ಟೆಸ್ಟ್ ಕೂಡ ಸೇರಿದೆ. ಬಹು ನಿರೀಕ್ಷಿತ ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ.

ಭಾರತದ ನೂತನ ಟೆಸ್ಟ್ ಜೆರ್ಸಿಯಲ್ಲಿ ಪ್ರಮುಖ ಪ್ರಾಯೋಜಕರ ಹೆಸರು/ಲೋಗೋ ಶರ್ಟ್ ಮಧ್ಯದಲ್ಲಿರಲಿದೆ ಮತ್ತು ಎದ್ದು ಕಾಣಲಿದೆ. ಈ ಮೊದಲು ಪ್ರಧಾನ ಪ್ರಾಯೋಜಕರ ಲೋಗೋ ಜೆರ್ಸಿಯ ಬಲ ಮೇಲ್ಭಾಗದಲ್ಲಿತ್ತು. ವಿದ್ಯಾಭ್ಯಾಸ ಸಂಸ್ಥೆ ಬೈಜೂಸ್ ಸದ್ಯ ಟೀಮ್ ಇಂಡಿಯಾದ ಪ್ರಧಾನ ಪ್ರಾಯೋಜಕ. ಇನ್ನು ಕಿಟ್ ಡಿಸೈನರ್ ಸ್ಥಾನವನ್ನು ಎಂಪಿಎಲ್ ಪಡೆದುಕೊಂಡಿದೆ.

ಬಿಗ್‌ಬ್ಯಾಷ್‌ಲೀಗ್ ಆರಂಭಕ್ಕೆ ಕ್ಷಣಗಣನೆ: ಆಸಿಸ್ ಲೀಗ್‌ನ ಸಂಪೂರ್ಣ ಮಾಹಿತಿಬಿಗ್‌ಬ್ಯಾಷ್‌ಲೀಗ್ ಆರಂಭಕ್ಕೆ ಕ್ಷಣಗಣನೆ: ಆಸಿಸ್ ಲೀಗ್‌ನ ಸಂಪೂರ್ಣ ಮಾಹಿತಿ

ಭಾರತ 'ಎ' ಮತ್ತು ಆಸ್ಟ್ರೇಲಿಯಾ 'ಎ' ನಡುವಿನ ಮೊದಲ ಅಭ್ಯಾಸ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ. ಎರಡನೇ ಅಭ್ಯಾಸ ಪಂದ್ಯ ಡಿಸೆಂಬರ್ 11ರಂದು ನಡೆಯಲಿದೆ. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ರಜೆ ಪಡೆದುಕೊಳ್ಳಲಿದ್ದಾರೆ. ತಂದೆಯಾಗುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಪಿತೃತ್ವ ರಜೆ ಮಂಜೂರು ಮಾಡಿಕೊಂಡಿದ್ದಾರೆ.

Story first published: Thursday, December 10, 2020, 14:48 [IST]
Other articles published on Dec 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X