ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಅದಾನಿ ವಿರುದ್ಧ ಇಬ್ಬರಿಂದ ಪ್ರತಿಭಟನೆ-ವಿಡಿಯೋ

Australia vs India: Two protesters barge into ground holding ‘No $1B Adani Loan’ signs during first ODI

ಸಿಡ್ನಿ: ಭಾರತ vs ಆಸ್ಟ್ರೇಲಿಯಾ ಇಡುವೆ ಕುತೂಹಲಕಾರಿ ಏಕದಿನ ಸರಣಿ ನಡೆಯುತ್ತಿದೆ. ಸುದೀರ್ಘ ಪ್ರವಾಸ ಸರಣಿಗಾಗಿ ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾದಲ್ಲಿದೆ. ಇತ್ತಂಡಗಳ ಮೊದಲನೇ ಏಕದಿನ ಪಂದ್ಯದ ವೇಳೆ ಇಬ್ಬರು ಪ್ರತಿಭಟನಾಕಾರರು ಭಾರತದ ಉದ್ಯಮಿ ಗೌತಮ್ ಶಾಂತಿಲಾಲ್ ಅದಾನಿ ವಿರುದ್ಧ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ. ಆ್ಯರನ್ ಫಿಂಚ್ ಬಳಗ ಬ್ಯಾಟಿಂಗ್ ನಡೆಸುತ್ತಿದ್ದಾಗ ಪ್ರತಿಭಟನಾಕಾರರು ಮೈದಾನದೊಳಕ್ಕೆ ಪ್ರವೇಶಿಸಿದ್ದರು.

7 ವರ್ಷಗಳ ನಿಷೇಧದ ಬಳಿಕ ಮತ್ತೆ ಮೈದಾನಕ್ಕಿಳಿಯಲು ಶ್ರೀಶಾಂತ್ ಸಜ್ಜು7 ವರ್ಷಗಳ ನಿಷೇಧದ ಬಳಿಕ ಮತ್ತೆ ಮೈದಾನಕ್ಕಿಳಿಯಲು ಶ್ರೀಶಾಂತ್ ಸಜ್ಜು

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 27ರ ಶುಕ್ರವಾರ ನಡೆದ ಏಕದಿನ ಪಂದ್ಯದ ವೇಳೆ ಮೈದಾನಕ್ಕೇ ಪ್ರವೇಶಿಸಿದ ಇಬ್ಬರು ಪ್ರತಿಭಟನಾಕಾರರು. 'ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ಬೇಡಿ' ಎಂದು ಘೋಷಣೆ ಬೋರ್ಡ್‌ಗಳನ್ನು ಪ್ರದರ್ಶಿಸಿದರು.

ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!

ಪ್ರತಿಭಟನಾಕಾರರು ಧರಿಸಿದ್ದ ಜೆರ್ಸಿಯ ಮೇಲೆ 'ಅದಾನಿಯನ್ನು ತಡೆಯಿರಿ. ಕಲ್ಲಿದ್ದಲು ಗಣಿಗಾರಿಕೆ ನಿಲ್ಲಿಸಿ' ಎಂಬ ಘೋಷಣೆಗಳಿದ್ದವು. ಆಸ್ಟ್ರೇಲಿಯಾದ ಬೇರೆ ಭಾಗಗಳಲ್ಲೂ ಅದಾನಿ ವಿರುದ್ಧ ಪ್ರತಿಭಟನೆಗಳು ನಡೆದಿದ್ದು ಕಂಡುಬಂದಿದೆ.

ಕಲ್ಲಿದ್ದಲು ಗಣಿ ವಿರುದ್ಧ ಪ್ರತಿಭಟನೆ

ಕಲ್ಲಿದ್ದಲು ಗಣಿ ವಿರುದ್ಧ ಪ್ರತಿಭಟನೆ

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸುವ ಯೋಜನೆಯ ವಿರುದ್ಧ ಹೀಗೆ ಪ್ರತಿಭಟಿಸಲಾಗಿದೆ. ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವಿಳಂಬ ಮಾಡುವಂತೆ ಅಥವಾ ಅಡ್ಡಿಪಡಿಸುವಂತೆ ಜರ್ಮನಿಯ ಪ್ರಮುಖ ಇಂಜಿನಿಯರಿಂಗ್ ಕಂಪನಿಯಾದ ಸಿಮನ್ಸ್‌ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ.

ಏಕದಿನ ಪಂದ್ಯಕ್ಕೆ ಅಡ್ಡಿ

ಏಕದಿನ ಪಂದ್ಯಕ್ಕೆ ಅಡ್ಡಿ

ಪಂದ್ಯ ನಡೆಯುತ್ತಿದ್ದಾಗಲೇ ಪ್ರತಿಭಟನಾಕಾರರು ಮೈದಾನಕ್ಕೆ ಪ್ರವೇಶಿಸಿ ಅಡ್ಡಿಪಡಿಸಿದರು. ಮೈದಾನಕ್ಕೆ ನುಗ್ಗಿದ ಪ್ರಕರಣಗಳಲ್ಲಿ ಈ ಘಟನೆ ವಿಭಿನ್ನವೆಂಬಂತೆ ದಾಖಲಾಗಿದೆ. ಭದ್ರತಾ ಸಿಬ್ಬಂದಿಗಳು ಮೈದಾನಕ್ಕೆ ಬಂದು ಪ್ರತಿಭಟನಾಕಾರರನ್ನು ಹೊರ ತೆಗೆದುಕೊಂಡು ಹೋಗಲು 30-35 ಸೆಕೆಂಡ್‌ಗಳು ಹಿಡಿದವು.

ಸಾಲ ನೀಡಬೇಡಿ ಸಾಲು

ಸಾಲ ನೀಡಬೇಡಿ ಸಾಲು

ಪ್ರತಿಭಟನಾಕರರು ಹಿಡಿದಿದ್ದ ಪ್ಲೇಕಾರ್ಡ್‌ಗಳಲ್ಲಿ 'State Bank of India, NO 1 Billion Adani loan' ಎಂದು ಬರೆಯಲಾಗಿತ್ತು. ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ನೀಡಬಾರದು ಎಂದು ಅದಾನಿ ವಿರೋಧಿ ಪರಿಸರವಾದಿಗಳು ಬರೆದಿದ್ದರು.

ಪರಿಸರಕ್ಕೆ ತೀವ್ರ ಹಾನಿ

ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಅದಾನಿ ಸಮೂಹದ ಕಾರ್ಮಿಚೆಲ್ ಗಣಿಗೆ 20 ದಶಲಕ್ಷ ಡಾಲರ್ ಮೌಲ್ಯದ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವ ಗುತ್ತಿಗೆಯಿಂದ ಹಿಂದೆ ಸರಿಯುವಂತೆ ಪ್ರಮುಖ ಇಂಜಿನಿಯರಿಂಗ್ ಸಿಮನ್ಸ್‌ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ. ಗಣಿಗಾರಿಕೆಯಿಂದ ವಾರ್ಷಿಕವಾಗಿ 8 ರಿಂದ 10 ಮಿಲಿಯನ್ ಟನ್ ಗಳಷ್ಟು ಕಲಿದ್ದಲು ಉತ್ಪಾದನೆ ಹಾಗೂ ಇದರಿಂದ ಹೊರ ಹೊಮ್ಮುವ ಇಂಗಾಲದ ಪ್ರಮಾಣದ ಬಗ್ಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Story first published: Friday, November 27, 2020, 13:47 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X