ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

Australia Vs Pakistan, Day-Night Test: hosts clean sweep series

ಅಡಿಲೇಡ್: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಎರಡನೇ ಟೆಸ್ಟ್‌ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಅಡಿಲೇಡ್‌ ಓವಲ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾಗೆ ಇನ್ನಿಂಗ್ಸ್‌ ಅಂತರದಿಂದ ಶರಣಾಗಿದೆ. ಈ ಮೂಲಕ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ವೈಟ್‌ವಾಶ್ ಅವಮಾನಕ್ಕೆ ಒಳಗಾಗಿದೆ.

ಆಸ್ಟ್ರೇಲಿಯಾದ ಸ್ಪಿನ್ನರ್ ನಥನ್ ಲೇನ್ ಅವರು ಮತ್ತೊಂದು ಐದು ವಿಕೆಟ್‌ಗಳ ಗೊಂಚಲು ಪಡೆದು ಪಾಕಿಸ್ತಾನದ ಬ್ಯಾಟಿಂಗ್‌ ವಿಭಾಗವನ್ನು ಕಾಡಿದರು. ಅಹರ್ನಿಶಿಯಾಗಿ ನಡೆದ ಈ ಪಂದ್ಯದಲ್ಲಿ 48ರನ್ ಹಾಗೂ ಇನ್ನಿಂಗ್ಸ್‌ ಅಂತರದಿಂದ ಪಾಕಿಸ್ತಾನ ಸೋತು ಆಸ್ಟ್ರೇಲಿಯಾಗೆ ಸರಣಿ ಒಪ್ಪಿಸಿದೆ.

ಆಸ್ಟ್ರೇಲಿಯಾ vs ಪಾಕಿಸ್ತಾನ: ಅದ್ಭುತ ಕ್ಯಾಚ್‌ ಪಡೆದ ಸ್ಟೀವ್ ಸ್ಮಿತ್-ವೀಡಿಯೋಆಸ್ಟ್ರೇಲಿಯಾ vs ಪಾಕಿಸ್ತಾನ: ಅದ್ಭುತ ಕ್ಯಾಚ್‌ ಪಡೆದ ಸ್ಟೀವ್ ಸ್ಮಿತ್-ವೀಡಿಯೋ

ಟಾಸ್‌ಗೆದ್ದ ಅತಿಥೇಯ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಅಜೇಯ ತ್ರಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 589ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ಡೇವಿಡ್ ವಾರ್ನರ್‌ಗೆ ಉತ್ತಮ ಸಾಥ್ ನೀಡಿದ್ರು. ಮಾರ್ನಸ್ 162ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಪಾಕಿಸ್ತಾನದ ಪರ ಮೂರೂ ವಿಕೆಟ್‌ಗಳನ್ನು ಶಾಹಿನ್ ಅಫ್ರಿದಿ ಪಡೆದುಕೊಂಡರು.

ಇದನ್ನು ಬೆನ್ನತ್ತಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 302ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಫಾಲೋಆನ್‌ಗೆ ತುತ್ತಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಪರವಾಗಿ ಬಾಬರ್ ಅಜಮ್ 97 ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ, ಯಾಸಿರ್ ಶಾ 113 ರನ್‌ಗಳಿಸಿದರು.

ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್

ಫಾಲೋಆನ್‌ಗೆ ತುತ್ತಾದ ಪಾಕಿಸ್ತಾನ ಎರಡನೇ ಇನ್ನಿಂಗ್ಸನ್ನು ಮತ್ತೆ ಆರಂಭಿಸಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಸಮರ್ಥ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಶಾನ್ ಮಸೂದ್ ಹಾಗೂ ಅಸದ್ ಶಾಫಿಕ್ ತಲಾ ಅರ್ಧ ಶತಕವನ್ನು ದಾಖಲಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಪ್ರತಿರೋಧವನ್ನು ಒಡ್ಡಲು ಸಾಧ್ಯವಾಗಲೇ ಇಲ್ಲ.

ಆಸ್ಟ್ರೇಲಿಯಾ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದು ಮಿಂಚಿದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಥನ್ ಲೇನ್ 5 ವಿಕೆಟ್‌ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಲೈನ್‌ಅಪ್‌ಗೆ ಇತಿಶ್ರೀ ಹಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 239 ಗೆ ಆಲ್‌ಔಟ್‌ ಆಗಿ ಇನ್ನಿಂಗ್ಸ್‌ ಹಾಗೂ 48 ರನ್‌ಗಳ ಅಂತರದಿಂದ ಶರಣಾಯಿತು.

Story first published: Monday, December 2, 2019, 17:41 [IST]
Other articles published on Dec 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X