ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ಗುಡ್‌ ಬಾಲ್ or ನೋ ಬಾಲ್?: ವಿವಾದ ಹುಟ್ಟುಹಾಕಿದ ವಿಡಿಯೋ!

Australia vs Pakistan - Legends question no-ball decision

ಬ್ರಿಸ್ಬೇನ್, ನವೆಂಬರ್ 22: ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರನ ಔಟ್ ನಿರ್ಧಾರ ವಿವಾದವನ್ನು ಹುಟ್ಟು ಹಾಕಿದೆ. ಪಂದ್ಯದ ವೇಳೆಯ ವಿಡಿಯೋ ವೀಕ್ಷಿಸಿರುವ ಆಸೀಸ್ ಮಾಜಿ ಕ್ರಿಕೆಟಿಗರು ಕೂಡ ಪಾಕ್ ಬ್ಯಾಟ್ಸ್‌ಮನ್‌ನ ಔಟ್ ನಿರ್ಧಾರವನ್ನು ಟೀಕಿಸಿದ್ದಾರೆ.

ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!

ಪಾಕಿಸ್ತಾನದ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್, ಪ್ಯಾಟ್ ಕಮಿನ್ಸ್ ಓವರ್‌ನಲ್ಲಿ ಔಟ್ ಆಗಿ 37 ರನ್ನಿಗೆ ನಿರ್ಗಮಿಸಿದರು. ಆದರೆ ಥರ್ಡ್ ಅಂಪೈರ್‌ ಪರಿಶೀಲನೆ ವೇಳೆ ಅಲ್ಲಿ ಕಾಣಿಸಿದ ವಿಡಿಯೋದಲ್ಲಿ ಕಮಿನ್ಸ್ ನೋ ಬಾಲ್ ಎಸೆದಿದ್ದು ಕಾಣಿಸಿತ್ತು. ಆದರೂ ರಿಝ್ವಾನ್ ಔಟ್ ಎಂದು ತೀರ್ಪೀಯಲಾಯಿತು. ಇದು ವಿವಾದವನ್ನು ಸೃಷ್ಠಿಸಿದೆ.

ಆಸ್ಟ್ರೇಲಿಯಾ vs ಪಾಕಿಸ್ತಾನ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
45880

ಪಾಕ್‌ ಇನ್ನಿಂಗ್ಸ್‌ನ 54.2ನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್ ಶಾರ್ಟ್ ಎಸೆತಕ್ಕೆ ರಿಝ್ವಾನ್ ಬ್ಯಾಟ್‌ ತಾಗಿದ ಚೆಂಡು ಆಸೀಸ್ ವಿಕೆಟ್ ಕೀಪರ್ ಟಿಮ್ ಪೈನೆ ಕೈ ಸೇರಿತ್ತು. ಆನ್ ಫೀಲ್ಡ್ ಅಂಪೈರ್ ಔಟ್ ನಿರ್ಧಾರ ಪರಿಶೀಲಿಸುವಂತೆ ಥರ್ಡ್ ಅಂಪೈರ್‌ಗೆ ಕರೆಕೊಟ್ಟರು. ಆದರೆ ಥರ್ಡ್ ಅಂಪೈರ್‌ ವಿಡಿಯೋ ಪರಿಶೀಲನೆ ಬಳಿಕವೂ ಇದನ್ನು ಔಟ್ ಎಂದೇ ತೀರ್ಪಿತ್ತರು.

ಅಸಲಿಗೆ ವಿಡಿಯೋದನ್ನು ಕಮಿನ್ಸ್ ಕಾಲು ನೋ ಬಾಲ್ ಗೆರೆಯನ್ನು ದಾಟಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಹೀಗಾಗಿ ಥರ್ಡ್ ಅಂಪೈರ್ ಬ್ಯಾಟ್ಸ್‌ಮನ್‌ಗೆ ಆಡಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ನೋ ಬಾಲ್ ಇದ್ದರೂ ಬ್ಯಾಟ್ಸ್‌ಮನ್ ಔಟ್ ಎನಿಸಿದ್ದು ಆಸೀಸ್ ಮಾಜಿ ದಂತೆಕತೆಗಳಿಗೂ ಸರಿ ಕಂಡಿಲ್ಲ. ಆಸೀಸ್ ಮಾಜಿ ನಾಯಕ ಅಲನ್ ಬಾರ್ಡರ್, ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಕೂಡ ಈ ಔಟ್ ನಿರ್ಧಾರವನ್ನು ಟೀಕಿಸಿದ್ದಾರೆ.

Story first published: Thursday, November 21, 2019, 19:38 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X