ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs WI 1st Test : ಮಾರ್ನಸ್ 204, ಸ್ಮಿತ್ 200, ಹೆಡ್ 99: ವಿಂಡೀಸ್ ವಿರುದ್ಧ ಆಸಿಸ್ ದಾಂಡಿಗರ ಅಬ್ಬರ

Australia vs West Indies: Marnus Labuschagne, Steve Smith double Century, day 2 Highlights

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಆಸಿಸ್ ಪಡೆ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೊದಲ ಹಾಗೂ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ದಾಂಡಿಗರು ನೀಡಿದ ಅಮೋಘ ಪ್ರದರ್ಶನದಿಂದಾಗಿ ಆಸಿಸ್ ಪಡೆ ಸುಸ್ಥಿತಿಯಲ್ಲಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರವಾಗಿ ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಅಮೋಘ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಸಂದರ್ಭದಲ್ಲಿ ಟ್ರೆವಿಸ್ ಹೆಡ್ ಕೇವಲ ಒಂದು ರನ್‌ನಿಂದ ಶತಕ ವಂಚಿತವಾಗಿ ನಿರಾಸೆ ಅನುಭವಿಸಿದ್ದಾರೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾಗೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಿರಾಸೆ ಮೂಡಿಸಿದ್ದರು. ಆದರೆ ಅದಾದ ಬಳಿಕ ವೆಸ್ಟ್ ಇಂಡೀಸ್ ಬೌಲಿಂಗ್ ವಿಭಾಗ ಅಕ್ಷರಶಃ ಬಸವಳಿಯುವಂತೆ ಮಾಡುವಲ್ಲಿ ಆಸಿಸ್ ಬ್ಯಾಟಿಂಗ್ ವಿಭಾಗ ಯಶಸ್ವಿಯಾಗಿದೆ.

ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್

ದ್ವಿಶತಕ ಸಿಡಿಸಿದ ಮಾರ್ನಸ್, ಸ್ಮಿತ್

ದ್ವಿಶತಕ ಸಿಡಿಸಿದ ಮಾರ್ನಸ್, ಸ್ಮಿತ್

ಆಸ್ಟ್ರೇಲಿಯಾದ ಆಟಗಾರ ಮಾರ್ನಸ್ ಲ್ಯಾಬುಶೈನ್ ತಮ್ಮ ಅದ್ಭುತ ಪ್ರದರ್ಶನವನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುಂದುವರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಮೊದಲಿಗೆ ಉಸ್ಮಾನ್ ಖವಾಜಾ ಜೊತೆಗೆ ಅದ್ಭುತ ಜೊತೆಯಾಟದಲ್ಲಿ ಭಾಗಿಯಾದರು. ಖವಾಜ 65 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ಬಳಿಕ ಸ್ಟೀವ್ ಸ್ಮಿತ್ ಅವರೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದ ಈ ಇಬ್ಬರು ಆಟಗಾರರು ಕೂಡ ದ್ವಿಶತಕವನ್ನು ಬಾರಿಸಿ ಮಿಂಚಿದ್ದಾರೆ. ಈ ಜೋಡಿ ಬರೊಬ್ಬರಿ 251 ರನ್‌ಗಳ ಜೊತೆಯಾಟವನ್ನು ನೀಡಿದರು. ಲ್ಯಾಬುಶೈನ್ 204 ರನ್‌ಗಳಿಸಿದರೆ ಸ್ಟೀವ್ ಸ್ಮಿತ್ 200 ರನ್‌ಗಳಿಸಿ ಅಜೇಯವಾಗುಳಿದರು.

ಶತಕದ ಅಂಚಿನಲ್ಲಿ ಎಡವಿದ ಹೆಡ್

ಶತಕದ ಅಂಚಿನಲ್ಲಿ ಎಡವಿದ ಹೆಡ್

ಇನ್ನು ಈ ಜೋಡಿ ಬೇರ್ಪಟ್ಟ ಬಳಿಕವೂ ವಿಂಡೀಸ್ ಬೌಲರ್‌ಗಳಿಗೆ ನಿರಾಸೆ ಮುಂದುವರಿದಿತ್ತು. ಮಾರ್ನಸ್ ಲ್ಯಾಬುಶೈನ್ ವಿಕೆಟ್ ಕಳೆದುಕೊಂಡ ಬಳಿಕ ಸ್ಟೀವ್ ಸ್ಮಿತ್‌ಗೆ ಟ್ರೆವಿಸ್ ಹೆಡ್ ಜೊತೆಯಾದರು. ಈ ಜೋಡಿ ಕೂಡ ವಿಂಡೀಸ್ ಬೌಲರ್‌ಗಳಿಗೆ ಕಗ್ಗಂಟಾದರು. ಇವರಿಬ್ಬರ ಜಿತೆಯಾಟದಲ್ಲಿ ಆಸ್ಟ್ರೇಲಿಯಾ ಮತ್ತೆ ಬರೊಬ್ಬರಿ 196 ರನ್‌ಗಳನ್ನು ಸೇರ್ಪಡೆಗೊಳಿಸಿತು. ಸ್ಮಿತ್ ದ್ವಿಶತಕ ಪೂರ್ಣಗೊಳಿಸಿದ ಬಳಿಕ ಶತಕ ಗಳಿಸುವ ಉತ್ಸಾಹದಲ್ಲಿದ್ದ ಹೆಡ್ ಕೇವಲ ಒಂದು ರನ್‌ ಅಂತರದಿಂದ ಶತಕ ವಂಚಿತವಾದರು. ವೇಗವಾಗಿ ರನ್‌ಗಳಿಸುತ್ತಿದ್ದ ಹೆಡ್ 95 ಎಸೆತಗಳಲ್ಲಿ 99 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಆಸ್ಟ್ರೇಲಿಯಾ 598 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ವಿಂಡೀಸ್‌ ಪಡೆಯಿಂದಲೂ ಉತ್ತಮ ಆರಂಭ

ವಿಂಡೀಸ್‌ ಪಡೆಯಿಂದಲೂ ಉತ್ತಮ ಆರಂಭ

ಇನ್ನು ಆಸ್ಟ್ರೇಲಿಯಾ ಡಿಕ್ಲೆರ್ ಮಾಡಿದ ಬಳಿಕ ಬ್ಯಾಟಿಂಗ್ ಆರಂಭಿಸಿರುವ ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ಆರಂಭವನ್ನು ಪಡೆದುಕೊಂಡಿದೆ. ಮಾಜಿ ಕ್ರಿಕೆಟಿಗ ಶಿವ್‌ನರೈನ್ ಚಂದರ್‌ಪಾಲ್ ಪುತ್ರ ಟ್ಯಾಗೆನರೈನ್ ಚಂದರ್‌ಪಾಲ್ ಮೊದಲ ಪಂದ್ಯದಲ್ಲಿಯೇ ಭರವಸೆಯ ಪ್ರದರ್ಶನ ನೀಡಿದ್ದಾರೆ. 47 ರನ್‌ಗಳಿಸಿ ಅಜೇಯವಾಗುಳಿದಿರುವ ಅವರು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ನಾಯಕ ಕ್ರೇಗ್ ಬ್ರಾತ್‌ವೈಟ್ 18 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿಕೆಟ್ ಕಳೆದುಕೊಳ್ಳದೆ 74 ರನ್‌ಗಳಿಸಿದ್ದು ಮೂರನೇ ದಿನ ಆಟವನ್ನು ಮುಂದುವರಿಸಲಿದೆ.

ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್
ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಎನ್ಕ್ರುಮಾ ಬೊನ್ನರ್, ಜೆರ್ಮೈನ್ ಬ್ಲಾಕ್‌ವುಡ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೇಡನ್ ಸೀಲ್ಸ್
ಬೆಂಚ್: ಡೆವೊನ್ ಥಾಮಸ್, ರೇಮನ್ ರೀಫರ್, ಶಮರ್ ಬ್ರೂಕ್ಸ್, ಆಂಡರ್ಸನ್ ಫಿಲಿಪ್

Story first published: Thursday, December 1, 2022, 15:44 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X