ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಸ್ಮಿತ್ ಭರ್ಜರಿ ಶತಕ: ನ್ಯೂಜಿಲೆಂಡ್‌ ವಿರುದ್ಧ ಆಸ್ಟ್ರೇಲಿಯಾಗೆ 25 ರನ್‌ಗಳ ಜಯ

ಸ್ಟೀವ್ ಸ್ಮಿತ್ ಭರ್ಜರಿ ಶತಕ ಮತ್ತು ಬೌಲರ್ ಗಳ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ ನ್ಯೂಜಿಲೆಂಡ್‌ ವಿರುದ್ಧ 25 ರನ್‌ಗಳ ಭರ್ಜರಿ ಜಯ ದಾಖಲಸಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಜೋಶ್ ಇಂಗ್ಲಿಸ್ 10 ರನ್ ಗಳಿಸುವಷ್ಟರಲ್ಲಿ ಔಟಾದರು, ಕೊನೆಯ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ ಆರನ್ ಫಿಂಚ್‌ ಕೂಡ 5 ರನ್‌ ಗಳಿಸಿ ನಿರಾಸೆ ಅನುಭವಿಸಿದರು. 16 ರನ್‌ ಆಗುವಷ್ಟರಲ್ಲಿ ಆಸ್ಟ್ರೇಲಿಯಾ ಇಬ್ಬರು ಆರಂಭಿಕ ಬ್ಯಾಟರ್ ಗಳನ್ನು ಸಂಕಷ್ಟಕ್ಕೆ ಸಿಲುಕಿತು.

ಟಿ20 ವಿಶ್ವಕಪ್: ಈ ಐವರು ವೇಗದ ಬೌಲರ್‌ಗಳು ಭಾರತ ತಂಡದಲ್ಲಿರಬೇಕು: ರಾಬಿನ್ ಉತ್ತಪ್ಪಟಿ20 ವಿಶ್ವಕಪ್: ಈ ಐವರು ವೇಗದ ಬೌಲರ್‌ಗಳು ಭಾರತ ತಂಡದಲ್ಲಿರಬೇಕು: ರಾಬಿನ್ ಉತ್ತಪ್ಪ

ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾಗೆ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಆಸರೆಯಾದರು. ಉತ್ತಮವಾಗಿ ಆಟವಾಡಿದ ಈ ಜೋಡಿ ಉತ್ತಮ ರನ್ ಕಲೆ ಹಾಕಿದರು. ಅದ್ಭುತ ಶತಕವನ್ನು ಪೂರ್ಣಗೊಳಿಸಿದ ಸ್ಟೀವ್ ಸ್ಮಿತ್ 105 ರನ್‌ಗಳಿಗೆ ಔಟಾದರು, ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ಅರ್ಧಶತಕ ಗಳಿಸಿದರು.

ಆಸ್ಟ್ರೇಲಿಯಾಗೆ ಆಸರೆಯಾದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾಗೆ ಆಸರೆಯಾದ ಸ್ಟೀವ್ ಸ್ಮಿತ್

ಆರಂಭಿಕ ಆಘಾತದಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾಗೆ ಸ್ಟೀವ್ ಸ್ಮಿತ್ ಆಸರೆಯಾದರು. ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಆಟವಾಡಿದ ಅವರು ಮಾರ್ನಸ್ ಲ್ಯಾಬುಸ್ಚಾಗ್ನೆ ಉತ್ತಮ ಇನ್ನಿಂಗ್ಸ್ ಆಡಿದರು. 52 ರನ್ ಗಳಿಸಿದ ಮಾರ್ನಸ್ ಲ್ಯಾಬುಸ್ಚಾಗ್ನೆ ಔಟಾದರೂ, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆ ಇನ್ನಿಂಗ್ಸ್ ಮುಂದುವರೆಸಿದ ಸ್ಟೀವ್ ಸ್ಮಿತ್ ಶತಕ ಪೂರೈಸಿದರು.

131 ಎಸೆತಗಳಲ್ಲಿ 11 ಬೌಂಡರಿ ಒಂದು ಸಿಕ್ಸರ್ ಸಹಿತ 105 ರನ್‌ ಗಳಿಸಿದ ಸ್ಟೀವ್‌ ಸ್ಮಿತ್ ಮಿಚೆಲ್ ಸ್ಯಾಂಟ್‌ನರ್ ಬೌಲಿಂಗ್‌ನಲ್ಲಿ ಕ್ಲೀನ್ ಬೋಲ್ಡ್ ಆದರು.

ಟಿ20 ವಿಶ್ವಕಪ್ ನಂತರ ಭಾರತ ತಂಡದಲ್ಲಿ ಈ ಆಟಗಾರರ ಸ್ಥಾನವೇ ಖಚಿತವಿಲ್ಲ; ವರದಿ

 ಅಂತಿಮವಾಗಿ 267 ರನ್ ಗಳಿಸಿದ ಆಸ್ಟ್ರೇಲಿಯಾ

ಅಂತಿಮವಾಗಿ 267 ರನ್ ಗಳಿಸಿದ ಆಸ್ಟ್ರೇಲಿಯಾ

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅವರ 105 ರನ್ ಗಳ ನೆರವಿನಿಂದ 267 ರನ್ ಗಳಿಸಿತು. ಮಾರ್ನಸ್ ಲ್ಯಾಬುಸ್ಚಾಗ್ನೆ 52 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ 44 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್‌ 14 ರನ್ ಗಳಿಸಿ ಔಟಾದರೆ, ಅಂತಿಮ ಓವರ್ ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಕ್ಯಾಮೆರೊನ್ ಗ್ರೀನ್ 12 ಎಸೆತಗಳಲ್ಲಿ 25 ರನ್ ಗಳಿಸಿದರು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಎರಡು ವಿಕೆಟ್ ಪಡೆದರೆ, ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್ ತಲಾ ಒಂದು ವಿಕೆಟ್ ಪಡೆದರು.

ಅಂತಿಮ ಹಂತದಲ್ಲಿ ಎಡವಿದ ನ್ಯೂಜಿಲೆಂಡ್

ಅಂತಿಮ ಹಂತದಲ್ಲಿ ಎಡವಿದ ನ್ಯೂಜಿಲೆಂಡ್

ನ್ಯೂಜಿಲೆಂಡ್ ಉತ್ತಮ ಆರಂಭವನ್ನು ಪಡೆದರೂ ಆರಂಭಿಕ ಬ್ಯಾಟರ್ ಹಳು ಔಟಾದ ನಂತರ, ಸತತವಾಗಿ ವಿಕೆಟ್ ಕಳೆದುಕೊಂಡಿತು. ಜಿಮ್ಮಿ ನೀಶಮ್ ಅವರ ಬೆಂಬಲದೊಂದಿಗೆ ಗ್ಲೆನ್ ಫಿಲಿಪ್ಸ್ 47 ರನ್‌ಗಳ ಅದ್ಭುತ ಆಟದೊಂದಿಗೆ ನ್ಯೂಜಿಲೆಂಡ್ ಗೆಲುವಿಗೆ ಶ್ರಮಿಸಿದರು.

ಈ ಕ್ರಮಾಂಕದಲ್ಲಿ ಮಿಚೆಲ್ ಸ್ಯಾಂಟ್ನರ್ ಕೂಡ 30 ರನ್‌ಗಳನ್ನು ಮುಂದುವರೆಸಿದರು ಆದರೆ ಪ್ರಬಲ ಆಸೀಸ್ ಬೌಲಿಂಗ್ ಕಿವೀಸ್ ಬ್ಯಾಟಿಂಗ್ ಲೈನ್‌ಅಪ್ ಅನ್ನು ಧ್ವಂಸಗೊಳಿಸಿತು. ಅಂತಿಮವಾಗಿ ಆಸೀಸ್ ಪಡೆ 25 ರನ್‌ಗಳಿಂದ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ನಾಯಕನಿಗೆ ಗೆಲುವಿನ ವಿದಾಯ

ಆಸ್ಟ್ರೇಲಿಯಾ ನಾಯಕನಿಗೆ ಗೆಲುವಿನ ವಿದಾಯ

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಾಯಕ ಆರನ್ ಫಿಂಚ್‌ಗೆ ಗೆಲುವಿನ ಉಡುಗೊರೆ ನೀಡಿದೆ.

ಇದಕ್ಕೂ ಮುನ್ನ ಶನಿವಾರದಂದು ಆಸ್ಟ್ರೇಲಿಯಾ ತಂಡದ ನಾಯಕ ಅಂತಾರಾಷ್ಟ್ರೀಯ ಏಕದಿನ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಆರನ್‌ ಫಿಂಚ್‌ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Story first published: Sunday, September 11, 2022, 20:23 [IST]
Other articles published on Sep 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X