ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವನಿತೆಯರಿಗೆ ಸೋಲು, ಆಸ್ಟ್ರೇಲಿಯಾಕ್ಕೆ ಸರಣಿ

By Manjunatha
Australia won the series against Indian women cricket team

ವಡೋದರಾ, ಮಾರ್ಚ್ 15: ವಡೋಧರಾ, ಮಾರ್ಚ್‌ 15: ಆಸ್ಟ್ರೇಲಿಯಾ ವನಿತೆಯರ ಶಿಸ್ತುಬದ್ಧ ಬೌಲಿಂಗ್‌ಗೆ ತಲೆ ಬಾಗಿದ ಭಾರತ ಮಹಿಳಾ ಕ್ರಿಕೆಟ್ ತಂಡ 60 ರನ್‌ಗಳ ಅಂತರದಿಂದ ಸೋತು ಸರಣಿಯನ್ನು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಮಡಿಲಿಗೆ ಹಾಕಿತು.

ಮೂರು ಏಕದಿನ ಪಂದ್ಯಗಳ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ವನಿತೆಯರ ತಂಡ ಭರ್ಜರಿ ಬ್ಯಾಟಿಂಗ್ ಮಾಡಿ 287 ರನ್ ಕಲೆ ಹಾಕಿತು. ಮೊತ್ತ ಬೆನ್ನು ಹತ್ತಿದ ಭಾರತದ ವನಿತೆಯರು 227 ರನ್‌ಗಳಿಗೆ ತಮ್ಮೆಲ್ಲಾ ವಿಕೆಟ್ ಕಳೆದುಕೊಂಡು ಮಂಡಿ ಊರಿದರು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಆಸ್ಟ್ರೇಲಿಯಾವು 2-0 ಯಿಂದ ಗೆದ್ದುಕೊಂಡಿತು.

ಉತ್ತಮ ಆರಂಭ ಕಂಡರಾದರೂ ಅದನ್ನು ದೊಡ್ಡ ಇನ್ನಿಂಗ್ಸ್‌ ಆಗಿ ಪರಿವರ್ತಿಸಲು ಭಾರತದ ವನಿತೆಯರು ವಿಫಲರಾದರು ಇದೇ ಭಾರತ ಸೋಲಲು ಪ್ರಮುಖ ಕಾರಣವಾಯಿತು. ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನಾ ಅವರು 53 ಬಾಲ್‌ಗಳಿಗೆ 67 ಗಳಿಸಿದರು. ಮಿಂಚಿನ ಆಟವಾಡಿದ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್‌ ಇತ್ತು. ಅವರ ಜೊತೆಗಾತಿ ಪೂನಂ ರೌತ್ 27 ರನ್ ಗಳಿಸಿ ಔಟಾದರೂ.

ಆ ನಂತರ ಬಂದ ಬಂದ ದೀಪ್ತಿ ಶರ್ಮಾ ಅಲ್ಪ ಭರವಸೆ ಹುಟ್ಟಿಸಿದರಾದರೂ 26 ಗಳಿಸಿದ್ದಾಗ ಓಟಾದರು, ಆ ನಂತರ ಬಂದವರೆಲ್ಲಾ ಪೆವಿಲಿಯನ್ ತೋರಲು ಆತುರ ತೋರಿಸಿದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 33 ಎಸೆತಗಳಲ್ಲಿ 30 ರನ್ ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಆಸ್ಟ್ರೇಲಿಯಾ ತಂಡ ಅತ್ಯುತ್ತಮವಾಗಿ ಬೌಲಿಂಗ್ ನಡೆಸಿತು. ತಂಡದ ಪರ ಜೆಸ್ ಜಾನ್ಸನ್ 3 ವಿಕೆಟ್ ಕಬಳಿಸಿದರು. ಪೆರ್ರಿ ಮತ್ತು ವೆಲ್ಲಿಂಗ್ಟನ್‌ ತಲಾ ಎರಡು ಹಾಗೂ ಮೇಗನ್, ಗಾರ್ಡನರ್, ಕಾರಿ ಅವರುಗಳು ತಲಾ ಒಂದು ವಿಕೆಟ್ ಗಳಿಸಿದರು.

ಆಸ್ಟ್ರೇಲಿಯಾ ಪರ 84 ರನ್ ಗಳಿಸಿ ಮಿಂಚಿದ ಬೋಲ್ಟನ್‌ ಅವರಿಗೆ ಪಂದ್ಯದ ಉತ್ತಮ ಆಟಗಾರ ಗೌರವ ದೊರೆಯಿತು.

Story first published: Thursday, March 15, 2018, 17:30 [IST]
Other articles published on Mar 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X