ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಣಿ ವೈಟ್‌ವಾಶ್; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಮೀಪಕ್ಕೆ ಆಸ್ಟ್ರೇಲಿಯಾ

Australia Wrap Up Test Series 3-0 against new zealand

ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಾ ಮೂರನೇ ಪಂದ್ಯವನ್ನೂ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೂರನ್ನೂ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ ಕಿವೀಸ್ ತಂಡಕ್ಕೆ ವೈಟ್‌ವಾಶ್ ಬಳಿಯುವಲ್ಲಿ ಯಶಸ್ವಿಯಾಗಿದೆ. ಸರಣಿಯುದ್ದಕ್ಕೂ ನ್ಯೂಜಿಲ್ಯಾಂಡ್ ತಂಡ ಕಳಪೆ ಪ್ರದರ್ಶನವನ್ನು ನೀಡಿ ಆಸಿಸ್ ವಿರುದ್ಧ ಶರಣಾಗಿದೆ.

ನ್ಯೂಜಿಲ್ಯಾಂಡ್ ವಿರುದ್ಧ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಅಂತಿಮ ಪಂದ್ಯವನ್ನು ಕೂಡ ಆಸ್ಟ್ರೇಲಿಯಾ ಭರ್ಜರಿಯಾಗಿ ಗೆದ್ದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 454 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 256 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗೆ 217ರನ್ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ನ್ಯೂಜಿಲ್ಯಾಂಡ್‌ಗೆ 416 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ನೀಡಿತು.

India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!

ಈ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‌ನ ರೀತಿಯಲ್ಲೇ ಎರಡನೇ ಇನ್ನಿಂಗ್ಸ್‌ನಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಆಸಿಸ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ ಕೇವಲ 136 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡ 279 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಈ ಪಂದ್ಯದ ಗೆಲುವಿನ ಮೂಲಕ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್‌ ನ ಅಂಕ ಪಟ್ಟಿಗೆ 64 ಅಂಕವನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮಾತ್ರವಲ್ಲ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಇನ್ನೂರರ ಗಡಿದಾಟಿರುವ 2ನೇ ತಂಡವಾಗಿದೆ. ಈ ಸರಣಿ ವೈಟ್‌ವಾಶ್ ಗೆಲುವಿನ ಮೂಲಕ ಆಸ್ಟ್ರೇಲಿಯಾ ಖಾತೆಯಲ್ಲಿ ಒಟ್ಟು 256 ಅಂಕಗಳಿವೆ.

142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್

ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ನ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಮೊದಲ ಸ್ಥಾನದಲ್ಲಿದೆ. 360 ಅಂಕಗಳನ್ನು ಗಳಿಸಿರುವ ಟೀಮ್ ಇಂಡಿಯಾ ಭರ್ಜರಿ ಮುನ್ನಡೆಯಲ್ಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್ ಆರಂಭದ ಬಳಿಕ 7 ಪಂದ್ಯ ಆಡಿರುವ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಾಭಲ್ಯತೆ ಸಾಧಿಸಿದೆ. ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ 6 ಗೆಲುವು ಕಂಡಿದ್ದು 2 ಪಂದ್ಯವನ್ನು ಸೋತಿದೆ. 1 ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ಯಾವ ತಂಡವೂ ಕೂಡ ನೂರರ ಗಡಿಯನ್ನು ಈವರೆಗೂ ದಾಟಿಲ್ಲ.

Story first published: Monday, January 6, 2020, 19:19 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X