ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಅಶ್ವಿನ್ ಕಡೆಗಣಿಸಿದರು: ಪಾಂಟಿಂಗ್

Australian batsmen underestimated R Ashwin, it was their undoing says Ricky Ponting

ಅಡಿಲೇಡ್: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಆರ್‌ ಅಶ್ವಿನ್ ಅವರನ್ನು ಕಡೆಗಣಿಸಿದರು. ಅನುಭವಿ ಆಫ್‌ ಸ್ಪಿನ್ನರ್ ಆಗಿರುವ ಅಶ್ವಿನ್‌ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದರು. ಇದೇ ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ

34ರ ಹರೆಯದ ಅಶ್ವಿನ್ ಆಸ್ಟ್ರೇಲಿಯಾದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಬಹುವಾಗಿ ಕಾಡಿದರು. ಸ್ಟೀವ್ ಸ್ಮಿತ್ 1, ಟ್ರಾವಿಸ್ ಹೆಡ್ 7, ಕ್ಯಾಮರಾನ್ ಗ್ರೀನ್ 11, ಕ್ರಿಸ್ ಲಿನ್ 10 ರನ್‌ಗೆ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಅಶ್ವಿನ್ 55 ರನ್‌ಗೆ 4 ವಿಕೆಟ್‌ ಪಡೆದು ಆಸೀಸ್‌ ಹಿನ್ನಡೆಗೆ ಕಾರಣರಾದರು. ಪರಿಣಾಮ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ ಹಿನ್ನಡೆ ಅನುಭವಿಸಿತು.

'ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಅಶ್ವಿನ್‌ ಎಸೆತಕ್ಕೆ ಆಕ್ರಮಣಕಾರಿ ಆಟ ಆಡಲು ಮುಂದಾಗಿದ್ದು ಕಾಣಿಸಿತು. ನನಗನ್ನಿಸುತ್ತದೆ; ಅಶ್ವಿನ್ ಎಷ್ಟು ಉತ್ತಮ ಬೌಲರ್ ಅನ್ನೋದನ್ನು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಕಡೆಗಣಿಸಿದರು ಅನ್ನಿಸುತ್ತೆ,' ಎಂದು ಚಾನೆಲ್ 7ರ ಜೊತೆ ಮಾತನಾಡಿದ ಪಾಂಟಿಂಗ್‌ ಹೇಳಿದ್ದಾರೆ.

ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ರಿಕಿ ಪಾಂಟಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ. ಇದೇ ತಂಡದಲ್ಲಿ ಆರ್‌ ಅಶ್ವಿನ್ ಕೂಡ ಆಡುತ್ತಾರೆ. ಹೀಗಾಗಿ ಪಾಂಟಿಂಗ್‌ಗೆ ಅಶ್ವಿನ್ ಎಷ್ಟು ಒಳ್ಳೆಯ ಬೌಲರ್ ಅನ್ನೋದು ಗೊತ್ತಿದೆ. ಮುಂದಿನ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ ಬೌಲಿಂಗ್‌ ವೇಳೆ ಎಚ್ಚರಿಕೆ ವಹಿಸಿ ಎಂದು ಪಾಂಟಿಂಗ್‌ ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

Story first published: Friday, December 18, 2020, 22:42 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X