ವಾರ್ನರ್‌ಗೆ ಬದಲಿಯಾಗಿ ಮೂವರು ಆಟಗಾರರ ಹೆಸರನ್ನು ಹೇಳಿದ ಆರೋನ್ ಫಿಂಚ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಗಾಯಗೊಂಡು ಸೀಮಿತ ಓವರ್‌ಗಳ ಮುಂದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯಕ್ಕೂ ವಾರ್ನರ್ ಲಭ್ಯರಾಗುವುದು ಅನುಮಾನ ಎಂದು ಸ್ವತಃ ಆಸ್ಟ್ರೇಲಿಯಾದ ಕೋಚ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ ಸ್ಥಾನವನ್ನು ಯಾರು ತುಂಬಬಲ್ಲರು ಎಂಬುದು ಚರ್ಚೆಯಾಗಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಮಾತನಾಡುತ್ತಾ ಡೇವಿಡ್ ವಾರ್ನರ್ ಅವರಂತಾ ಆಟಗಾರ ಅಲಭ್ಯರಾದರೆ ಯಾವುದೇ ತಂಡವಾದರೂ ದುರ್ಬಲವಾಗುತ್ತದೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ಇದ್ದಾರೆ ಎಂದು ಫಿಂಚ್ ಹೇಳಿದ್ದಾರೆ.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ತನ್ನ ಜೊತೆಗೆ ಆರಂಬಿಕನಾಗಿ ಕಣಕ್ಕಿಳಿಯಬಲ್ಲ ಮೂವರು ಆಟಗಾರರ ಹೆಸರನ್ನು ಫಿಂಚ್ ಈ ಸಂದರ್ಭದಲ್ಲಿ ಹೆಸರಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ, ಮಾರ್ನಸ್ ಲ್ಯಾಬುಶೈನ್, ಹಾಗೂ ಮ್ಯಾಥ್ಯೂವೇಡ್ ಈ ಆಟಗಾರರು ಆರಂಭಿಕರಾಗಿ ತನ್ನ ಜೊತೆ ಕಣಕ್ಕಿಳಿಯಬಲ್ಲರು ಎಂದು ಫಿಂಚ್ ಹೆಸರಿಸಿದ್ದಾರೆ.

ನಾವಿನ್ನೂ ತಂಡವನ್ನು ಆಯ್ಕೆ ಮಾಡಿಲ್ಲ. ಆದರೆ ನಮ್ಮಲ್ಲಿ ಉತ್ತಮ ಅವಕಾಶಗಳಿವೆ. ವೇಡ್ ಅವರ ಜೊತೆ ಆರಂಭಿಸಬಹುದು, ಅಥವಾ ಲ್ಯಾಬುಶೈನ್‌ಗೆ ಆರಂಭಿಕನಾಗಿ ಭಡ್ತಿ ನೀಡಬಹುದು. ಅಲೆಕ್ಸ್ ಕ್ಯಾರಿ ಆರಂಭಿಕನಾಗಿ ಈ ಹಿಂದೆ ಸಾಕಷ್ಟು ಬಾರಿ ಜವಾಬ್ಧಾರಿ ನಿರ್ವಹಿಸಿದ್ದಾರೆ ಎಂದು ಫಿಂಚ್ ಕ್ರಿಕೆಟ್.ಕಾಮ್.ಎಯು ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ

ಇನ್ನು ಇದೇ ಸಂದರ್ಭದಲ್ಲಿ ವಾರ್ನರ್ ಅವರು ಆಡುವ ಬಳಗದಲ್ಲಿರುವ ಅಗತ್ಯತೆಯ ಬಗ್ಗೆ ಫಿಂಚ್ ಹೇಳಿಕೆ ನೀಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಾರ್ನರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಆತನಿಗಿಂತ ಉತ್ತಮವಾಗಿ ಆಡಬಲ್ಲ ಹೆಚ್ಚಿನ ಆಟಗಾರರು ಇದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಫಿಂಚ್ ಹೇಳಿಕೊಂಡಿದ್ದಾ

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, December 1, 2020, 16:57 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X