ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ ಅಶ್ವಿನ್ ಎದುರು ಕಾಲುಕರೆದಿದ್ದಕ್ಕೆ ಕ್ಷಮೆ ಕೋರಿದ ಟಿಮ್ ಪೈನ್

Australian captain Tim Paine apologises for his infamous sledging incident with R Ashwin

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳು ಹೆಚ್ಚು ಕುತೂಹಲಕಾರಿಯಾಗಿರುತ್ತದೆ. ಯಾಕೆಂದರೆ ಎರಡೂ ತಂಡಗಳೂ ಬಲಿಷ್ಠವಾಗಿರುವುದರಿಂದ ಇತ್ತಂಡಗಳ ಕದನವೂ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಇತ್ತಂಡಗಳ ಆಟಗಾರರು ಪರಸ್ಪರ ಕಾಲೆಳೆದುಕೊಳ್ಳುವುದೂ ಇದೆ.

ಭಾರತಕ್ಕೆ ಮತ್ತೆ ಆಘಾತ, 4ನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಔಟ್!ಭಾರತಕ್ಕೆ ಮತ್ತೆ ಆಘಾತ, 4ನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಔಟ್!

ಬಲಿಷ್ಠ ತಂಡಗಳ ನಡುವಿನ ಕದನವೆಂದರೆ ಅಲ್ಲಿ ಆಟಗಾರರ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗೋದು ಸಾಮಾನ್ಯ. ಸದ್ಯ ಕುತೂಹಲಕಾರಿ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವೆಯೂ ಕಾಲೆಳೆಯುವಿಕೆ, ತಮಾಷೆ, ಸಿಡುಕಿನ ಸಂಗತಿಗಳು ನಡೆಯುತ್ತಿವೆ. ತೀರಾ ಇತ್ತೀಚೆಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮತ್ತು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದಕ್ಕೆ ಸಾಕ್ಷಿಯಾಗಿದ್ದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡ ಬಳಿಕ ಆರ್ ಅಶ್ವಿನ್ ಬಳಿ ಬಂದಿದ್ದ ಪೈನ್, 'ಗಬ್ಬಾದಲ್ಲಿ ನಿನ್ನನ್ನು ಎದುರುಗೊಳ್ಳಲು ಕಾತರನಾಗಿದ್ದೇನೆ,' ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಶ್ವಿನ್, 'ಭಾರತದಲ್ಲಿ ನಿನ್ನನ್ನು ನೋಡಲು ಕಾತರನಾಗಿದ್ದೇನೆ. ಅದು ನಿನ್ನ ಕೊನೇ ಸರಣಿಯಾಗಿರಲಿದೆ,' ಎಂದಿದ್ದರು.

7 ವರ್ಷಗಳ ಬಳಿಕ ಶ್ರೀಶಾಂತ್ ಕಮ್‌ಬ್ಯಾಕ್: ವಿಕೆಟ್ ಕಿತ್ತು ಗಮನ ಸೆಳೆದ ಕೇರಳ ಎಕ್ಸ್‌ಪ್ರೆಸ್7 ವರ್ಷಗಳ ಬಳಿಕ ಶ್ರೀಶಾಂತ್ ಕಮ್‌ಬ್ಯಾಕ್: ವಿಕೆಟ್ ಕಿತ್ತು ಗಮನ ಸೆಳೆದ ಕೇರಳ ಎಕ್ಸ್‌ಪ್ರೆಸ್

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪೈನ್ ತನ್ನ ದುರ್ವರ್ತನೆಗಳಿಗೆಲ್ಲ ಕ್ಷಮೆ ಕೋರಿದ್ದಾರೆ. 'ನಾನು ಹೆಮ್ಮೆ ಪಡುವ ತಂಡವನ್ನು ಮುನ್ನಡೆಸುವವನು. ನೆನ್ನೆ ನಾನು ಅದನ್ನು ಮರೆತು ವರ್ತಿಸಿದೆ. ನಾನು ಮನುಷ್ಯ. ನಾನು ತಪ್ಪುಗಳನ್ನು ಮಾಡುತ್ತೇನೆ. ಆದರೆ ನಾನು ಮಾಡಿದ ತಪ್ಪುಗಳಿಗೆ ಕ್ಷಮೆ ಕೋರಲು ಬಯಸುತ್ತೇನೆ,' ಎಂದು ಪೈನ್ ಹೇಳಿದ್ದಾರೆ.

Story first published: Tuesday, January 12, 2021, 13:23 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X