ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ನಿಧನ

Australian Cricket Legend Dean Jones Dead - Sources

ಮುಂಬೈ, ಸೆ. 24: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ವಿಶ್ಲೇಷಕರಾಗಿ ಸ್ಟಾರ್ ಸ್ಫೋರ್ಟ್ ಕಾಮೆಂಟೆಂಟರಿ ತಂಡದಲ್ಲಿದ್ದರು.

ಮುಂಬೈನ ಸೆವನ್ ಸ್ಟಾರ್ ಹೋಟೆಲ್ ನಲ್ಲಿ ನೆಲೆಸಿದ್ದ ಅವರು ಬಯೋ ಬಬ್ಬಲ್ ನಲ್ಲಿದ್ದರು. ಪ್ರೊ ಡೀನೋ ಹೆಸರಿನಲ್ಲಿ ಹಾಸ್ಯಭರಿತವಾಗಿ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಿದ್ದ ಜೋನ್ಸ್ ಅವರು ಭಾರತದಲ್ಲಿ ಜನಪ್ರಿಯರಾಗಿದ್ದರು.

ಆಸ್ಟ್ರೇಲಿಯಾ ಪರ 52 ಟೆಸ್ಟ್, 164 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 245 ಪ್ರಥಮದರ್ಜೆ ಪಂದ್ಯ, 285 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ.

Read In English: Dean Jones dies at 59 of cardiac arrest, cricket world in shock

ಡೀನ್ ಮೆರ್ವಿನ್ ಜೋನ್ಸ್: 1961ರ ಮಾರ್ಚ್ 24ರಂದು ವಿಕ್ಟೋರಿಯಾ ರಾಜ್ಯದ ಕೊಬರ್ಗ್ ಎಂಬಲ್ಲಿ ಜನಿಸಿದ ಜೋನ್ಸ್ ಅವರು ಬಲಗೈ ಬ್ಯಾಟ್ಸ್ ಮನ್ ಹಾಗೂ ಆಫ್ ಸ್ಪಿನ್ನರ್ ಆಗಿ ಕ್ರಿಕೆಟ್ ಜಗತ್ತಿಗೆ ಪರಿಚಯ. ಇನ್ನಷ್ಟು ವಿವರ ಮುಂದಿದೆ...

ಉತ್ತಮ ವೃತ್ತಿ ಬದುಕು ಕಂಡಿದ್ದ ಡೀನ್ ಜೋನ್ಸ್

ಉತ್ತಮ ವೃತ್ತಿ ಬದುಕು ಕಂಡಿದ್ದ ಡೀನ್ ಜೋನ್ಸ್

ವೆಸ್ಟ್ ಇಂಡೀಸ್ ವಿರುದ್ಧ 1984ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ ಜೋನ್ಸ್ ಕೊನೆ ಪಂದ್ಯ ಶ್ರೀಲಂಕಾ ವಿರುದ್ಧ 1992ರಲ್ಲಿ ಆಡಿದರು. ಒಟ್ಟು 52 ಪಂದ್ಯಗಳಿಂದ 46. 55 ರನ್ ಸರಾಸರಿಯಂತೆ 3632 ರನ್ ಗಳಿಸಿದ್ದು 11 ಶತಕ, 14 ಅರ್ಧಶತಕ ಬಾರಿಸಿದ್ದರು. 216 ವೈಯಕ್ತಿಕ ಗರಿಷ್ಠ ಮೊತ್ತ.

1984ರಲ್ಲೇ ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಜೋನ್ಸ್ ಕೊನೆ ಪಂದ್ಯವಾಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧ 1994ರಲ್ಲಿ, ಈ ಅವಧಿಯಲ್ಲಿ 164 ಪಂದ್ಯಗಳಲ್ಲಿ 44.61 ರನ್ ಸರಾಸರಿಯಂತೆ 6,068ರನ್ ಗಳಿಸಿದ್ದರು. 7 ಶತಕ, 46 ಅರ್ಧಶತಕ ಬಾರಿಸಿದ್ದರು. 145 ವೈಯಕ್ತಿಕ ಗರಿಷ್ಠ ಮೊತ್ತ.

ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಡೀನ್ ಜೋನ್ಸ್

ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಡೀನ್ ಜೋನ್ಸ್

1986ರಲ್ಲಿ ಚೆನ್ನೈನಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯವಾಡುವಾಗ ಸತತವಾಗಿ ವಾಂತಿ, ಬಿಸಿಲಿನಿಂದ ಬಳಲಿಕೆಯಿಂದ ಸುಸ್ತಾದರೂ ಧೃತಿಗೆಡದೆ 210ರನ್ ಪೇರಿಸಿ ಎಲ್ಲರ ಗಮನ ಸೆಳೆದಿದ್ದರು. 1987ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆಲುವಿಗೆ ಡೇವಿಡ್ ಬೂನ್, ಜೆಫ್ ಮಾರ್ಷ್ ಜೊತೆಗೆ ಜೋನ್ಸ್ ಕೂಡಾ ಉತ್ತಮ ಕೊಡುಗೆ ನೀಡಿದ್ದರು. ಆಷಸ್ ಸರಣಿ ಇರಲಿ, ಏಕದಿನ ಸರಣಿ ಇರಲಿ ಜೋನ್ಸ್ ಇದ್ದರೆ ರನ್ ಗಳಿಕೆ ಭಯವಿಲ್ಲ ಎಂಬ ನಂಬಿಕೆ ಹುಟ್ಟಿಸಿದ್ದರು.

ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿದ್ದರು

ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿದ್ದರು

ಆಸ್ಟ್ರೇಲಿಯಾದ ವಿಕ್ಟೋರಿಯಾ, ಇಂಗ್ಲೆಂಡಿನ ಡರ್ ಹ್ಯಾಂ, ಡರ್ಬಿಶೈರ್ ಪರ ಕ್ರಿಕೆಟ್ ಆಡಿದ್ದರು. ಒಟ್ಟಾರೆ, ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಪ್ರಥಮ ದರ್ಜೆ, ಲಿಸ್ಟ್ ಎ ಸೇರಿ 19, 188 ರನ್ ಗಳಿಸಿದ್ದಾರೆ, 55 ಶತಕ, 88 ಅರ್ಧಶತಕ , 328 ಗರಿಷ್ಠ ಮೊತ್ತ.

ಕ್ರಿಕೆಟ್ ನಂತರ ಕೋಚ್, ಕಾಮೆಂಟೆಟರ್ ಆಗಿ ಗುರುತಿಸಿಕೊಂಡಿದ್ದರು. 2005ರಲ್ಲಿ ಟೀಂ ಇಂಡಿಯಾ ಕೋಚ್ ಆಗುವ ಅವಕಾಶ ತಪ್ಪಿದ್ದಕ್ಕೆ ಸಾರ್ವಜನಿಕವಾಗಿ ಬೇಸರ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ಲೀಗ್, ಅಫ್ಘಾನಿಸ್ತಾನ್ ಲೀಗ್ ನಲ್ಲೂ ಕೋಚ್ ಆಗಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿದ್ದರು.

ವಿವಾದಿತ ಹೇಳಿಕೆ ಸ್ಯಾಂಪಲ್

ವಿವಾದಿತ ಹೇಳಿಕೆ ಸ್ಯಾಂಪಲ್

ವಿವಾದಿತ ಹೇಳಿಕೆ ನೀಡುವ ಮೂಲಕ ಜೋನ್ಸ್ ಗಮನ ಸೆಳೆಯುತ್ತಿದ್ದರು. 2006ರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಹಶೀಂ ಆಮ್ಲಾರನ್ನು ಟೆರೆರಿಸ್ಟ್ ಎಂದು ಕರೆದಿದ್ದರು. ಕಮರ್ಷಿಯಲ್ ಬ್ರೇಕ್ ನಡುವೆ ಹಾಸ್ಯ ಚಟಾಕಿ ಹಾರಿಸಿದ್ದೆ ಎಂದಿದ್ದರು. ಆದರೆ, ದಕ್ಷಿಣ ಆಫ್ರಿಕಾ ಇದು ಲೈವ್ ಪ್ರಸಾರವಾಗಿತ್ತು. ನಂತರ ಜೋನ್ಸ್ ಕ್ಷಮೆ ಯಾಚಿಸಿದ್ದರು. ಅಷ್ಟೇಕೆ ನಿನ್ನೆ ಕೂಡಾ ಟ್ವಿಟ್ಟರಲ್ಲಿ ಭಾರತೀಯ ಫ್ಯಾನ್ಸ್ ಜೊತೆ ಕಿತ್ತಾಟವಾಡಿಕೊಂಡಿದ್ದರು.

ರಾಜದೀಪ್ ಸರ್ದೇಸಾಯಿ ಟ್ವೀಟ್

ಜೋನ್ಸ್ ನಿಧನಕ್ಕೆ ಇಂಡಿಯಾ ಟುಡೇ ಪ್ರಧಾನ ಸಂಪಾದಕ ರಾಜದೀಪ್ ಸರ್ದೇಸಾಯಿ ಸಂತಾಪ ವ್ಯಕ್ತಪಡಿಸಿ, 1986 ಚೆನ್ನೈ ಇನ್ನಿಂಗ್ಸ್ ಸ್ಮರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ನೋಡಿ ಮಾತನಾಡಿಸಿದ್ದೆ, ಈಗ ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Story first published: Thursday, September 24, 2020, 16:44 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X