ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಟೀವ್ ಸ್ಮಿತ್ ಅವಶ್ಯಕತೆಯಿದೆ: ಸ್ಟೀವ್ ವಾ

Australian cricket needs Smith back, says Waugh

ಸಿಡ್ನಿ, ಸೆಪ್ಟೆಂಬರ್ 18: ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನಿಷೇಧಿತ ಆಟಗಾರ, ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರ ಅವಶ್ಯಕತೆಯಿದೆ. ಅವರನ್ನು ಕೈ ಚಾಚಿ ಮತ್ತೆ ತಂಡಕ್ಕೆ ಬರ ಮಾಡಿಕೊಳ್ಳಬೇಕಿದೆ. ಆದರೆ ಡೇವಿಡ್ ವಾರ್ನರ್ ಅವರನ್ನು ಹೀಗೆ ಬರ ಮಾಡಿಕೊಳ್ಳುವುದು ಕೊಂಚ ಕಷ್ಟವೆನಿಸಬಹುದು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ.

ಒಡಿಐ: ತ್ವರಿತಗತಿಯಲ್ಲಿ 2 ಸಾವಿರ ರನ್ ಗಳಿಸಿದ ಟಾಪ್ 5 ಕ್ರಿಕೆಟರ್ಸ್ಒಡಿಐ: ತ್ವರಿತಗತಿಯಲ್ಲಿ 2 ಸಾವಿರ ರನ್ ಗಳಿಸಿದ ಟಾಪ್ 5 ಕ್ರಿಕೆಟರ್ಸ್

ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಒಂದು ವರ್ಷದ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಿಸ್ಪಟ್ಟಿದ್ದಾರೆ. ಕಳೆದ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಲ್ಲಿ (ಚೆಂಡು ವಿರೂಪ) ಪಾಲ್ಗೊಂಡಿದ್ದರಿಂದ ಇಬ್ಬರ ಮೇಲೂ ನಿಷೇಧ ಹೇರಲಾಗಿದೆ.

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿನ ಇನ್ನೊಬ್ಬ ಪಾಲುದಾರ ಕ್ಯಮರಾನ್ ಬ್ಯಾನ್ ಕ್ರಾಫ್ಟ್ ಅವರೂ ಒಂಭತ್ತು ತಿಂಗಳ ನಿ‍ಷೇಧಕ್ಕೆ ಈಡಾಗಿದ್ದಾರೆ. ನಿಷೇಧಕ್ಕೊಳಗಾಗಿರುವ ಈ ಮೂವರು ಆಟಗಾರರಲ್ಲಿ ಸ್ಮಿತ್ ಬಗ್ಗೆ ಹೆಚ್ಚು ಕಳಕಳಿ ಹೊಂದಿರುವ ವಾ ಅವರು ಸ್ಮಿತ್ ಅವರು ತಂಡಕ್ಕೆ ಮರಳುವುದನ್ನು ಬಯಸಿದ್ದೇವೆ ಎಂದು ಆಸ್ಟ್ರೇಲಿಯಾದ ಚಾನೆಲ್ ಒಂದಕ್ಕೆ ಮಾತನಾಡುತ್ತ ಹೇಳಿದ್ದಾರೆ.

64 ಟೆಸ್ಟ್ ಪಂದ್ಯಗಳನ್ನಾಡಿರುವ 29ರ ಹರೆಯದ ಸ್ಮಿತ್ ಈಗಲೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಗೆಳೆಯ ವಾರ್ನರ್ ಅವರ ಒತ್ತಾಯಕ್ಕೆ ಒಪ್ಪಿ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡಿದ್ದರಿಂದ ಸ್ಮಿತ್ ಗೂ ನಿಷೇಧದ ಸಂಕಟ ತಾಗಿತ್ತು.

'ಸ್ಮಿತ್ ಅವರಂತ ಪ್ರತಿಭಾವಂತ ಯುವ ಆಟಗಾರರನ್ನು ತಂಡದಿಂದ ಹೊರಗೆ ನೋಡುವುದಕ್ಕೆ ಯಾರೂ ಇಷ್ಟಪಡಲಾರರು. ಪ್ರಕರಣಕ್ಕೆ ಸಂಬಂಧಿಸಿ ತಂಡದ ಇಡೀ ಆಟಗಾರ ಜವಾಬ್ದಾರಿ ಹೊತ್ತಿದ್ದಾರೆ, ಅಭಿಮಾನಿಗಳಲ್ಲಿ ತಪ್ಪಿಗಾಗಿ ಕ್ಷಮೆಯೂ ಕೇಳಿದ್ದಾರೆ. ಸ್ಮಿತ್ ಕೂಡ ಕಣ್ಣೀರು ಸಹಿತ ಕ್ಷಮೆ ಕೇಳಿದ್ದಾಗಿದೆ. ಹೀಗಾಗಿ ಸ್ಟೀವ್ ಆದಷ್ಟು ಬೇಗ ತಂಡಕ್ಕೆ ಬರುವಂತಾಗಲಿ' ಎಂದು ಸ್ಟೀವ್ ವಾ ಹೇಳಿದರು.

Story first published: Tuesday, September 18, 2018, 20:26 [IST]
Other articles published on Sep 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X