ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿ ಮುಗಿಯುತ್ತಲೇ ಕೆಜಿಎಫ್‌ನ "ರಾಕಿ ಭಾಯ್" ಅವತಾರವೆತ್ತಿದ ವಾರ್ನರ್

Australian cricketer David warner became Rakhi bhai of KGF kannada movie

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅಂಗಳದಲ್ಲಿ ಬಹಳ ಅಗ್ರೆಸ್ಸಿವ್ ಆಟಗಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಂಗಳದಾಚೆ ಆತನೋರ್ವ ಸಂಪೂರ್ಣ ಭಿನ್ನವಾದ ವ್ಯಕ್ತಿತ್ವ ಹೊಂದಿದವರು ಎಂಬುದು ಕೂಡ ಅಭಿಮಾನಿಗಳಿಗೆ ಹೊಸತಲ್ಲ. ಕುಟುಂಬದೊಂದಿಗೆ ಸಂಪೂರ್ಣ ಕಾಲ ಕಳೆಯುವ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಐಪಿಎಲ್‌ನಿಂದಾಗಿ ಭಾರತದಲ್ಲಿಯೂ ಸಾಕಷ್ಟು ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ವಾರ್ನರ್ ಭಾರತೀಯ ಅಭಿಮಾನಿಗಳನ್ನು ರಂಜಿಸಲು ಸಾಮಾಜಿಕ ಜಾಲತಾಣದಲ್ಲಿ ನಾನಾ ಅವತಾರವೆತ್ತಿತ್ತಾರೆ. ಇದೀಗ ಕನ್ನಡದ ಕೆಜಿಎಫ್‌ ಸರದಿ.

ಹೌದು, ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸರಣಿ ಸೋಲು ಅನುಭವಿಸಿ ಒಂದು ದಿನವಷ್ಟೇ ಕಳೆದಿದೆ. ಅಷ್ಟರಲ್ಲೇ ಡೇವಿಡ್ ವಾರ್ನರ್ ಕನ್ನಡದ ಬಹುನಿರೀಕ್ಷಿತ ಚಿತ್ರ "ಕೆಜಿಎಫ್‌-2"ನ "ರಾಕಿ ಭಾಯ್" ಅವತಾರವೆತ್ತಿದ್ದಾರೆ. ಪೇಸ್‌ಆಪ್‌ ಎಡಿಟಿಂಗ್ ಆ್ಯಪ್ ಮೂಲಕ ಡೇವಿಡ್ ವಾರ್ನರ್ ನಟ ಯಶ್ ಮುಖದ ಬದಲಿಗೆ ತನ್ನ ಮುಖವನ್ನು ಬಳಸಿಕೊಂಡಿದ್ದಾರೆ. ಇದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಾರ್ನರ್ ಸಂಭ್ರಮಿಸಿದ್ದಾರೆ.

ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ

ಕೆಜಿಎಫ್‌-2 ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಅದರಲ್ಲಿ ನಟ ಯಶ್ ಕಾದು ಕೆಂಪಾಗಿರುವ ಬಂದೂಕಿನ ನಳಿಕೆಯಲ್ಲಿ ಸಿಗರೇಟ್ ಹಚ್ಚುವ ಸೀನ್ ಸಾಕಷ್ಟು ವೈರಲ್ ಆಗಿತ್ತು. ಇದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗನನ್ನೂ ಸೆಳೆದಿದೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ನನಗೆ ಕಳುಹಿಸಿಕೊಟ್ಟರು. ನಾನು ಇದನ್ನು ಹಂಚಿಕೊಳ್ಳುವ ಭರವಸೆ ನಿಡಿದ್ದೆ ಎಂದು ವಾರ್ನರ್ ಈ ವಿಡಿಯೋದ ಜೊತೆಗೆ ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಕ್ರಿಕೆಟಿಗ. ಅದರಲ್ಲೂ ತನ್ನನ್ನು ತಾನು ತಮಾಷೆಯಾಗಿ ಬಿಂಬಿಸಿಕೊಂಡು ಅಭಿಮಾನಿಗಳ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡುತ್ತಾರೆ. ತೆಲುಗಿನ ಬುಟ್ಟ ಬೊಮ್ಮಾ ಹಾಡಿಗೆ ವಾರ್ನರ್ ಮಾಡಿದ ನೃತ್ಯ ಹಾಗೂ ಇತ್ತೀಚೆಗೆ ಹೃತಿಕ್ ರೋಷನ್ ಅವರ ಧೂಮ್-2 ಚಿತ್ರಕ್ಕೆ ತನ್ನ ಮುಖವನ್ನು ಬಳಸಿಕೊಂಡ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಆಸ್ಟ್ರೇಲಿಯಾ ಅಭಿಮಾನಿಗಳ ಮಾಜಿ ಆಟಗಾರರ ಹಾಗೂ ಮಾಧ್ಯಮಗಳ ಟೀಕೆಯಿಂದ ಆಟಗಾರರು ಕಂಗೆಟ್ಟಿದ್ದರೆ ಡೇವಿಡ್ ವಾರ್ನರ್ ಮಾತ್ರ ತನಗು ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕುಟುಂಬದೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

Story first published: Thursday, January 21, 2021, 17:16 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X