ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್

Australian cricketer Emily Smith posts playing XI on Instagram, gets suspended for a year

ಆಸ್ಟ್ರೇಲಿಯಾ ಕ್ರಿಕೆಟ್‌ನ ಪ್ರತಿಭಾನ್ವಿತ ಆಟಗಾಟರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬಳಿಕ ಇದೀಗ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಮಿಲಿ ಸ್ಮಿತ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವುಮೆನ್ ಬಿಗ್‌ಬ್ಯಾಷ್ ಟೂರ್ನಿಯ ಸಂದರ್ಭದಲ್ಲಿ ಮಾಡಿದ ಒಂದು ಯಡವಟ್ಟು ಈ ಕಠಿಣ ಶಿಕ್ಷೆಗೆ ಕಾರಣವಾಗಿದೆ.

ಹೋಬರ್ಟ್ ಹ್ಯಾರಿಕೇನ್ಸ್ ತಂಡವನ್ನು ಪ್ರತಿನೀಧಿಸುವ ಎಮಿಲಿ ಸ್ಮಿತ್ ಪಂದ್ಯ ಆರಂಭಕ್ಕೂ ಮುನ್ನ ತಂಡದ ಲೈನ್‌ಅಪ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಎಮಿಲಿ ಅಂತಿಮ ಹನ್ನೊಂದರ ಬಳಗ ಹಾಗೂ ಲೈನ್‌ಅಪ್‌ಅನ್ನು ಹಂಚಿಕೊಂಡಿದ್ದರು. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರವಾಗಿ ತೆಗೆದುಕೊಂಡಿದೆ. ಈ ಪ್ರಕರಣವನ್ನು ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಶೇಧಕ್ಕೆ ಗುರಿಪಡಿಸಿದೆ.

ಧೋನಿ ಹೇಳಿದ ಆ ಮಾತಿನಿಂದ ಗಂಭೀರ್ ವಿಶ್ವಕಪ್ ಫೈನಲ್ ಶತಕ ಕೈತಪ್ಪಿತು!!ಧೋನಿ ಹೇಳಿದ ಆ ಮಾತಿನಿಂದ ಗಂಭೀರ್ ವಿಶ್ವಕಪ್ ಫೈನಲ್ ಶತಕ ಕೈತಪ್ಪಿತು!!

ತಂಡದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವುದು ಗಂಭೀರ ವಿಚಾರ. ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಆಂತರಿಕ ಮಾಹಿತಿಗಳನ್ನು ಬಹಿರಂಗಗೊಳಿಸದಂತಿರುವ 2.3.2ನೇ ವಿಧಿ ಉಲ್ಲಂಘಿಸಿರುವುದನ್ನು ಎಮಿಲಿ ಸ್ಮಿತ್ ಒಪ್ಪಿಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಸಂಜೆ ತಿಳಿಸಿದೆ.

ಹೀಗಾಗಿ ಎಮಿಲಿ ಸ್ಮಿತ್ ಬಿಗ್ ಬ್ಯಾಷ್ ಟೂರ್ನಿಯ ಮುಂದಿನ ಪಂದ್ಯಗಳು ಮತ್ತು ಮುಂದಿನ ಒಂದು ವರ್ಷದ ಪ್ರಮುಖ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುವುಲ್ಲ. ಆಸ್ಟ್ರೇಲಿಯಾ ಕ್ರಿಕೆಟ್‌ನ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರು ಬಾಲ್ ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಶೇಧಕ್ಕೆ ಗುರಿಯಾಗಿ ಕಳೆದ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಇದೀಗ ಮಹಿಳಾ ಆಟಗಾರ್ತಿ ತಾನು ಮಾಡಿಕೊಂಡ ಯಡವಟ್ಟಿಗೆ ಇದೇ ರೀತಿಯ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ.

Story first published: Tuesday, November 19, 2019, 10:57 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X