ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ತಂಡದ ಮತ್ತೋರ್ವ ಆಟಗಾರ 3ನೇ ಪಂದ್ಯದಿಂದ ಹೊರಕ್ಕೆ

Australian fast bowler James Pattinson injured and ruled out of third test

ಸಿಡ್ನಿ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದ್ದು ಸೋಮವಾರ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಮೆಲ್ಬರ್ನ್‌ನಿಂದ ಸಿಡ್ನಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾನುವಾರ ಕೊರೊನಾ ಪರೀಕ್ಷೆ ನಡೆದಿದ್ದು ಎಲ್ಲರ ವರದಿಯೂ ನೆಗೆಟಿವ್ ಬಂದಿರುವುದು ನಿರಾಳತೆ ಮೂಡಿಸಿದೆ. ಈ ಮಧ್ಯೆ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ತಂಡದಿಂದ ಹೊರಬಿದ್ದಿದ್ದಾರೆ.

ಜನವರಿ 7ರಂದು ಮೂರನೇ ಟೆಸ್ಟ್ ಪಂದ್ಯ ನಡೆಯಲಿದ್ದು ಅದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ತಮ್ಮ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಪ್ಯಾಟಿನ್ಸನ್ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ರಹಾನೆ ಓರ್ವ ಹುಟ್ಟು ನಾಯಕ ಎಂದ ಆಸ್ಟ್ರೇಲಿಯಾ ಮಾಜಿ ನಾಯಕ ಇಯಾನ್ ಚಾಪೆಲ್ರಹಾನೆ ಓರ್ವ ಹುಟ್ಟು ನಾಯಕ ಎಂದ ಆಸ್ಟ್ರೇಲಿಯಾ ಮಾಜಿ ನಾಯಕ ಇಯಾನ್ ಚಾಪೆಲ್

ಜೇಮ್ಸ್ ಪ್ಯಾಟಿನ್ಸನ್ ಮೊದಲೆರಡು ಪಂದ್ಯಗಳಲ್ಲೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅವರಂತಾ ವೇಗದ ಬೌಲರ್‌ಗಳು ತಂಡದಲ್ಲಿರುವ ಕಾರಣ ಪ್ಯಾಟಿನ್ಸನ್ ಬೆಂಚ್ ಕಾಯಬೇಕಾಗಿತ್ತು.

ಮತ್ತೊಂದೆಡೆ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಆಗಮಿಸುವ ವೀಕ್ಷಕರ ವಿಚಾರದಲ್ಲೂ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಶೇಕಡಾ 50 ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ಬದಲಾಯಿಸಲಾಗಿದ್ದು ಶೇಕಡಾ 25 ರಷ್ಟು ಅಭಿಮಾನಿಗಳು ಮಾತ್ರವೇ ಆರಂಭದಲ್ಲಿ ಸಿಡ್ನಿ ಅಂಗಳಕ್ಕೆ ಅವಕಾಶ ನೀಡಲಾಗುತ್ತದೆ. ಸಿಡ್ನಿ ಕ್ರಿಕೆಟ್ ಮೈದಾನ 38,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು 9500ರಷ್ಟು ಪ್ರೇಕ್ಷಕರು ಮಾತ್ರವೇ ಆರಂಭದಲ್ಲಿ ವೀಕ್ಷಣೆಗೆ ಅವಕಾಶವಿದೆ.

ಅಭ್ಯಾಸದ ವೇಳೆ ಅದ್ಭುತ ಕ್ಯಾಚ್ ಹಿಡಿದು ಗಮನಸೆಳೆದ ನಟರಾಜನ್: ವಿಡಿಯೋಅಭ್ಯಾಸದ ವೇಳೆ ಅದ್ಭುತ ಕ್ಯಾಚ್ ಹಿಡಿದು ಗಮನಸೆಳೆದ ನಟರಾಜನ್: ವಿಡಿಯೋ

ನ್ಯೂಸೌತ್ ವೇಲ್ಸ್ ರಾಜ್ಯದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದೆ. ಅದರ ಪರಿಣಾಮವಾಗಿ ವೀಕ್ಷಕರ ಸಂಖ್ಯೆಯಲ್ಲೂ ಖಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Story first published: Monday, January 4, 2021, 11:39 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X