ಐಪಿಎಲ್‌ನಲ್ಲಿ ಆಡದಿರುವ ಕಾರಣವನ್ನು ತಿಳಿಸಿದ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಮಿಚೆಲ್ ಸ್ಟಾರ್ಕ್ ಪ್ರಸ್ತುತ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ತಮ್ಮ ತೀಕ್ಷ್ಣವಾದ ಬೌಲಿಂಗ್ ಮೂಲಕ ಎದುರಾಳಿ ದಾಂಡಿಗರನ್ನು ಕಂಗೆಡಿಸಬಲ್ಲ ಸಾಮರ್ಥ್ಯದ ಬೌಲರ್. ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಮಿಚೆಲ್ ಸ್ಟಾರ್ಕ್ 2015ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ಬೌಲರ್.

ರಾಷ್ಟ್ರೀಯ ತಂಡದ ಪರವಾಗಿ ಸದಾ ಅದ್ಭುತ ಪ್ರದರ್ಶನ ನಿಡಿ ಮಿಂಚುವ ವಿಷೆಲ್ ಸ್ಟಾರ್ಕ್ ಇತ್ತೀಚಿನ ವರ್ಷಗಳಲ್ಲಿ ಫ್ರಾಂಚೈಸಿ ಕ್ರಿಕೆಟ್‌ನಿಮದ ದೂರವುಳಿದಿದ್ದಾರೆ. ಇದೀಗ ಫ್ರಾಂಚೈಸಿ ಕ್ರಿಕೆಟ್‌ ಮೇಲೆ ಯಾವ ಕಾರಣಕ್ಕಾಗಿ ಕಡಿಮೆ ಒಲವು ಹೊಂದಿದ್ದಾರೆ ಎಂಬ ಬಗ್ಗೆ ಸ್ವತಃ ಮಿಚೆಲ್ ಸ್ಟಾರ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ತಂಡದ ಪರವಾಗಿ ಆಡುವುದು ತಮ್ಮ ಮೊದಲ ಆದ್ಯತೆ ಎಂದು ಹೇಳಿಕೊಂಡಿದ್ದಾರೆ.

ಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾ

ಐಪಿಎಲ್, ಬಿಬಿಎಲ್‌ನಲ್ಲಿಯೂ ಆಡುತ್ತಿಲ್ಲ ಸ್ಟಾರ್ಕ್

ಐಪಿಎಲ್, ಬಿಬಿಎಲ್‌ನಲ್ಲಿಯೂ ಆಡುತ್ತಿಲ್ಲ ಸ್ಟಾರ್ಕ್

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯುತ್ತಿದ್ದ ಮಿಚೆಲ್ ಸ್ಟಾರ್ಕ್ ಇತ್ತೀಚಿನ ವರ್ಷಗಳಲ್ಲಿ ಆಡುತ್ತಿಲ್ಲ. ಐಪಿಎಲ್ ಮಾತ್ರವಲ್ಲ ತಮ್ಮದೇ ದೇಶದ ಕ್ರಿಕೆಟ್ ಲೀಗ್‌ಆದ ಬಿಗ್‌ಬ್ಯಾಷ್‌ನಿಂದಲೂ ಸ್ಟಾರ್ಕ್ ದೂರವುಳಿದಿದ್ದಾರೆ. ಈ ಟೂರ್ನಿಗಳಿಂದ ಕೋಟಿ ಕೋಟಿ ಹಣಗಳಿಸಬಹುದಾಗಿದ್ದರೂ ಸ್ಟಾರ್ಕ್ ತಾವಾಗಿಯೇ ಈ ಟೂರ್ನಿಗಳಿಂದ ದೂರವುಳಿದಿದ್ದಾರೆ. ಈ ಬಗ್ಗೆ ತನಗೆ ಯಾವುದೇ ಬೇಸರವಿಲ್ಲ ಎಂಬುದನ್ನು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ.

ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ

ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ

ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸ್ಟಾರ್ಕ್ ಫ್ರಾಂಚೈಸಿ ಕ್ರಿಕೆಟ್ ವಿಚಾರವಾಗಿ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. "ನಾನು ಬಿಬಿಎಲ್‌ನಲ್ಲಿ ಆಡುವಾಗ ಯಾವಾಗಲೂ ಕ್ರಿಕೆಟ್‌ಅನ್ನು ಆನಂದಿಸುತ್ತೇನೆ. ಆದರೆ ಕಳೆದ ಏಳು ವರ್ಷಗಳಿಂದ ಫ್ರಾಂಚೈಸಿ ಕ್ರಿಕೆಟ್ ಮೇಲಿನ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ" ಎಂದಿದ್ದಾರೆ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್. ಕಳೆದ ಬಾರಿಯ ಐಪಿಎಲ್ ಹರಾಜಿನಿಂದ ಹೊರಗುಳಿದಿದ್ದ ಮಿಚೆಲ್ ಸ್ಟಾರ್ಕ್ ಈ ವರ್ಷದ ಬಿಬಿಎಲ್‌ನಿಂದಲೂ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada
ಆಸ್ಟ್ರೇಲಿಯಾ ಕ್ರಿಕೆಟ್ ನನಗೆ ಮುಖ್ಯ

ಆಸ್ಟ್ರೇಲಿಯಾ ಕ್ರಿಕೆಟ್ ನನಗೆ ಮುಖ್ಯ

"ಐಪಿಎಲ್ ಹಾಗೂ ಬಿಬಿಎಲ್‌ನಲ್ಲಿ ನನ್ನ ಭಾಗವಹಿಸುವಿಕೆ ಆಸ್ಟ್ರೇಲಿಯಾ ಕ್ರಿಕೆಟ್‌ ವೇಳಾಪಟ್ಟಿಯನ್ನು ನಿತರ್ಧರಿಸಿದೆ. ನಾನು ಯಾವಾಗಲೂ ಸಮರ್ಥವಾಗಿರಬೇಕೆಂದು ಅಂದುಕೊಳ್ಳುತ್ತೇನೆ. ರಾಷ್ಟ್ರೀಯ ತಮಡದ ಪರವಾಗಿ ನಾನು ಸಾಧ್ಯವಾದಷ್ಟು ಅದ್ಭುತ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡಿದ್ದೇನೆ. ಹಾಗಾಗಿ ಫ್ರಾಂಚೈಸಿ ಕ್ರಿಕೆಟ್‌ಗೆ ಹೆಚ್ಚಿನ ಮಾನ್ಯತೆ ನಿಡುತ್ತಿಲ್ಲ" ಎಂದು ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿಕೆ ನೀಡಿದ್ದಾರೆ. 2015ರ ಬಳಿಕ ಮಿಚೆಲ್ ಸ್ಟಾರ್ಕ್ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, July 3, 2022, 16:36 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X