ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬರುವ ಟಿ20 ವಿಶ್ವಕಪ್‌ನ ಪಿಚ್‌ಗಳು ಯುಜವೇಂದ್ರ ಚಹಾಲ್‌ಗೆ ಸವಾಲಾಗಿರುತ್ತದೆ: ಸಂಜಯ್ ಮಂಜ್ರೇಕರ್

yuzvendra chahal

ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಿಚ್‌ಗಳು ಯುಜವೇಂದ್ರ ಚಹಾಲ್‌ರಂತಹ ಸ್ಪಿನ್ನರ್‌ಗಳಿಗೆ ಸವಾಲಾಗಿರುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಯುಜವೇಂದ್ರ ಚಹಾಲ್‌ ಸದ್ಯ ಮಾಡುತ್ತಿರುವ ಸ್ಪಿನ್ ಜಾದೂ ಆಸ್ಟ್ರೇಲಿಯಾದಲ್ಲಿ ನಡೆಯದೇ ಇರಬಹುದು. ಆದ್ರೆ ಎಡಗೈ ವ್ರಿಸ್ಟ್‌ ಸ್ಪಿನ್ನರ್ ಕುಲ್‌ದೀಪ್‌ ಯಾದವ್ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ ಉತ್ತಮ ಎಂದು ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಕೆಎಲ್ ರಾಹುಲ್ ಇಲ್ಲದೆ ಯುಕೆಗೆ ಪ್ರಯಾಣ ಬೆಳೆಸಿದ ಭಾರತೀಯ ಟೆಸ್ಟ್ ತಂಡಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಕೆಎಲ್ ರಾಹುಲ್ ಇಲ್ಲದೆ ಯುಕೆಗೆ ಪ್ರಯಾಣ ಬೆಳೆಸಿದ ಭಾರತೀಯ ಟೆಸ್ಟ್ ತಂಡ

ಈ ಬಾರಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ತವರಿನಲ್ಲೇ ವಿಶ್ವಕಪ್‌ ನಡೆಯುತ್ತಿದ್ದು, ಅಕ್ಟೋಬರ್ 16ರಂದು ಚುಟುಕು ವಿಶ್ವಕಪ್ ಮಹಾಸಮರಕ್ಕೆ ಚಾಲನೆ ಸಿಗಲಿದೆ.

ಮಂಜ್ರೇಕರ್ ಪ್ರಕಾರ ಆಸ್ಟ್ರೇಲಿಯಾ ನೆಲದಲ್ಲಿ ಚಹಾಲ್ ಸ್ಪಿನ್ ಸಾಕಷ್ಟು ಪರೀಕ್ಷೆಗೆ ಒಳಪಡುತ್ತದೆ. ಆ ಪಿಚ್‌ನಲ್ಲಿನ ಬೌನ್ಸ್‌ ಎಡಗೈ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಈಗಾಗಲೇ ಕೆಲವು ತಂಡಗಳು ಕುಲ್‌ದೀಪ್ ಯಾದವ್‌ರನ್ನು ಎದುರಿಸಲು ಕಷ್ಟಪಟ್ಟಿವೆ. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್‌ ತಂಡದಲ್ಲಿ ಕುಲ್‌ದೀಪ್ ಯಾದವ್ ಇರಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.

"ಇನ್ನೊಂದು ವಿಷಯವೆಂದರೆ ವಿಶ್ವಕಪ್‌ನಲ್ಲಿ, ನೀವು ಪ್ರತಿ ಪಂದ್ಯದಲ್ಲೂ ವಿಭಿನ್ನ ತಂಡವನ್ನು ಆಡುತ್ತೀರಿ, ಆದ್ದರಿಂದ ಕುಲದೀಪ್ ಯಾದವ್ ಹೊಂದಿರುವ ಸ್ಪಿನ್ ಕೌಶಲ್ಯದ ವಿರುದ್ಧ ಅಷ್ಟು ಉತ್ತಮವಾಗಿಲ್ಲದ ತಂಡಗಳು ಬರುತ್ತವೆ" ಎಂದು ಮಂಜ್ರೇಕರ್ ಹೇಳಿದರು.

ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ಕಳೆದ ಟಿ 20 ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳಾದ ರಾಹುಲ್ ಚಹಾರ್ ಮತ್ತು ವರುಣ್ ಚಕ್ರವರ್ತಿ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.

"ಆಸ್ಟ್ರೇಲಿಯಾದಲ್ಲಿ ಟರ್ನಿಂಗ್ ಪಿಚ್‌ಗಳಲ್ಲಿ, ಚಹಾಲ್ ನಿಮ್ಮ ಪ್ರಮುಖ ಬೌಲರ್ ಆಗಿರುತ್ತಾರೆ, ಆದರೆ ನಾನು ಮೊದಲೇ ಹೇಳಿದಂತೆ, ಫ್ಲಾಟ್ ಬೌನ್ಸಿ ಪಿಚ್ ಒಂದು ಪಿಚ್ ಹೊರತುಪಡಿಸಿ, ಚಹಾಲ್ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ, ಆದರೆ ಅವರನ್ನು ಕರೆತರಲು ಅವರು ಇತರ ಅಂಶಗಳನ್ನು ಹೊಂದಿದ್ದಾರೆ" ಎಂದು ಮಾಜಿ ಆಟಗಾರ ಹೇಳಿದ್ದಾರೆ.

ಅಂದ್ರೆ ಖಂಡಿತವಾಗಿಯೂ ಟರ್ನಿಂಗ್ ಪಿಚ್‌ಗಳಲ್ಲಿ ಚಹಾಲ್‌ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿರುತ್ತಾರೆ ಎಂದು ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.

Story first published: Thursday, June 16, 2022, 14:47 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X