ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಆಟಗಾರರಿಗೆ ಭಾರತ ಪ್ರವಾಸದ್ದೇ ಚಿಂತೆ: ಇದೇ ನನ್ನ ಮುಖ್ಯ ಗುರಿ ಎಂದ ಯುವ ಕ್ರಿಕೆಟಿಗ

Australian spinner Mitchell Swepson said India tour is definitely a goal of mine

ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ ಅತ್ತ ಶ್ರೀಲಂಕಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಅದಾಗಲೇ ಮುಂದಿನ ವರ್ಷ ನಡೆಯಲಿರುವ ಭಾರತ ಪ್ರವಾಸದ ಬಗ್ಗೆ ಯೋಚನೆಯಲ್ಲಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಮುಂದಿನ ವರ್ಷ ನಡೆಯಲಿರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುವ ಬಗ್ಗೆ ಇತ್ತೀಚೆಗಷ್ಟೇ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿಕೆ ನೀಡಿದ್ದರು. ಇದೀಗ ಯುವ ಕ್ರಿಕೆಟಿಗ ಕುಡ ಭಾರತ ಪ್ರವಾಸದ ವಿಚಾರವಾಗಿ ತಮ್ಮ ಗುರಿ ಹಂಚಿಕೊಂಡಿದ್ದಾರೆ.

ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸದ ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ಮೂರನೇ ದಿನದಲ್ಲಿಯೇ ಗೆಲುವು ಸಾಧಿಸಿತು. ಹೀಗಾಗಿ ಆಸಿಸ್ ಪಡೆಯ ಆತ್ಮವಿಶ್ವಾಸ ಹೆಚ್ಚಾಗಿದೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಭಾರತ ಪ್ರವಾಸ ನನ್ನ ಗುರಿ ಎಂದ ಸ್ವೆಪ್ಸನ್

ಭಾರತ ಪ್ರವಾಸ ನನ್ನ ಗುರಿ ಎಂದ ಸ್ವೆಪ್ಸನ್

ಆಸ್ಟ್ರೇಲಿಯಾ ತಂಡದ ಯುವ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಇದೀಗ ಭಾರತ ಪ್ರವಾಸದ ಬಗ್ಗೆ ಕನಸು ಹಂಚಿಕೊಂಡಿರುವ ಯುವ ಆಟಗಾರನಾಗಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿರುವ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಪ್ರವಾಸದಲ್ಲಿ ಸರಣಿ ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ

ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ

ಮಿಚೆಲ್ ಸ್ವೆಪ್ಸನ್ ಈ ವರ್ಷ ಪಾಕಿಸ್ತಾನದ ವಿರುದ್ಧದ ಸರಣಿಯ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪನೆ ಮಾಡಿದರು. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನಿಡಿ ಮಿಂಚಿದ್ದಾರೆ ಮಿಚೆಲ್ ಸ್ವೆಪ್ಸನ್. ಈ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಕಬಳಿಸಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಈ ಪಂದ್ಯವನ್ನು ಕೇವಲ ಮೂರನೇ ದಿನದಲ್ಲಿಯೇ ಸುಲಭವಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ನನ್ನ ಒಂದು ಕಣ್ಣು ಭಾರತ ಪ್ರವಾಸದ ಮೇಲಿದೆ

ನನ್ನ ಒಂದು ಕಣ್ಣು ಭಾರತ ಪ್ರವಾಸದ ಮೇಲಿದೆ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ವೆಪ್ಸನ್ ಕ್ರಿಕೆಟ್.ಕಾಮ್.ಎಯುಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಒಂದು ಕಣ್ಣು ಖಂಡಿತವಾಗಿಯೂ ಭಾರತದ ಪ್ರವಾಸದ ಮೇಲಿದೆ ಎಂದು ಹೇಳಿಕೊಂಡಿದ್ದಾರೆ. "ಖಂಡಿತವಾಗಿಯೂ ನನ್ನ ಒಂದಯ ಕಣ್ಣು ಭಾರತ ಪ್ರವಾಸದ ಮೇಲಿದೆ. ಅದು ನನ್ನ ಪ್ರಮುಖ ಗುರಿಯಾಗಿದ್ದು ಅಲ್ಲಿ ಸರಣಿ ಗೆಲುವು ಸಾಧಿಸುವುದು ನನ್ನ ಕನಸಾಗಿದೆ. ಅದು ಸಾಧ್ಯವಾದರೆ ನಿಜಕ್ಕೂ ಅದ್ಭುತ. ಆದರೆ ಅದಕ್ಕೂ ಮುನ್ನ ಸಾಕಷ್ಟು ಸರಣಿಗಳು ನಡೆಯಲಿದ್ದು ಅಲ್ಲಿ ವೇಗಿಗಳಿಗೆ ಹೆಚ್ಚು ಆದ್ಯತೆ ದೊರೆಯಬಹುದು" ಎಂದಿದ್ದಾರೆ.

India ಎರಡನೇ ಇನ್ನಿಂಗ್ಸ್ ನಲ್ಲಿ ಠುಸ್, ವನಿತೆಯರೇ ಸೂಪರ್ Reverse swing 02 | *CricketWrap | OneIndia Kannada
ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿದೆ ಆಸ್ಟ್ರೇಲಿಯಾ

ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿದೆ ಆಸ್ಟ್ರೇಲಿಯಾ

ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ಮುಂದಿನ ವರ್ಷ ಭಾರತಕ್ಕೆ ಪ್ರವಾಸ ನಡೆಸಲಿದೆ. ಫೆಬ್ರವರಿ- ಮಾರ್ಚ್ ತಿಂಗಳಿನಲ್ಲಿ ಈ ಸರಣಿ ಆಯೋಜನೆಯಾಗುವ ಸಂಭವವಿದೆ. ಇನ್ನು ತನ್ನ ತವರಿನಲ್ಲಿಯೇ ಭಾರತದ ವಿರುದ್ಧ ಸತತ ಎರಡು ಬಾರಿ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಸೋತಿರುವ ಆಸಿಸ್ ಪಡೆ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ ಪ್ಯಾಟ್ ಕಮ್ಮಿನ್ಸ್ ಪಡೆ.

Story first published: Tuesday, July 5, 2022, 10:16 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X