ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮಿಚೆಲ್ ಮಾರ್ಶ್ ಬಳಿಕ ಮತ್ತೋರ್ವ ಆಸಿಸ್ ಸ್ಟಾರ್ ವೇಗಿ ಐಪಿಎಲ್‌ನಿಂದ ಹೊರಕ್ಕೆ!

Australian star pacer Josh Hazlewood pulls out of IPL 2021

ಐಪಿಎಲ್ 14ನೇ ಆವೃತ್ತಿಗೆ ಇನ್ನು ಕೇವಲ 9 ದಿನಗಳು ಮಾತ್ರವೇ ಬಾಕಿ ಇದೆ. ಈ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಿಚೆಲ್ ಮಾರ್ಶ್ ಬಳಿಕ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕೊನೆಯ ಹಂತದಲ್ಲಿ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ ಆಟಗಾರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಬೇಕಿದ್ದ ಜೋಶ್ ಹ್ಯಾಜಲ್‌ವುಡ್ ದೀರ್ಘಕಾಲದ ಬಯೋಬಬಲ್ ಜೀವನಕ್ಕೆ ಬ್ರೇಕ್ ನೀಡಿ ಕುಟುಂಬದ ಜೊತೆಗೆ ಸಮಯವನ್ನು ಕಳೆಯಲು ನಿರ್ಧಾರವನ್ನು ಮಾಡಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಯುಜುವೇಂದ್ರ ಚಾಹಲ್ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಯುಜುವೇಂದ್ರ ಚಾಹಲ್

ಮುಂಬರುವ ಆಶಸ್ ಸರಣಿ ಹಾಗೂ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತನ್ನಲ್ಲಿ ಚೈತನ್ಯವನ್ನು ಕಾಪಾಡಿಕೊಳ್ಳಲು ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಠಿಣವಾದ ಬಯೋಬಬಲ್‌ನಿಂದ ಹೊರಗುಳಿದು ಕುಟುಂಬದೊಂದಿಗೆ ಸಮಯಕಳೆಯುವ ನಿರ್ಧಾರ ಕೈಗೊಂಡಿದ್ದಾರೆ ಜೋಶ್ ಹ್ಯಾಜಲ್‌ವುಡ್.

"ನಾನು ಕಳೆದ 10 ತಿಂಗಳಿನಿಂದ ಬಯೋಬಬಲ್‌ನಲ್ಲಿ ಇದ್ದು ಹಲವು ಬಾರಿ ಕ್ವಾರಂಟೈನ್ ಅನುಭವಿಸಿದ್ದೇನೆ. ಈಗ ನಾನು ಕ್ರಿಕೆಟ್‌ನಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ನಿರ್ಧಾರಿಸಿದ್ದು ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಆಸ್ಟ್ರೇಲಿಯಾದಲ್ಲೆ ಮುಂದಿನ ಎರಡು ತಿಂಗಳು ಕಳೆಯಲು ಬಯಸುತ್ತೇನೆ" ಎಂದು ಕ್ರಿಕೆಟ್.ಕಾಮ್.ಎಯು ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹ್ಯಾಜಲ್‌ವುಡ್ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನಲು ಪ್ರಮುಖ 3 ಕಾರಣಗಳಿವು!ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನಲು ಪ್ರಮುಖ 3 ಕಾರಣಗಳಿವು!

ಈ ಮೂಲಕ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡ ಮೂರನೇ ಆಸ್ಟ್ರೇಲಿಯನ್ ಕ್ರಿಕೆಟರ್ ಆಗಿದ್ದಾರೆ ಜೋಶ್ ಹ್ಯಾಜಲ್‌ವುಡ್. ಇದಕ್ಕೂ ಮುನ್ನ ಆರ್‌ಸಿಬಿಯ ಜೋಶ್ ಫಿಲಿಪ್ಪೆ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಿಚೆಲ್ ಮಾರ್ಶ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು.

Story first published: Thursday, April 1, 2021, 9:48 [IST]
Other articles published on Apr 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X