ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜನಾಂಗೀಯ ನಿಂದನೆ ಪ್ರಕರಣ: ಆರ್ಚರ್‌ನ್ನು ನಿಂದಿಸಿದ ವ್ಯಕ್ತಿ ಪತ್ತೆ?

Authorities reportedly identify culprit who racially abused Jofra Archer

ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನ ಅಂತ್ಯದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರ ಜನಾಂಗೀಯ ನಿಂದನೆ ನಡೆದಿತ್ತು ಎಂದು ಸ್ವತಃ ಅರ್ಚರ್ ಆರೋಪವನ್ನು ಮಾಡಿದ್ದಾರೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರಕರಣದ ತನಿಖೆಗೆ ಸೂಚಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ ಎಂದು ತಿಳಿದುಬರುತ್ತಿದೆ.

ಸದ್ಯದ ಬೆಳವಣಿಗೆಯಲ್ಲಿ ಜೋಫ್ರ ಆರ್ಚರ್ ಅವರನ್ನು ನಿಂದನೆ ಮಾಡಿದ ವ್ಯಕ್ತಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದ ಎನ್ನಲಾಗ್ತಿದೆ. ಇದು ವ್ಯಕ್ತಿಯಪತ್ತೆಗೆ ಪ್ರಮುಖ ಕಾರಣವಾಗಲಿದ್ದು ಇದೇ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿರಬಹುದು ಎಂದು ಇಎಸ್‌ಪಿಎನ್ ವರದಿ ಮಾಡಿದೆ.

ಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆ

ವೇಗಿ ಜೋಫ್ರಾ ಆರ್ಚರ್ ಅವರನ್ನು ಜನಾಂಗೀಯ ನಿಂದನೆ ಮಾಡಿದ ವ್ಯಕ್ತಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ. ಹೀಗಾಗಿ ಗ್ಯಾಲರಿಯಲ್ಲಿದ್ದ ಸಿಸಿಟಿವಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆರ್ಚರ್ ವಿಷಯವನ್ನು ತಿಳಿಸಿದ್ದರು. ಅವರ ಸಹಾಯದಿಂದ ಪ್ರಕರಣವನ್ನು ಭೇದಿಸಲು ನ್ಯೂಜಿಲ್ಯಾಂಡ್ ಕ್ರಿಕೆಟ್ ಮುಂದಾಗಿದೆ.

ವೀಡಿಯೋಗೇಮ್: ಮನರಂಜನೆ ಮಾತ್ರವಲ್ಲ ಹಣವೂ ಗಳಿಸಬಹುದು!ವೀಡಿಯೋಗೇಮ್: ಮನರಂಜನೆ ಮಾತ್ರವಲ್ಲ ಹಣವೂ ಗಳಿಸಬಹುದು!

ನಿನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಅಂತ್ಯವಾಗಿ ಇಂಗ್ಲೆಂಡ್ ಇನ್ನಿಂಗ್ಸ್ ಅಂತರದಿಂದ ನ್ಯೂಜಿಲ್ಯಾಂಡ್‌ಗೆ ಶರಣಾಗಿತ್ತು. ಪಂದ್ಯದ ಅಂತ್ಯದಲ್ಲಿ ವಿಕೆಟ್ ಒಪ್ಪಿಸಿ ಫೆಲಿವಿಯನ್‌ಗೆ ವಾಪಾಸ್ಸಾಗುತ್ತಿದ್ದಾಗ ಆರ್ಚರ್ ಪ್ರೇಕ್ಷಕನಿಂದ ನಿಂದನೆಗೆ ಒಳಗಾಗಿದ್ದರು. ಘಟನೆಗೆ ತಕ್ಷಣವೇ ನ್ಯೂಜಿಲ್ಯಾಂಡ್ ಕ್ರಿಕೆಟ್ ಕ್ಷಮೆಯಾಚನೆಯನ್ನು ಮಾಡಿತ್ತು. ಇವತ್ತು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್‌ನ್‌ ಕೂಡ ಘಟನೆಗೆ ಜೋಫ್ರಾ ಆರ್ಚರ್ ಬಳಿ ಕ್ಷಮೆಯಾಚಿಸಿದ್ದಾರೆ.

Story first published: Tuesday, November 26, 2019, 17:33 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X