ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?

Azharuddin led India in three World Cups but could reach semi-final only once

ಬೆಂಗಳೂರು, ಮೇ 09: ಭಾರತ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕರಲ್ಲಿ ಮೊಹಮ್ಮದ್‌ ಅಝರುದ್ದೀನ್‌ ಕೂಡ ಒಬ್ಬರು. ಭಾರತ ತಂಡವನ್ನು ಒಂದು ದಶಕ ಕಾಲ ಮುನ್ನಡೆಸಿದ ಕೀರ್ತಿ ಹೈದರಾಬಾದ್‌ ಮೂಲದ ದಿಗ್ಗಜ ಆಟಗಾರನದ್ದು.

ಫ್ಲ್ಯಾಷ್‌ಬ್ಯಾಕ್‌: ಪಿಚ್‌ ಮಧ್ಯದಲ್ಲಿ ಮೋರೆ-ಜಾವೇದ್‌ ಜಟಾಪಟಿಫ್ಲ್ಯಾಷ್‌ಬ್ಯಾಕ್‌: ಪಿಚ್‌ ಮಧ್ಯದಲ್ಲಿ ಮೋರೆ-ಜಾವೇದ್‌ ಜಟಾಪಟಿ

ತಮ್ಮ 27ನೇ ವಯಸ್ಸಿಗೆ ಭಾರತ ತಂಡದ ಲಗಾಮು ಹಿಡಿದ ಅಝರ್‌, ಒಂದು ರೀತಿಯಲ್ಲಿ ಖಾಯಂ ನಾಯಕನಾಗಿದ್ದರು. ಈ ಅವಧಿಯಲ್ಲಿ ಅವರು 1992, 1996 ಮತ್ತು 1999ರ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡದ ಸಾರಥ್ಯ ವಹಿಸಿದ್ದರು. ಅದರಲ್ಲಿ 1996ರಲ್ಲಿ ನಡೆದ ವಿಶ್ವಕಪ್‌ನಲ್ಲಿ ತಂಡವನ್ನು ಸೆಮಿಫೈನಲ್‌ ವರೆಗೆ ಕರೆದೊಯ್ದದ್ದು ಅವರ ಶ್ರೇಷ್ಠ ಸಾಧನೆ.

ಫ್ಲ್ಯಾಷ್‌ಬ್ಯಾಕ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌ ಫ್ಲ್ಯಾಷ್‌ಬ್ಯಾಕ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌

ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಹಾಗೂ ರಾಹುಲ್‌ ದ್ರಾವಿಡ್‌ ಅವರಂತಹ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಬೆಳೆದು ಬಂದದ್ದು ಅಝರ್‌ ಅವರ ನಾಯಕತ್ವದಲ್ಲಿ ಎಂಬುದು ವಿಶೇಷ.

ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ

ಇನ್ನು ವಿಶ್ವಕಪ್‌ನಲ್ಲಿ ತಂಡವೊಂದನ್ನು ಮೂರು ಬಾರಿ ಮುನ್ನಡೆಸಿದ ಕೆಲವೇ ನಾಯಕರುಗಳಲ್ಲಿ ಅಝರ್‌ ಕೂಡಾ ಒಬ್ಬರು. ವೆಸ್ಟ್‌ ಇಂಡೀಸ್‌ನ ಕ್ಲೈವ್‌ ಲಾಯ್ಡ್‌ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಈ ಸಾಧನೆ ಮಾಡಿದ ನಾಯಕರಾಗಿದ್ದು, ಎರಡು ಬಾರಿ ತಮ್ಮ ತಂಡಗಳಿಗೆ ವಿಶ್ವ ಕಿರೀಟವನ್ನು ಗೆದ್ದು ಕೊಟ್ಟಿದ್ದಾರೆ.

1992 ವಿಶ್ವಕಪ್‌ ಟೂರ್ನಿ

ಅಝರುದ್ದೀನ್‌ ಮೊದಲ ಬಾರಿ ವಿಶ್ವಕಪ್‌ನಲ್ಲಿ ಭಾರತ ತಂಡದವನ್ನು ಮುನ್ನಡೆಸಿದರು. ಆಡಿದ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್‌ ಎದುರು ಮಂಡಿಯೂರಿದ್ದ ಅಝರ್‌ ಪಡೆ ಟೂರ್ನಿಯಲ್ಲಿ ಸ್ಪರ್ಧಿಸಿದ ಒಟ್ಟು 9 ತಂಡಗಳ ಪೈಕಿ ನಿರಾಶಾದಾಯಕ ರೀತಿಯಲ್ಲಿ 7ನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು. ಟೂರ್ನಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಮಾತ್ರ ಗೆದ್ದರೆ, ಮತ್ತೊಂದು ಪಂದ್ಯದಲ್ಲಿ ಮಳೆಯಿಂದಾಗಿ ಅಂಕ ಹಂಚಿಕೊಂಡಿತ್ತು. ಉಳಿದಂತೆ 5 ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು. ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸಿಕ್ಕಂತಹ ಗೆಲುವು ಅವಿಸ್ಮರಣೀಯ. ಆದರೆ, ಭಾರತದ ಎದುರು ಸೋತರೂ ಇಮ್ರಾನ್‌ ಖಾನ್‌ ನೇತೃತ್ವದ ಪಾಕ್‌ ತಂಡ ವಿಶ್ವಕಪ್‌ ಮುಡಿಗೇರಿಸಿತ್ತು.

1996ರ ವಿಶ್ವಕಪ್‌ ಟೂರ್ನಿ

ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ 1996ರ ಕ್ರಿಕೆಟ್‌ ವಿಶ್ವಕಪ್‌ ಭಾರತದ ಪಾಲಿಗೆ ಮರೆಯಲಾಗದಂತದ್ದು. ತವರಿನಲ್ಲಿ ಟೂರ್ನಿ ನಡೆಯುತ್ತಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. ಲೀಗ್‌ ಹಂತದಲ್ಲಿ ದುರ್ಬಲವಾಗಿದ್ದ ವೆಸ್ಟ್‌ ಇಂಡೀಸ್‌, ಪದಾರ್ಪಣೆಯ ಟೂರ್ನಿಯನ್ನಾಡಿದ್ದ ಕೀನಾ ಮತ್ತು ಅಪಾಯಕಾರಿ ಜಿಂಬಾಬ್ವೆ ವಿರುದ್ಧ ಜಯ ದಾಖಲಿಸಿದ್ದ ಭಾರತ ತಂಡ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳೆದುರು ಸೋತು ನಾಕ್‌ಔಟ್ಸ್‌ಗೆ ಅರ್ಹತೆ ಪಡೆದಿತ್ತು. ಅದರಲ್ಲೂ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಸೆಮಿಫೈನಲ್ಸ್‌ ಪ್ರವೇಶಿಸಿದ್ದ ಭಾರತ, ಕೋಲ್ಕೊತಾಲ್ಲಿ ನಡೆದ ಉಪಾಂತ್ಯದ ಪಂದ್ಯದಲ್ಲಿ ಶ್ರೀಲಂಕಾ ಎದುರು ನಾಟಕೀಯ ರೀತಿಯಲ್ಲಿ ವಿಕೆಟ್‌ಗಳಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ಸ್ಟ್ಯಾಂಡ್ಸ್‌ಗಳಲ್ಲಿ ಬೆಂಕಿ ಹಚ್ಚಿದ ಪರಿಣಾಮ ಪಂದ್ಯವನ್ನು ರದ್ದು ಮಾಡಿ ಶ್ರೀಲಂಕಾ ತಂಡಕ್ಕೆ ಗೆಲುವು ಘೋಷಿಸಲಾಗಿತ್ತು. ಇದು ಅಝರ್‌ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ನಲ್ಲಿ ತೋರಿದ ಶ್ರೇಷ್ಠ ಪ್ರದರ್ಶನ. ಟೂರ್ನಿಯಲ್ಲಿ ಕುಂಬ್ಳೆ 15 ವಿಕೆಟ್‌ ಉರುಳಿಸಿದರೆ, ಸಚಿನ್‌ 523 ರನ್‌ ಚಚ್ಚಿ ಮಿಂಚಿದ್ದರಾದರೂ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಡಲು ಸಾಧ್ಯವಾಗಲಿಲ್ಲ.

1999 ವಿಶ್ವಕಪ್‌ ಟೂರ್ನಿ

ಭಾರತ ತಂಡ 1999ರ ವಿಶ್ವಕಪ್‌ ಟೂರ್ನಿಯಲ್ಲಿ ಸೂಪರ್‌ ಸಿಕ್ಸ್‌ ಹಂತದಲ್ಲಿ ಮುಗ್ಗರಿಸಿತ್ತು. 1996ರಲ್ಲಿ ಸಚಿನ್‌ ತೆಂಡೂಲ್ಕರ್‌ ಭಾರತ ತಂಡದ ನಾಯಕನಾಗಿದ್ದರು. ಆದರೆ, 1998ರಲ್ಲಿ ನಾಯಕತ್ವ ಮರಳಿ ಅಝರ್‌ ಕೈ ಹಿಡಿದಿತ್ತು. 1999ರ ವಿಶ್ವಕಪ್‌ನ ಮೊದಲೆರಡು ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಸೋತು ಕಂಗಾಲಾಗಿತ್ತು. ಆದರೆ, ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ರಾಹುಲ್‌ ದ್ರಾವಿಡ್‌ ಅವರ ಭರ್ಜರಿ ಪ್ರದರ್ಶನ ತಂಡವನ್ನು ಮರಳಿ ಜಯದ ಹಳಿಗೆ ತಂದು ನಿಲ್ಲಿಸಿತ್ತು. ಅಂತೆಯೇ ಸೂಪರ್‌ ಸಿಕ್ಸ್‌ ಹಂತಕ್ಕೆ ಮುನ್ನಡೆದ ಭಾರತ, ಅಂತಿಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿತು. ಆದರೂ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸತತ ಮೂರನೇ ಜಯ ದಾಖಲಿಸುವ ಮೂಕ ಭಾರತ ನಿಟ್ಟುಸಿರು ಬಿಟ್ಟಿತ್ತು.

ಅಝರ್‌ ಕ್ರಿಕೆಟ್‌ ಸಾಧನೆ

ಅಝರ್‌ ಕ್ರಿಕೆಟ್‌ ಸಾಧನೆ

ಭಾರತ ತಂಡದ ಪರ 99 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅಝರ್‌, 45.03ರ ಸರಾಸರಿಯಲ್ಲಿ 6215 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಬರೋಬ್ಬರಿ 22 ಶತಕ ಮತ್ತು 21 ಅರ್ಧಶತಕಗಳು ಸೇರಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಅಝರ್‌, 334 ಪಂದ್ಯಗಳನ್ನಾಡಿ 36.92ರ ಸರಾಸರಿಯಲ್ಲಿ7 ಶತಕ ಮತ್ತು 58 ಅರ್ಧಶತಕಗಳನ್ನು ಒಳಗೊಂಡ 9378 ರನ್‌ಗಳನ್ನು ಗಳಿಸಿದ್ದಾರೆ. ಅಝರುದ್ದೀನ್‌ ಭಾರತ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ 174 ಬಾರಿ ಮುನ್ನಡೆಸಿದ್ದು, 90 ಜಯ ಮತ್ತು 76 ಸೋಲಿನ ದಾಖಲೆ ಹೊಂದಿದ್ದಾರೆ. 2 ಪಂದ್ಯಗಳು ಟೈ ಫಲಿತಾಂಶ ಕಂಡಿದ್ದವು. ಕೇವಲ ಎಂ.ಎಸ್‌ ಧೋನಿ (200 ಪಂದ್ಯ, 110 ಗೆಲುವು) ಅಝರ್‌ಗಿಂತಲೂ ಮುಂದಿದ್ದಾರೆ.

Story first published: Wednesday, May 8, 2019, 19:22 [IST]
Other articles published on May 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X