ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗರ ಅದ್ಭುತ ಬೌಲಿಂಗ್‌, ಆಸೀಸ್ ಹೀನಾಯವಾಗಿ ಸೋತಿದ್ದು ಇದೇ ದಿನ!

Azharuddin magic hands Australia their heaviest post-war Test defeat

ಬೆಂಗಳೂರು, ಮಾರ್ಚ್ 21: ಆಸ್ಟ್ರೇಲಿಯಾ ವಿರುದ್ಧ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಗೆಲುವು ಕಂಡಿದ್ದು ಯಾವಾಗ ಅಂತ ಪ್ರಶ್ನೆ ಎಸೆದರೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳೆಲ್ಲ ಕೋಲ್ಕತ್ತಾದಲ್ಲಿ 2001ರ ಪಂದ್ಯ ನೆನಪಿಸಿಕೊಳ್ಳುತ್ತಾರೆ. ಅಂದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಸೋಲಿನಂತಿನಲ್ಲಿದ್ದ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.

ಕ್ರಿಕೆಟ್‌ ಆಡುವಂತಿದ್ದರೆ ಐಪಿಎಲ್‌ನಲ್ಲಿ ಸುನಿಲ್ ಛೆಟ್ರಿ ಈ ತಂಡಕ್ಕೆ ಆಡುತ್ತಿದ್ದರಂತೆ!ಕ್ರಿಕೆಟ್‌ ಆಡುವಂತಿದ್ದರೆ ಐಪಿಎಲ್‌ನಲ್ಲಿ ಸುನಿಲ್ ಛೆಟ್ರಿ ಈ ತಂಡಕ್ಕೆ ಆಡುತ್ತಿದ್ದರಂತೆ!

ಆದರೆ 2001ರಲ್ಲಿ ಆಸೀಸ್ ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ಸಿಕ್ಕಿತ್ತಾದರೂ ಅದು ಡೊಡ್ಡ ಗೆಲುವೇನಾಲ್ಲ. ಕಾಂಗರೂ ಪಡೆಯ ವಿರುದ್ಧ ಟೀಮ್ ಇಂಡಿಯಾಕ್ಕೆ ಬಲು ದೊಡ್ಡ ಗೆಲುವು ದೊರೆತಿದ್ದು 1998ರಲ್ಲಿ ಮಾರ್ಚ್ 21ರ ಇದೇ ದಿನ. 22 ವರ್ಷಗಳ ಹಿಂದೆ ಇದೇ ದಿನ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಮಾರಕ ಬೌಲಿಂಗ್, ಮೊಹಮ್ಮದ್ ಅಝರುದ್ದೀನ್ ಅತ್ಯುತ್ತಮ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ಗೆಲುವು ತಂದಿತ್ತು.

'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್

ಭಾರತಕ್ಕೆ ಪ್ರವಾಸ ಬಂದಿದ್ದ ಮಾರ್ಕ್ ಟೇಲರ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಅಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 89.4 ಓವರ್‌ಗೆ 233 ರನ್ ಮಾಡಿತ್ತು.

ಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರುಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರು

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ, ನಾಯಕ ಮೊಹಮ್ಮದ್ ಅಝರುದ್ದೀನ್ ಅಜೇಯ 163, ವಿವಿಎಸ್ ಲಕ್ಷ್ಮಣ್ 95, ನವಜೋತ್ ಸಿದ್ದು 97, ರಾಹುಲ್ ದ್ರಾವಿಡ್ 86, ಸಚಿನ್ ತೆಂಡೂಲ್ಕರ್ 79, ಸೌರವ್ ಗಂಗೂಲಿ 65, ನಯನ್ ಮೋಂಗಿಯಾ 30 ರನ್‌ನೊಂದಿಗೆ 159 ಓವರ್‌ಗೆ 633 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.

ಟಿ20 ವಿಶ್ವಕಪ್ ತಂಡದಲ್ಲಿ ಎಂ.ಎಸ್ ಧೋನಿ ಇರಲ್ಲ: ಸುನಿಲ್ ಗವಾಸ್ಕರ್ಟಿ20 ವಿಶ್ವಕಪ್ ತಂಡದಲ್ಲಿ ಎಂ.ಎಸ್ ಧೋನಿ ಇರಲ್ಲ: ಸುನಿಲ್ ಗವಾಸ್ಕರ್

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 88.4 ಓವರ್‌ಗೆ 181 ರನ್‌ ಬಾರಿಸಿ ಇನ್ನಿಂಗ್ಸ್‌ ಸಹಿತ 219 ರನ್ ಸೋಲು ಕಂಡಿತ್ತು. ಭಾರತ ಪರ ಜಾವಗಲ್ ಶ್ರೀನಾಥ್ 3+3, ಸೌರವ್ ಗಂಗೂಲಿ 3, ಅನಿಲ್ ಕುಂಬ್ಳೆ 3+5, ರಾಜೇಶ್ ಚೌಹಾಣ್ 1 ವಿಕೆಟ್ ಮುರಿದಿದ್ದರು. ಜಾವಗಲ್ ಶ್ರೀನಾಥ್ ಪಂದ್ಯಶ್ರೇಷ್ಠರೆನಿಸಿದ್ದರು. ಮೂರು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ವಿಜಯ ದಾಖಲಿಸಿತ್ತು.

Story first published: Saturday, March 21, 2020, 12:05 [IST]
Other articles published on Mar 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X