ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಸ್ತುತ ಈತನೇ ವಿಶ್ವದ ಗ್ರೇಟ್‌ ಪ್ಲೇಯರ್ ಎಂದ ಸೈಮನ್ ಡೌಲ್: ಕೊಹ್ಲಿ, ವಿಲಿಯಮ್ಸನ್, ರೋಹಿತ್‌ ಅಲ್ವೇ ಅಲ್ಲ!

Simon doull

ನ್ಯೂಜಿಲೆಂಡ್ ಮಾಜಿ ಆಟಗಾರ ಸೈಮನ್ ಡೌಲ್ ಪ್ರಸ್ತುತ ವಿಶ್ವದ ಬೆಸ್ಟ್ ಪ್ಲೇಯರ್ ಯಾರು ಎಂಬುದನ್ನ ಆಯ್ಕೆ ಮಾಡಿದ್ದು, ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಸದ್ಯ ವಿಶ್ವದ ಬೆಸ್ಟ್‌ ಎಂದಿದ್ದಾರೆ.

ಪಾಕಿಸ್ತಾನ ಪರ ಬಾಬರ್ ಅಜಮ್ ಪದಾರ್ಪಣೆ ಮಾಡಿದಾಗಿನಿಂದಲೂ ಉತ್ತಮ ಇನ್ನಿಂಗ್ಸ್ ಆಡುತ್ತಲೇ ಬಂದಿದ್ದಾರೆ. ಆತನ ಅದ್ಭುತ ಪ್ರದರ್ಶನದಿಂದಲೇ ಪಾಕಿಸ್ತಾನದ ಎಲ್ಲಾ ಕ್ರಿಕೆಟ್ ಫಾರ್ಮೆಟ್‌ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ ಎಂದು ಸೈಮನ್ ಅಭಿಪ್ರಾಯ ಪಟ್ಟಿದ್ದಾರೆ.

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬಾಬರ್ ಅದ್ಭುತ

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬಾಬರ್ ಅದ್ಭುತ

ಬಾಬರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದಿಲ್ಲ ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅವರು ಅದ್ಭುತವಾಗಿದ್ದಾರೆ. ಪಾಕಿಸ್ತಾನಕ್ಕಾಗಿ ಅವರ ಪ್ರದರ್ಶನ ಕಂಡು ಅನೇಕ ಅನುಭವಿಗಳು ಯಾವಾಗಲೂ ಬಾಬರ್ ಅಜಮ್ ಅವರನ್ನು ಹೊಗಳಿದ್ದಾರೆ.

ಪ್ರಸ್ತುತ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಕರೆದಿದ್ದಾರೆ. 2015ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಾಬರ್ ಅಜಮ್ ಎಲ್ಲಾ ಮೂರು ಮಾದರಿಗಳಲ್ಲಿ ಒಟ್ಟು 24 ಶತಕಗಳನ್ನು ಸಿಡಿಸಿದ್ದಾರೆ. ಈ ಪೈಕಿ 18 ಶತಕಗಳು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಬಂದಿರುವುದು ಅವರ ಪ್ರಾಬಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.

'ಅಪ್ಪನ ಕೈಲಾಗದ್ದನ್ನ ಮಗ ಮಾಡಿ ತೋರಿಸಿದ': 23 ವರ್ಷಗಳ ಬಳಿಕ ಕೋಚ್ ಚಂದ್ರಕಾಂತ್ ಪಂಡಿತ್ ಕನಸು ನನಸು

ಬಾಬರ್ ವಿಶ್ವದ ಬೆಸ್ಟ್ ಪ್ಲೇಯರ್

ಬಾಬರ್ ವಿಶ್ವದ ಬೆಸ್ಟ್ ಪ್ಲೇಯರ್

ನ್ಯೂಜಿಲೆಂಡ್ ಮಾಜಿ ವೇಗಿ ಪ್ರಕಾರ ಬಾಬರ್ ಪ್ರಸ್ತುತ ವಿಶ್ವದ ಬೆಸ್ಟ್ ಬ್ಯಾಟರ್ ಆಗಿದ್ದಾರೆ. ಬಾಬರ್ ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರ ಅಲ್ಲ ಎಂಬ ಬಗ್ಗೆ ಪ್ರಶ್ನೆ ಎತ್ತುವವರು ಬಹುಶಃ ಯಾರೂ ಇಲ್ಲ ಎಂದು ಡೌಲ್ ಹೇಳಿದರು. ಈಗ ಫ್ಯಾಬ್ ಫೋರ್‌ನಲ್ಲಿ ಅವರೇ ನಂಬರ್ ಒನ್ ಎಂದು ಸೈಮನ್ ಡೌಲ್ ಹೇಳಿದ್ದಾರೆ.

"ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಬಾಬರ್ ಅಜಮ್ ಬಹುಶಃ ಈ ಸಮಯದಲ್ಲಿ ವಿಶ್ವದ ಅತ್ಯುತ್ತಮ ಆಟಗಾರ ಎಂದು ವಾದಿಸಬಹುದು. ಆದ್ರೆ ಕೆಲವರು ನಂಬಲಾರರು ಏಕೆಂದರೆ ಜೋ ರೂಟ್ ಪರ ವಾದವನ್ನು ಮಾಡುವವರಿದ್ದಾರೆ. ಆದರೆ ನನ್ನ ಪ್ರಕಾರ, ಬಾಬರ್ ಅವರು ಫ್ಯಾಬ್ ಫೋರ್‌ನಲ್ಲಿ ಆತನೇ ದೊಡ್ಡವನ " ಎಂದು ಸೈಮನ್ ಡೌಲ್ ಹೇಳಿದರು.

ಟೈಮ್‌ಪಾಸ್ ಮಾಡಲು ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾಗದ್ದಾರೆ: ಕಿಡಿಕಾರಿದ ಪಾಕ್ ಮಾಜಿ ಕ್ರಿಕೆಟಿಗ

ಒಳ್ಳೆ ಪ್ರದರ್ಶನ ಕೊಡು , ಆಮೇಲೆ ನೋಡೋನ ! ಖಡಕ್ ಎಚ್ಚರಿಕೆ ಕೊಟ್ಟ ಬಿಸಿಸಿಐ | *Cricket | OneIndia Kannada
ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ

ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ

ಶತಕ ಸಿಡಿಸಿ ಎರಡೂವರೆ ವರ್ಷಗಳೇ ಕಳೆದು ಹೋಗಿರುವ ವಿರಾಟ್ ಕೊಹ್ಲಿ ಪ್ರಸ್ತುತ ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ. ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಏಕೈಕ ಆಟಗಾರ ಕೊಹ್ಲಿ, 70 ಅಂತರಾಷ್ಟ್ರೀಯ ಶತಕಗಳ ಒಡೆಯನಾದ ಬಳಿಕ, ಅವರ ಬ್ಯಾಟ್‌ನಿಂದ ಒಂದೂ ಶತಕ ಹೊರಬಂದಿಲ್ಲ.

ವಿರಾಟ್ ಕೊಹ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ರನ್‌ಗಳಿಸಲು ವಿಫಲರಾದರು. 16 ಇನ್ನಿಂಗ್ಸ್‌ಗಳಲ್ಲಿ 22.73 ರ ಕಳಪೆ ಸರಾಸರಿಯಲ್ಲಿ 341 ರನ್ ಗಳಿಸಿದರು. ಇದಕ್ಕೂ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕ ಸಿಡಿಸಿದ ಬಳಿಕ ವಿರಾಟ್ ಶತಕದ ಬರ ಎದುರಿಸುತ್ತಿದ್ದಾರೆ.

ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ರಲ್ಲೂ ಇಂಗ್ಲೆಂಡ್‌ ಪಿಚ್‌ನಲ್ಲಿ ಆ್ಯಂಡರ್ಸನ್ ಹಲವು ಬಾರಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಈ ಬಾರಿ ಆ್ಯಂಡರ್ಸನ್‌ಗೆ ವಿಕೆಟ್ ನೀಡದೇ ಇರುವುದು ಸಹ ದೊಡ್ಡ ಚಾಲೆಂಜ್ ಆಗಿದೆ. 2014 ರಲ್ಲಿ ಇಂಗ್ಲೆಂಡ್ ಪಿಚ್‌ಗಳಲ್ಲಿ 4 ಬಾರಿ ವಿರಾಟ್‌ನನ್ನು ಆ್ಯಂಡರ್ಸನ್ ಔಟ್ ಮಾಡಿದ್ದರು.

Story first published: Monday, June 27, 2022, 10:28 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X