ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಬರ್ ಅಝಾಮ್ ವಿರಾಟ್ ಕೊಹ್ಲಿನ ನೋಡಿ ಕಲೀಬೇಕು: ರಮೀಝ್ ರಾಜಾ

Babar Azam needs to learn how to win matches from Virat Kohli, says Ramiz Raza

ಕರಾಚಿ: ಪಂದ್ಯಗಳನ್ನು ಗೆಲ್ಲೋದು ಹೇಗೆಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೋಡಿ ಕಲೀಬೇಕು ಎಂದು ಪಾಕಿಸ್ತಾನ ಮಾಜಿ ಆಟಗಾರ ರಮೀಝ್ ರಾಜಾ ಅವರು ಬಾಬರ್ ಅಝಾಮ್‌ಗೆ ಕಿವಿ ಮಾತು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಂಬಂಧಿಸಿ ರಾಜಾ ಈ ಹೇಳಿಕೆ ನೀಡಿದ್ದಾರೆ.

ಟಿ20ಐ ರ್‍ಯಾಂಕಿಂಗ್ಸ್: ಬಾಬರ್ ಬೆನ್ನ ಹಿಂದಿದ್ದಾರೆ ಕನ್ನಡಿಗ ಕೆಎಲ್ ರಾಹುಲ್ಟಿ20ಐ ರ್‍ಯಾಂಕಿಂಗ್ಸ್: ಬಾಬರ್ ಬೆನ್ನ ಹಿಂದಿದ್ದಾರೆ ಕನ್ನಡಿಗ ಕೆಎಲ್ ರಾಹುಲ್

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕ್‌ 1-0ಯ ಸೋಲನುಭವಿಸಿದೆ (2 ಪಂದ್ಯ ಡ್ರಾ). ಪಾಕಿಸ್ತಾನ ವೈಟ್ ಬಾಲ್ ಕ್ರಿಕೆಟ್ ನಾಯಕ ಬಾಬರ್ ಅವರನ್ನು ವಿರಾಟ್‌ಗೆ ಹೋಲಿಸಲಾಗುತ್ತಿರುವುದರಿಂದ ಟೆಸ್ಟ್‌ ವೇಳೆ ಬಾಬರ್ ಮೇಲೆ ಪಾಕ್ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು.

ಐಪಿಎಲ್: ವೇಳಾಪಟ್ಟಿ ವಿಳಂಬಕ್ಕೆ ಕಾರಣ ಬಹಿರಂಗ: ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡ ಬಿಸಿಸಿಐಐಪಿಎಲ್: ವೇಳಾಪಟ್ಟಿ ವಿಳಂಬಕ್ಕೆ ಕಾರಣ ಬಹಿರಂಗ: ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡ ಬಿಸಿಸಿಐ

ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಬಾಬರ್ 48.75ರ ಸರಾಸರಿಯಂತೆ 195 ರನ್ ಗಳಿಸಲಷ್ಟೇ ಶಕ್ತವಾಗಿದ್ದಾರೆ. ಇದರಲ್ಲಿ 2 ಅರ್ಧ ಶತಕಗಳು ಸೇರಿವೆ. ಆದರೆ ಬಾಬರ್ ಈ ರನ್ ಪಾಕ್ ಅಭಿಮಾನಿಗಳಿಗೆ ಅಥವಾ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ. ರಾಜಾ ಕೂಡ ಇದೇ ಅರ್ಥದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

'ಬಾಬರ್ ಅವರನ್ನು ಕೊಹ್ಲಿಗೆ ಹೋಲಿಸೋದು ಸರಿಯಲ್ಲ. ಕೊಹ್ಲಿ ಮ್ಯಾಚ್ ವಿನ್ನರ್. ಬಾಬರ್ ಈಗಷ್ಟೇ ಬೆರಳೆಣಿಕೆಯ ಪಂದ್ಯಗಳನ್ನಾಡುತ್ತಿದ್ದಾರೆ. ಕೊಹ್ಲಿಗೆ ಹೋಲಿಸುವುದನ್ನು ಬಾಬರ್ ಒತ್ತಡವಾಗಿ ತೆಗೆದುಕೊಳ್ಳಬಾರದು,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ರಮೀಝ್ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!

ಮಾತು ಮುಂದುವರೆಸಿದ ರಮೀಝ್, 'ಪಂದ್ಯಗಳನ್ನು ಗೆಲ್ಲೋದು ಹೇಗೆಂದು ಬಾಬರ್ ಅಝಾಮ್ ಅವರು ಕೊಹ್ಲಿಯಿಂದ ಕಲಿಯಬೇಕಿದೆ. ಬ್ಯಾಟಿಂಗ್ ಮಾಡುವಾಗ ಬಾಬರ್ ಚೆಂಡಿನ ಕಡೆಗೆ ನೋಡಬೇಕೇ ಹೊರತು ಕೊಹ್ಲಿ ಜೊತೆಗಿನ ಹೋಲಿಕೆಯ ಬಗ್ಗೆ ಚಿಂತಿಸಬಾರದು,' ಎಂದಿದ್ದಾರೆ.

Story first published: Friday, August 28, 2020, 16:10 [IST]
Other articles published on Aug 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X