ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನೀಡಿದ್ದ ಬ್ಯಾಟಿಂಗ್ ಟಿಪ್ಸ್ ನೆನೆದ ಬಾಬರ್ ಅಜಂ

Babar Azam recalls how Virat Kohli’s advice helped him improve his game

ಬುಧವಾರ ( ಏಪ್ರಿಲ್ 14 ) ಐಸಿಸಿ ಹೊಸ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿತು. ಈ ನೂತನ ಏಕದಿನ ಶ್ರೇಯಾಂಕ ಪಟ್ಟಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಪ್ರತಿಭಾವಂತ ಆಟಗಾರ ಬಾಬರ್ ಅಜಂ ಇದೇ ಮೊದಲ ಬಾರಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸತತವಾಗಿ 1258 ದಿನಗಳ ಕಾಲ ಅತ್ಯುತ್ತಮ ಏಕದಿನ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಜಾರಿದ್ದಾರೆ.

ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನೂತನ ಏಕದಿನ ನಂ.1 ಬ್ಯಾಟ್ಸ್‌ಮನ್‌ ಬಾಬರ್ ಅಜಂ ತನ್ನ ಸಹ ಆಟಗಾರ ಇಮಾಮ್ ಉಲ್ ಹಕ್ ಜೊತೆ ಮಾತುಕತೆ ನಡೆಸಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ಬಾಬರ್ ಅಜಂ ತಮ್ಮ ಕ್ರಿಕೆಟ್ ಜೀವನದ ಕುರಿತು ಮತ್ತು ಈ ಮಟ್ಟದ ಸಾಧನೆ ಮಾಡಿದ ಹಾದಿ ಹೇಗಿತ್ತು ಎಂಬುದನ್ನು ಹಂಚಿಕೊಂಡರು.

embed :

ಇದೇ ವೇಳೆ ಬಾಬರ್ ಅಜಂ ವಿರಾಟ್ ಕೊಹ್ಲಿ ಅವರು ನೀಡಿದ್ದ ಸಲಹೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಹೌದು ಬಾಬರ್ ಅಜಂಗೆ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದರ ಕುರಿತು ಸಲಹೆಯನ್ನು ನೀಡಿದ್ದರು. ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ಗಂಭೀರವಾಗಿ ನಾನು ಅಭ್ಯಾಸದಲ್ಲಿ ತೊಡಗುತ್ತಿರಲಿಲ್ಲ ಹೀಗಾಗಿ ಪಂದ್ಯದಲ್ಲಿ ನಾನು ಹೇಗೆ ಆಟವಾಡುತ್ತೇನೆ ಅಂತ ಭಯವಿತ್ತು ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಸಲಹೆ ಪಡೆದಿದ್ದೆ ಎಂದು ಅಜಂ ತಿಳಿಸಿದ್ದಾರೆ.

ನೆಟ್ ಪ್ರಾಕ್ಟೀಸ್ ಸಮಯದಲ್ಲಿ ಗಂಭೀರವಾಗಿರಬೇಕು, ಅದನ್ನು ಪಂದ್ಯದಷ್ಟೇ ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಕಾರಣಕ್ಕೂ ದುಡುಕಿನ ಹೊಡೆತಕ್ಕೆ ಕೈ ಹಾಕಬಾರದು, ನೆಟ್ ಪ್ರಾಕ್ಟೀಸ್ ನಲ್ಲಿ ಯಾವ ರೀತಿ ಆಡುತ್ತೇವೋ ಅದೇ ರೀತಿ ಪಂದ್ಯದಲ್ಲಿಯೂ ಸಹ ಆಡುತ್ತೇವೆ ಎಂದು ವಿರಾಟ್ ಕೊಹ್ಲಿ ನೀಡಿದ್ದ ಸಲಹೆಯನ್ನು ಬಾಬರ್ ಅಜಂ ಹಂಚಿಕೊಂಡಿದ್ದಾರೆ.

Story first published: Thursday, April 15, 2021, 14:42 [IST]
Other articles published on Apr 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X