ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಬರ್ ಅಝಾಮ್ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ: ಸಕ್ಲೇನ್ ಮುಷ್ತಾಕ್

Babar Azam’s calmness gives him edge over Virat Kohli says Saqlain Mushtaq

ಲಾಹೋರ್, ಜೂನ್ 16: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಝಾಮ್‌ಗೆ ಹೋಲಿಕೆ ಮಾಡಿರುವ ಪಾಕ್ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್, ಬಾಬರ್ ಅವರ ಶಾಂತ ಸ್ವಭಾವ ಅವರು ಕೊಹ್ಲಿಯನ್ನು ಮೀರಿಸುವಂತೆ ಮಾಡಿದೆ ಎಂದಿದ್ದಾರೆ.

ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!

ಈಗಿನ ಪೀಳಿಗೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಾಮ್ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೆಂದು ಗುರುತಿಸಿಕೊಂಡಿದ್ದಾರೆ. ಸಾಧನೆ, ಪ್ರತಿಭೆಯ ವಿಚಾರದಲ್ಲಿ ಇಬ್ಬರಿಗೂ ಕೊಂಚ ಸಾಮ್ಯತೆ ಇದ್ದಂತಿದೆ. ಆದರೆ ಇಬ್ಬರ ಮಧ್ಯೆ ಬಹಳಷ್ಟು ವ್ಯತ್ಯಾಸಗಳಿಗೆ. ಅದು ಸ್ವಭಾವ, ಬ್ಯಾಟಿಂಗ್ ಶೈಲಿ, ಅನುಭವ ಇತ್ಯಾದಿಗಳನ್ನು ಅವಲಂಭಿಸಿದೆ.

ಬೌಲರ್‌ಗಳು ಚೆಂಡಿಗೆ ಎಂಜಲೇಕೆ ಸವರುತ್ತಾರೆ?: ಕ್ರಿಕೆಟಿಗರ ವಿವರಣೆ ಇಲ್ಲಿದೆಬೌಲರ್‌ಗಳು ಚೆಂಡಿಗೆ ಎಂಜಲೇಕೆ ಸವರುತ್ತಾರೆ?: ಕ್ರಿಕೆಟಿಗರ ವಿವರಣೆ ಇಲ್ಲಿದೆ

ವಿರಾಟ್ ಮತ್ತು ಬಾಬರ್ ಇಬ್ಬರೂ ಮಾನಸಿಕವಾಗಿ ಸಾಕಷ್ಟು ಗಟ್ಟಿಯಾಗಿದ್ದಾರೆ. ಆದರೆ ಒಂದೇ ಒಂದು ವಿಚಾರದಲ್ಲಿ ಬಾಬರ್, ಕೊಹ್ಲಿಗಿಂತ ಕೊಂಚ ಎತ್ತರಕ್ಕೆ ನಿಲ್ಲುತ್ತಾರೆ ಎಂದು ಮುಷ್ತಾಕ್ಹೇಳಿದ್ದಾರೆ. 31ರ ಹರೆಯದ ಕೊಹ್ಲಿ 2008ರಲ್ಲಿ ನಿಯಮಿತ ಓವರ್‌ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ್ದರು. ಇತ್ತ ಬಾಬರ್ ಕೊಹ್ಲಿಗಿಂತ 6 ವರ್ಷ ಕೊಹ್ಲಿಗಿಂತ ಚಿಕ್ಕವ. ಅಂದರೆ 25 ವರ್ಷದವ.

ಆಧುನಿಕ ಕ್ರಿಕೆಟ್‌ನ ಬೆಸ್ಟ್ ಫೀಲ್ಡರ್ ಹೆಸರಿಸಿದ ಆಸಿಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ಆಧುನಿಕ ಕ್ರಿಕೆಟ್‌ನ ಬೆಸ್ಟ್ ಫೀಲ್ಡರ್ ಹೆಸರಿಸಿದ ಆಸಿಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್

'(ಕೊಹ್ಲಿ, ಬಾಬರ್) ಇಬ್ಬರೂ ಶ್ರೇಷ್ಠ ಆಟಗಾರರು. ಇಬ್ಬರಲ್ಲೂ ವಿಶೇಷ ಕೌಶಲಗಳಿವೆ. ಇಬ್ಬರ ಮಾನಸಿಕತೆಯೂ ಗಟ್ಟಿಯಾಗಿದೆ. ಹೆಚ್ಚು ರನ್ ಗಳಿಸುವ ಹಂಬಲ ಇಬ್ಬರೊಳಗೂ ಇದೆ,' ಎಂದು ಕ್ರಿಕೆಟ್ ಪಾಕಿಸ್ತಾನ ಜೊತೆ ಮಾತನಾಡುತ್ತ ಸಕ್ಲೇನ್ ಹೇಳಿಕೊಂಡಿದ್ದಾರೆ.

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

ಮಾತು ಮುಂದುವರೆಸಿದ ಮುಷ್ತಾಕ್, 'ಕೊಹ್ಲಿ ಬಲು ಆಕ್ರಮಣಕಾರಿ ಆಟಗಾರ. ಇತ್ತ ಬಾಬರ್ ವಿನಮ್ರ ಆಟಗಾರ. ಕ್ರೀಡಾ ವಿಜ್ಞಾನದತ್ತ ನಾವು ನೋಡಿದರೆ ಬಾಬರ್‌ನ ಈ ಶಾಂತ ಸ್ವಭಾವ ಆತನನ್ನು ಕೊಹ್ಲಿಯನ್ನು ಮೀರಿಸುವಂತೆ ಮಾಡುತ್ತದೆ. ಆದರೆ ಬಾಬರ್ ಅವರನ್ನು ಕೊಹ್ಲಿಗೆ ಹೋಲಿಸುವುದು ನ್ಯಾಯಸಮ್ಮತವಲ್ಲ. ಯಾಕೆಂದರೆ ಕೊಹ್ಲಿ ಬಹಳ ಮೊದಲಿನಿಂದಲೇ, ವಿಶ್ವದಾದ್ಯಂತ ಆಡಿದ ಅನುಭವ ಹೊಂದಿದ್ದಾರೆ,' ಎಂದರು.

Story first published: Monday, June 15, 2020, 23:25 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X