ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ದಾಖಲೆ ಮುರಿದ ಬಾಬರ್‌ ಆಝಮ್‌!

Babar Azam surpasses Vivian Richards in elite ODI list

ಬರ್ಮಿಂಗ್‌ಹ್ಯಾಮ್‌, ಜೂನ್‌ 27: ಪ್ರಸಕ್ತ ವಿಶ್ವಕಪ್‌ನಲ್ಲಿ ಸೆಮಿಫೈನಲ್ಸ್‌ ತಲುಪಲು ಹರಸಾಹಸ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಅದ್ಭುತ ಶತಕದೊಂದಿಗೆ ನ್ಯೂಜಿಲೆಂಡ್‌ ವಿರುದ್ಧ ಕಠಿಣ ಪಂದ್ಯವನ್ನು ಗೆದ್ದುಕೊಟ್ಟ ಯುವ ಪ್ರತಿಭೆ ಬಾಬರ್‌ ಆಝಮ್‌, ವೆಸ್ಟ್‌ ಇಂಡೀಸ್‌ನ ಮಾಜಿ ಆಟಗಾರ ಸರ್‌ ವಿವಿಯನ್‌ ರಿಚರ್ಡ್ಸ್‌ ಅವರ ದಾಖಲೆ ಮುರಿದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಿವೀಸ್‌ ತಂಡವನ್ನು ಆರು ವಿಕೆಟ್‌ಗಳಿಂದ ಬಗ್ಗುಬಡಿಸಿತ್ತು. ಅಜೇಯ 101 ರನ್‌ಗಳನ್ನು ಗಳಿಸಿದ ಬಾಬರ್‌ ಪಂದ್ಯ ಶ್ರೇಷ್ಠ ಗೌರವ ತಮ್ಮದಾಗಿಸಿಕೊಂಡರು. ಇದೇ ವೇಳೆ ಒಡಿಐನಲ್ಲಿ ಅತಿ ವೇಗದ 3000 ರನ್‌ಗಳನ್ನು ಗಳಿಸಿದವರ ಪೈಕಿ 2ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

24 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಬಾಬರ್‌ ಏಕದಿನದಲ್ಲಿ 3 ಸಾವಿರ ರನ್‌ ಪೂರೈಸಲು 68 ಇನಿಂಗ್ಸ್‌ಗಳನ್ನು ತೆಗದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ ಹಶೀಮ್‌ ಆಮ್ಲಾ ಈ ಮೈಲುಗಲ್ಲು ಮುಟ್ಟಲು ಕೇವಲ 57 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ರಿಚರ್ಡ್ಸ್ 69 ಇನಿಂಗ್ಸ್‌ಗಳಲ್ಲಿ ಮೂರು ಸಹಸ್ರ ರನ್‌ ಗಳಿಸಿದ್ದರು.

ಪಾಕ್‌ ಸೆಮಿಫೈನಲ್‌ ತಲುಪಲು ಭಾರತದ ನೆರವು ಬೇಡಿದ ಶೊಯೇಬ್‌ ಅಖ್ತರ್‌!ಪಾಕ್‌ ಸೆಮಿಫೈನಲ್‌ ತಲುಪಲು ಭಾರತದ ನೆರವು ಬೇಡಿದ ಶೊಯೇಬ್‌ ಅಖ್ತರ್‌!

ಇದೇ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ವಿಂಡೀಸ್‌ನ ಮತ್ತೊಬ್ಬ ದಿಗ್ಗಜ ಆಟಗಾರ ಸರ್‌ ಗಾರ್ಡನ್‌ ಗ್ರೀನಿಡ್ಜ್‌ (72) ಅವರಿದ್ದು, ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ (72) ಅಗ್ರ ಐದರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಭಾರತೀಯರ ಪೈಕಿ ಶಿಖರ್‌ ಧವನ್‌ ಕೂಡ 72 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು 6ನೇ ಸ್ಥಾನ ಅಲಂಕರಿಸಿದರೆ, ವಿರಾಟ್‌ ಕೊಹ್ಲಿ 75 ಇನಿಂಗ್ಸ್‌ಗಳಲ್ಲಿ 3000 ರನ್‌ಗಳ ಗುರಿ ಮುಟ್ಟಿದ್ದಾರೆ.

ಟೀಮ್‌ ಇಂಡಿಯಾದ ಡಿಫೆನ್ಸೀವ್‌ ಬ್ಯಾಟಿಂಗ್‌ ಕುರಿತು ಸೆಹ್ವಾಗ್‌ ಟೀಕೆ!ಟೀಮ್‌ ಇಂಡಿಯಾದ ಡಿಫೆನ್ಸೀವ್‌ ಬ್ಯಾಟಿಂಗ್‌ ಕುರಿತು ಸೆಹ್ವಾಗ್‌ ಟೀಕೆ!

ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಸದ್ಯಕ್ಕೆ 7 ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿದ್ದು, ಇನ್ನುಳಿದ 2 ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ವಿರುದ್ಧ ಗೆದ್ದರೆ ಮಾತ್ರವೇ ಸೆಮಿಫೈನಲ್ಸ್‌ ತಲುಪಲು ಅವಕಾಶ ಪಡೆಯಲಿದೆ.

Story first published: Thursday, June 27, 2019, 23:34 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X