ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮದ್ಯ ಕಂಪನಿಯ ಲೋಗೋ ಧರಿಸಲು ಬಾಬರ್ ಅಝಾಮ್ ನಕಾರ

Babar Azam tells Somerset, he wont wear logo of alcohol brand

ಕರಾಚಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ020 ಬ್ಲಾಸ್ಟ್ ಟೂರ್ನಿಯಲ್ಲಿ ಮದ್ಯಪಾನ ಕಂಪನಿಯ ಲೋಗೋ ಇರುವ ಟೀ ಶರ್ಟ್ ಧರಿಸಲು ಪಾಕಿಸ್ತಾನದ ವೈಟ್ ಬಾಲ್ ಕ್ರಿಕೆಟ್ ನಾಯಕ ಬಾಬರ್ ಅಝಾಮ್ ನಕಾರ ಸೂಚಿಸಿದ್ದಾರೆ. ಟಿ20 ಬ್ಲಾಸ್ಟ್‌ನಲ್ಲಿ ಸಮರ್‌ಸೆಟ್ ಪ್ರತಿನಿಧಿಸುವ ಬಾಬರ್, ತನ್ನ ಜೆರ್ಸಿಯಲ್ಲಿ ಮದ್ಯಪಾನ ಕಂಪನಿಯ ಲೋಗೋ ಬೇಡವೆಂದಿದ್ದಾರೆ.

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

ಮೂರು ಪಂದ್ಯಗಳ ಟೆಸ್ಟ್‌ ಮತ್ತು ಮೂರು ಪಂದ್ಯಗಳ ಟಿ20ಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಪಾಕಿಸ್ತಾನ ತಂಡದಿಂದ ಬಾಬರ್ ಅಝಾಮ್, ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮರ್‌ಸೆಟ್ ಆಟಗಾರ ಬಾಬರ್ ಜೆರ್ಸಿಯ ಬೆನ್ನಲ್ಲಿ ಟ್ರಿಬ್ಯೂಟ್ ಎನ್ನುವ ಮದ್ಯ ಕಂಪನಿಯ ಲೋಗೋವಿದೆ.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

ಬಾಬರ್ ಈಗಾಗಲೇ ಆ ಲೋಗೋವಿರುವ ಟೀ ಶರ್ಟ್ ಧರಿಸಿ ಕೆಲ ಪಂದ್ಯ ಆಡಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ಕೇಳಿ ಬಂದಿತ್ತು. ಮದ್ಯಪಾನ ಪ್ರಚಾರಕ್ಕೆ ಬಾಬರ್ ಬೆಂಬಲ ನೀಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಪ್ರಾಯಿಸಿದ್ದರು.

Babar Azam tells Somerset, he wont wear logo of alcohol brand

ಈ ಬೆಳವಣಿಗೆಯ ಬಳಿಕ ಇನ್ಮುಂದೆ ನಾನು ಆ ಲೋಗೋವಿರುವ ಟಿ ಶರ್ಟ್ ಧರಿಸಲಾರೆ ಎಂದು ಬಾಬರ್ ಈಗಾಗಲೇ ಸಮರ್‌ಸೆಟ್‌ಗೆ ತಿಳಿಸಿದ್ದಾರೆ. 'ತಪ್ಪಿನಿಂದಾಗಿ ಬಾಬರ್ ಟಿ-ಶರ್ಟ್‌ನಲ್ಲಿ ಆ ಲೋಗೋ ಇತ್ತು. ಮುಂದಿನ ಪಂದ್ಯದ ವೇಳೆಗೆ ಬಾಬರ್ ಜೆರ್ಸಿಯಿಂದ ಆ ಲೋಗೋವನ್ನು ತೆಗೆದುಹಾಕುತ್ತೇವೆ ಎಂದು ನಾವು ಭರವಸೆ ನೀಡುತ್ತಿದ್ದೇವೆ,' ಎಂದು ಇಂಗ್ಲೆಂಡ್ ಕ್ರಿಕೆಟ್ ಹೇಳಿದೆ.

Story first published: Saturday, September 5, 2020, 10:33 [IST]
Other articles published on Sep 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X