ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೀರಾ? ಎಂಬ ಪ್ರಶ್ನೆಗೆ ಬಾಬರ್ ಅಜಮ್ ಉತ್ತರ

Babar azam

ಕ್ರಿಕೆಟ್‌ನಲ್ಲಿ ವೇಳಾಪಟ್ಟಿ ಒತ್ತಡ ಹೆಚ್ಚಾದಂತೆ ಮೂರು ಫಾರ್ಮೆಟ್ ಕ್ರಿಕೆಟ್ ಆಡುವುದು ಆಟಗಾರರಿಗೆ ಸವಾಲಿನ ವಿಷಯವಾಗಿದೆ. ಜೊತೆಗೆ ಸತತ ಅಂತರಾಷ್ಟ್ರೀಯ ಕ್ರಿಕೆಟ್‌ ಸರಣಿಗಳನ್ನ ಆಡುವುದು ಇಂಜ್ಯುರಿಗೂ ಕಾರಣವಾಗುತ್ತಿರುವ ಉದಾಹರಣೆಗಳಿವೆ. ಹೀಗಿರುವ ಏಕದಿನ ಫಾರ್ಮೆಟ್‌ನಿಂದ ಹೊರಗುಳಿಯಲು ಹಲವು ಆಟಗಾರರು ಮನಸ್ಸು ಮಾಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್‌ ಸೂಪರ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ ನಿರ್ಧಾರದ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಟೀಕೆಗಳು ಸಹ ವ್ಯಕ್ತವಾಯಿತು. ನ್ಯೂಜಿಲೆಂಡ್ ಬೌಲರ್ ಟ್ರೆಂಟ್‌ ಬೌಲ್ಟ್‌ ಕ್ರಿಕೆಟ್ ಮಂಡಳಿ ನೀಡಿದ್ದ ಸಂಬಳದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ತನ್ನ ಕುಟುಂಬದ ಜೊತೆಗೆ ಕಾಲ ಕಳೆಯುವುದರ ಜೊತೆಗೆ ಟಿ20 ಲೀಗ್ ಆಡಿಕೊಂಡು ಇರುವ ಯೋಚನೆಯಲ್ಲಿದ್ದಾರೆ.

ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂನಲ್ಲಿ ವರ್ಣಭೇದ ನೀತಿ: ರಾಸ್‌ ಟೇಲರ್ ಆತ್ಮಚರಿತ್ರೆಯಲ್ಲಿ ಬಹಿರಂಗನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂನಲ್ಲಿ ವರ್ಣಭೇದ ನೀತಿ: ರಾಸ್‌ ಟೇಲರ್ ಆತ್ಮಚರಿತ್ರೆಯಲ್ಲಿ ಬಹಿರಂಗ

ಇದ್ರ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್‌ಗೂ ಕೇಳಿದ ಪ್ರಶ್ನೆಗೆ, ಪಾಕ್ ನಾಯಕ ಸಖತ್ ಉತ್ತರ ನೀಡಿದ್ದಾರೆ.

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದಾರ ಎಂದು ಪತ್ರಕರ್ತನಿಂದ ಪ್ರಶ್ನೆ?

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದಾರ ಎಂದು ಪತ್ರಕರ್ತನಿಂದ ಪ್ರಶ್ನೆ?

ಇತ್ತೀಚಿನ ದಿನಗಳಲ್ಲಿ ವರ್ಕ್‌ಲೋಡ್ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲುವ ಮೂಲಕ ಆಟಗಾರರ ಮಾನಸಿನ ಯಶಸ್ಸಿಗೆ ಹಿನ್ನಡೆಯಾಗಿದೆ. ಹಿರಿಯ ಆಟಗಾರರಾದ ರಿಜ್ವಾನ್, ಶಾಹಿನ್ ಅಫ್ರಿದಿ ಹಾಗೂ ನೀವು ಏಕದಿನ ಫಾರ್ಮೆಟ್‌ಗೆ ನಿವೃತ್ತಿ ನೀಡಲು ಬಯಸುತ್ತೀರಾ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.

"ನೀವು, ರಿಜ್ವಾನ್ ಮತ್ತು ಶಾಹೀನ್ ಪಾಕಿಸ್ತಾನ ಕ್ರಿಕೆಟ್‌ನ ಹೆಮ್ಮೆ. ನಾವು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸೋತಂತೆ, ಆಟಗಾರರು ಖಿನ್ನತೆಗೆ ಒಳಗಾಗಿದ್ದರು, ಕೆಲಸದ ಹೊರೆ ಹೆಚ್ಚಾಯಿತು ಎಂದು ನೀವು ಭಾವಿಸುವುದಿಲ್ಲವೇ? ಆದ್ದರಿಂದ ನೀವು ಕೇವಲ ಎರಡು ಫಾರ್ಮ್ಯಾಟ್‌ಗಳನ್ನು ಆಡಿದರೆ ಅದು ಒಳ್ಳೆಯದು ಅಲ್ಲವೇ ಎಂದು ಪತ್ರಕರ್ತರು ಕೇಳಿದರು.

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಬಗ್ಗೆ ಕ್ರಿಕೆಟಿಗ ರಿಷಬ್ ಪಂತ್ ಗರಂ! ವಿವಾದ ಹುಟ್ಟುಹಾಕಿದ ಪೋಸ್ಟ್‌

ಅದ್ಭುತ ಉತ್ತರ ಕೊಟ್ಟ ಬಾಬರ್

ಅದ್ಭುತ ಉತ್ತರ ಕೊಟ್ಟ ಬಾಬರ್

ಪತ್ರಕರ್ತ ಕೇಳಿದ ಪ್ರಶ್ನೆಗೆ ಬೊಂಬಾಟ್ ಉತ್ತರ ನೀಡಿರುವ ಬಾಬರ್ ಇದೆಲ್ಲವೂ ಆಟಗಾರನ ಫಿಟ್ನೆಸ್ ಮೇಲೆ ಅವಲಂಬಿತಗೊಂಡಿದೆ ಎಂದಿದ್ದಾರೆ. ಜೊತೆಗೆ ನಾನು ವಯಸ್ಸಾದವನಂತೆ ಕಾಣುತ್ತಿದ್ದೀನ ಎಂದು ಪ್ರಶ್ನಿಸಿದ್ದಾರೆ.

''ಇದು ನಿಮ್ಮ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಅಭಿ ಜಿಸ್ ತರ್ಹಾ ಹಮಾರಿ ಫಿಟ್‌ನೆಸ್ ಹೈ, ಅಭಿ ಐಸಾ ಸೋಚಾ ನಹೀ ಹೈ ಕಿ ಹಮ್ ದೋ ಫಾರ್ಮ್ಯಾಟ್ ಮೇ ಆ ಜಾಯೇ. ಆಪ್ಕೋ ಕ್ಯಾ ಲಗ್ತಾ ಹೈ ಮೈನ್ ಬುಧಾ ಹೋ ಗಯಾ ಹೂ? ಯಾ ಹಮ್ ಬುಧೆ ಹೋ ಗಯೇ ಹೈ? (ನಾವು ಫಿಟ್‌ನೆಸ್ ಹೊಂದಿರುವ ರೀತಿಯನ್ನ ಗಮನಿಸಿದ್ರೆ, ನಾವು ಕೇವಲ ಎರಡು ಫಾರ್ಮೆಟ್ ಮಾತ್ರ ಆಡಲು ಸೀಮಿತಗೊಳಿಸಬಾರದು ಎಂದು ನಾನು ಭಾವಿಸುತ್ತೇನೆ. ನನಗೆ ವಯಸ್ಸಾಗಿದೆ ಎಂದು ನೀವು ಭಾವಿಸುತ್ತೀರಾ? ) ಎಂದು ಬಾಬರ್ ಅಜಮ್ ವಾಪಸ್ ಪ್ರಶ್ನೆ ಹಾಕಿದ್ದಾರೆ.

ಮುಂಬೈ ತಂಡ ತೊರೆಯಲು ಎನ್‌ಒಸಿ ಕೋರಿದ ಸಚಿನ್ ತೆಂಡೂಲ್ಕರ್ ಪುತ್ರ; ಈ ರಾಜ್ಯ ಸೇರುವ ಸಾಧ್ಯತೆ!

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ಪತ್ನಿ ದೀಪಿಕಾ ಪಲ್ಳಿಕಲ್ ಸಾಧನೆಗೆ ದಿನೇಶ್ ಕಾರ್ತಿಕ್ ಫಿದಾ | *Cricket
ಮೂರು ಫಾರ್ಮೆಟ್‌ನಲ್ಲಿ ಸತತ ರನ್ ಕಲೆಹಾಕುತ್ತಿರುವ ಏಕೈಕ ಬ್ಯಾಟರ್!

ಮೂರು ಫಾರ್ಮೆಟ್‌ನಲ್ಲಿ ಸತತ ರನ್ ಕಲೆಹಾಕುತ್ತಿರುವ ಏಕೈಕ ಬ್ಯಾಟರ್!

ಬಾಬರ್ ಅಜಮ್ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಪಾರುಪತ್ಯ ಮೆರೆಯುತ್ತಿರುವ ಅದ್ಭುತ ಬ್ಯಾಟ್ಸ್‌ಮನ್. ಮೂರು ಫಾರ್ಮೆಟ್‌ನಲ್ಲಿ ಸತತ ರನ್‌ ಕಲೆಹಾಕುತ್ತಿರುವುದಷ್ಟೇ ಅಲ್ಲದೆ ರ್ಯಾಕಿಂಗ್‌ನಲ್ಲೂ ಮುಂದಿದ್ದಾರೆ. ಟಿ20 ಕ್ರಿಕೆಟ್, ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಬಾಬರ್ ಅಜಮ್ , ಟೆಸ್ಟ್ ಶ್ರೇಯಾಂಕದಲ್ಲಿ ಜೋ ರೂಟ್ ಮತ್ತು ಮಾರ್ನಸ್ ಲ್ಯಾಬುಸ್‌ಚಾಗ್ನೆ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ರನ್ ಕಲೆಹಾಕುವುದು ಮಂಕಾದ ಬಳಿಕ ಮತ್ತೊಂದೆಡೆ ಬಾಬರ್ ಅಜಮ್ ಅಬ್ಬರ ಮುಂದುವರಿದಿದೆ.

Story first published: Friday, August 12, 2022, 10:22 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X