ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೈರ್‌ಸ್ಟೋವ್‌ ಅಬ್ಬರದ ಶತಕ, ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

Bairstow helps England thrash Pakistan in third ODI

ಬ್ರಿಸ್ಟೋಲ್‌, ಮೇ 15: ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಮಿಂಚಿದ ಆತಿಥೇಯ ಇಂಗ್ಲೆಂಡ್‌ ತಂಡ, ಪ್ರವಾಸಿ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

1
44034

ಇಲ್ಲಿನ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ, ಆರಂಭಿಕ ಬ್ಯಾಟ್ಸ್‌ಮನ್‌ ಇಮಾಮ್‌ ಉಲ್‌ ಹಕ್‌ (151) ಅವರ ಸೊಗಸಾದ ಶತಕದ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 358 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

 ವಿಶ್ವಕಪ್‌ನಲ್ಲಿ ಭಾರತದ ಭವಿಷ್ಯ ನುಡಿದ ಮೊಹಮ್ಮದ್‌ ಅಝರುದ್ದೀನ್‌! ವಿಶ್ವಕಪ್‌ನಲ್ಲಿ ಭಾರತದ ಭವಿಷ್ಯ ನುಡಿದ ಮೊಹಮ್ಮದ್‌ ಅಝರುದ್ದೀನ್‌!

ಬಳಿಕ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್‌ ತಂಡ 350+ ಗುರಿ ಎಲ್ಲ ಏನೂ ಅಲ್ಲ ಎನ್ನುವಂತೆ ಬ್ಯಾಟಿಂಗ್‌ ಮಾಡಿ ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್‌ ನಷ್ಟದಲ್ಲಿ 359 ರನ್‌ಗಳನ್ನು ಚಚ್ಚಿ, 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆಯಿತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೆ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ 12 ರನ್‌ಗಳ ಜಯ ದಾಖಲಿಸಿತ್ತು.

 ಐಪಿಎಲ್‌ ಬಗ್ಗೆ ಅನಿಸಿಕೆ ಹಂಚಿಕೊಂಡ ಇಂಗ್ಲೆಂಡ್ ಬ್ಯಾಟ್ಸ್ಮನ್ ಬೇರ್ಸ್ಟೋವ್ ಐಪಿಎಲ್‌ ಬಗ್ಗೆ ಅನಿಸಿಕೆ ಹಂಚಿಕೊಂಡ ಇಂಗ್ಲೆಂಡ್ ಬ್ಯಾಟ್ಸ್ಮನ್ ಬೇರ್ಸ್ಟೋವ್

ಪಂದ್ಯದಲ್ಲಿ ಪಾಕ್‌ ಬೌಲರ್‌ಗಳನ್ನು ಮನಸೋಯಿಚ್ಛೆ ದಂಡಿಸಿದ ಬಲಗೈ ಬ್ಯಾಟ್ಸ್‌ಮನ್‌ ಬೈರ್‌ಸ್ಟೋವ್‌, ಎದುರಿಸಿದ 93 ಎಸೆತಗಳಲ್ಲಿ 15 ಫೋರ್‌ ಮತ್ತು 5 ಭರ್ಜರಿಯ ಸಿಕ್ಸರ್‌ಗಳ ಮೂಲಕ 128 ರನ್‌ಗಳನ್ನು ಸಿಡಿಸಿ ತಂಡದ ಜಯದ ಹಾದಿಯನ್ನು ಸುಗಮವಾಗಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌, 55 ಎಸೆತಗಳಲ್ಲಿ 76 ರನ್‌ಗಳನ್ನು (8 ಫೋರ್‌, 4 ಸಿಕ್ಸರ್‌) ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು?ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು?

ನಾಲ್ಕನೇ ಏಕದಿನ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಶುಕ್ರವಾರ ನಡೆಯಲಿದ್ದು, ಹೊನಲು ಬೆಳಕಿನ ಪಂದ್ಯ ಇದಾಗಿದೆ. ಪಾಕ್‌ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್‌ ತಂಡ, ಮೇ 30ರಂದು ತವರಿನಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ ಟೂರ್ನಿಗೆ ಅದ್ಭುತ ರೀತಿಯಲ್ಲಿ ಸಜ್ಜಾಗುತ್ತಿದೆ.

ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈ ಆಟಗಾರನ ಕೊರತೆ ಕಾಡಲಿದೆ: ದಾದಾವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈ ಆಟಗಾರನ ಕೊರತೆ ಕಾಡಲಿದೆ: ದಾದಾ

ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್‌, ಮೇ 30ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ.

Story first published: Wednesday, May 15, 2019, 14:13 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X