ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BAN vs ZIM: ಒಂದೇ ಪಂದ್ಯದಲ್ಲಿ ಒಟ್ಟು 5 ಬ್ಯಾಟ್ಸ್‌ಮನ್ ಡಕ್ ಔಟ್; ವೈಟ್‌ವಾಷ್‌ನಿಂದ ಪಾರಾದ ಬಾಂಗ್ಲಾ

BAN vs ZIM: 5 batsmen got out for 0 run in the 3rd ODI between Bangladesh and Zimbabwe

ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಬಾಂಗ್ಲಾದೇಶ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸಿ ಮುಗಿಸಿದೆ. ಅತಿಥೇಯ ಜಿಂಬಾಬ್ವೆ ಪ್ರವಾಸಿ ಬಾಂಗ್ಲಾದೇಶದ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಗೆದ್ದು ಬೀಗಿದೆ. ಹೀಗೆ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳರೆಡನ್ನೂ ಸೋತಿರುವ ಬಾಂಗ್ಲಾದೇಶ ತೀವ್ರ ಹಿನ್ನಡೆಯನ್ನು ಅನುಭವಿಸಿದೆ.

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!

ಮೊದಲಿಗೆ ಟಿ ಟ್ವೆಂಟಿ ಸರಣಿಯ ಮೂರು ಪಂದ್ಯಗಳಲ್ಲಿ ದ್ವಿತೀಯ ಪಂದ್ಯವನ್ನು ಮಾತ್ರ ಗೆದ್ದು ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಂಡಿದ್ದ ಬಾಂಗ್ಲಾದೇಶ ಇದೀಗ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತು ಇಂದು ( ಆಗಸ್ಟ್ 10 ) ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ವೈಟ್‌ವಾಷ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.

ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!

ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕುವುದರ ಮೂಲಕ ಎದುರಾಳಿ ಜಿಂಬಾಬ್ವೆ ತಂಡಕ್ಕೆ 257 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಜಿಂಬಾಬ್ವೆ 32.2 ಓವರ್‌ಗಳಲ್ಲಿ 151 ರನ್ ಕಲೆಹಾಕಿ ಆಲ್‌ ಔಟ್ ಆಯಿತು. ಈ ಮೂಲಕ ಬಾಂಗ್ಲಾದೇಶ 105 ರನ್‌ಗಳ ಜಯ ಸಾಧಿಸಿ ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಂಡಿತು.

ಐವರು ಡಕ್ಔಟ್

ಐವರು ಡಕ್ಔಟ್

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶದ ಐವರು ಬ್ಯಾಟ್ಸ್‌ಮನ್‌ಗಳು ಡಕ್ ಔಟ್ ಆದರೆ, ಜಿಂಬಾಬ್ವೆ ತಂಡದ ಓರ್ವ ಆಟಗಾರ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಈ ಪಂದ್ಯವೊಂದರಲ್ಲಿಯೇ ಒಟ್ಟು ಆರು ಆಟಗಾರರು ಡಕ್ ‍ಔಟ್ ಆಗಿದ್ದಾರೆ. ಬಾಂಗ್ಲಾದೇಶದ ನಜ್ಮುಲ್ ಹೊಸೈನ್ ಶಾಂಟೋ, ಮುಷ್ಫಿಖರ್ ರಹೀಮ್, ಹಸನ್ ಮಹ್ಮುದ್ ಮತ್ತು ಮಸ್ತಫಿಜರ್ ರೆಹಮಾನ್ ಡಕ್ ಔಟ್ ಆದರೆ, ಎಬಾದತ್ ಹೊಸೈನ್ ಯಾವುದೇ ರನ್ ಕಲೆಹಾಕದೇ ಅಜೇಯರಾಗಿ ಉಳಿದರು. ಇನ್ನು ಜಿಂಬಾಬ್ವೆ ತಂಡದ ನಾಯಕ ಶಿಖಂಧರ್ ರಾಜಾ ಕೂಡ ಡಕ್ ಔಟ್ ಆದರು. ಈ ಮೂಲಕ ಈ ಪಂದ್ಯದಲ್ಲಿ ಓರ್ವ ಅಜೇಯನಾಗಿ ಉಳಿದು ಯಾವುದೇ ರನ್ ಗಳಿಸದಿದ್ದರೆ, ಐವರು ಡಕ್ ಔಟ್ ಆಗಿದ್ದು, ಒಟ್ಟು ಆರು ಆಟಗಾರರು ಶೂನ್ಯ ಸುತ್ತಿದ್ದಾರೆ.

ಆಡುವ ಬಳಗ

ಆಡುವ ಬಳಗ

ಬಾಂಗ್ಲಾದೇಶ: ತಮೀಮ್ ಇಕ್ಬಾಲ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೋ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಎಬಾಡೋತ್ ಹೊಸೈನ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್

ಜಿಂಬಾಬ್ವೆ: ತಡಿವಾನಾಶೆ ಮರುಮಣಿ, ತಕುದ್ಜ್ವಾನಾಶೆ ಕೈಟಾನೊ, ಇನೊಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ (ನಾಯಕ), ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನ್ಗರವ

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ಪತ್ನಿ ದೀಪಿಕಾ ಪಲ್ಳಿಕಲ್ ಸಾಧನೆಗೆ ದಿನೇಶ್ ಕಾರ್ತಿಕ್ ಫಿದಾ | *Cricket
ಈ ವರ್ಷ ಅತಿಹೆಚ್ಚು ಟಿ ಟ್ವೆಂಟಿ ಗೆದ್ದ ಎರಡನೇ ತಂಡ ಜಿಂಬಾಬ್ವೆ

ಈ ವರ್ಷ ಅತಿಹೆಚ್ಚು ಟಿ ಟ್ವೆಂಟಿ ಗೆದ್ದ ಎರಡನೇ ತಂಡ ಜಿಂಬಾಬ್ವೆ

ಇನ್ನು ಈ ಏಕದಿನ ಸರಣಿಗೂ ಮುನ್ನ ನಡೆದಿದ್ದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-1 ಅಂತರದಿಂದ ಸರಣಿಯನ್ನು ಗೆದ್ದಿದ್ದ ಜಿಂಬಾಬ್ವೆ ಈ ವರ್ಷದಲ್ಲಿ ಇಲ್ಲಿಯವರೆಗೂ ಅತಿಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರ್ಷ ಒಟ್ಟು 16 ಟಿ ಟ್ವೆಂಟಿ ಪಂದ್ಯಗಳನ್ನು ಆಡಿರುವ ಜಿಂಬಾಬ್ವೆ 9 ಪಂದ್ಯಗಳಲ್ಲಿ ಜಯ ಸಾಧಿಸಿ ಉಳಿದ 7 ಏಳು ಪಂದ್ಯಗಳಲ್ಲಿ ಸೋತಿದೆ. ಇನ್ನು ಈ ವರ್ಷ ಒಟ್ಟು 24 ಟಿ ಟ್ವೆಂಟಿ ಪಂದ್ಯಗಳನ್ನಾಡಿ 19 ಪಂದ್ಯಗಳಲ್ಲಿ ಗೆದ್ದು ಉಳಿದ 4 ಪಂದ್ಯಗಳಲ್ಲಿ ಸೋತಿರುವ ಭಾರತ ಈ ವರ್ಷ ಅತಿಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದ ತಂಡ ಎನಿಸಿಕೊಂಡಿದೆ.

Story first published: Thursday, August 11, 2022, 10:26 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X