ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೆಟ್ಮೈರ್-ಗುರ್‌ಕೀರತ್ ಅಬ್ಬರ, ಸನ್ ರೈಸರ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್

Bangalore vs Hyderabad, 54th Match - Live Cricket Score

ಬೆಂಗಳೂರು, ಮೇ 4: ಶಿಮ್ರನ್ ಹೆಟ್ಮೈರ್ ಮತ್ತು ಗುರ್‌ಕೀರತ್ ಸಿಂಗ್ ಸ್ಫೋಟಕ ಅರ್ಧಶತಕದ ನೆರವಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ (ಮೇ 4) ನಡೆದ ಐಪಿಎಲ್ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಈ ಸೋಲು ಎಸ್‌ಆರ್‌ಎಚ್ ಪ್ಲೇ ಆಫ್ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್‌ಗೆ ವೃದ್ಧಿಮಾನ್ ಸಹಾ 20, ಮಾರ್ಟಿನ್ ಗಪ್ಟಿಲ್ 30, ಮನೀಶ್ ಪಾಂಡೆ 9, ವಿಜಯ್ ಶಂಕರ್ 27 ರನ್ ಸೇರಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ವಿಲಿಯಮ್ಸನ್ 43 ಎಸೆತಗಳಿಗೆ 70 ರನ್ ಗಳಿಸಿ ತಂಡವನ್ನು ಬೆಂಬಲಿಸಿದರು.

ಪಂದ್ಯದ Live Score ಕೆಳಗಿದೆ

1
45930

ಹೈದರಾಬಾದ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 175 ರನ್ ಪೇರಿಸಿತು. ಎಸ್‌ಆರ್‌ಎಚ್ ಇನ್ನಿಂಗ್ಸ್‌ ವೇಳೆ ಬೆಂಗಳೂರಿನ ವಾಷಿಂಗ್ಟನ್ ಸುಂದರ್ 24 ರನ್‌ಗೆ 3, ನವದೀಪ್ ಸೈನಿ 39 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು.

ಹೆಟ್ಮೈರ್ 47 ಎಸೆತಗಳಿಗೆ 75 ರನ್, ಸಿಂಗ್ 48 ಎಸೆತಗಳಿಗೆ 68 ರನ್ ಸೇರಿಸಿದರು. ಆರ್‌ಸಿಬಿ 19.2 ಓವರ್‌ಗೆ 6 ವಿಕೆಟ್ ಕಳೆದು 178 ರನ್ ಗುರಿ ತಲುಪಿತು. ಆರ್‌ಸಿಬಿ ಇನ್ನಿಂಗ್ಸ್‌ ವೇಳೆ ಎದುರಾಳಿ ತಂಡದ ಕೆ ಖಲೀಲ್ ಅಹ್ಮದ್ 3, ಭುವನೇಶ್ವರ್ ಕುಮಾರ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಆರ್‌ಸಿಬಿಗೆ ಈ ಗೆಲುವು ಪ್ರತಿಷ್ಠೆಯದ್ದಾಗಿತ್ತಾದರೂ ಪ್ಲೇ ಆಫ್ ನೆಲೆಯಲ್ಲಿ ಅಂಥದ್ದೇನೂ ಲಾಭ ತಂದಿಲ್ಲ. ಆದರೆ ಪ್ಲೇ ಆಫ್ ಕನವರಿಕೆಯಲ್ಲಿದ್ದ ಸನ್ ರೈಸರ್ನ್‌ಗೆ ಈ ಸೋಲು ಆಘಾತ ನೀಡಿದೆ.

ಹೈದರಾಬಾದ್ ಸೋಲು ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಪ್ರವೇಶಕ್ಕೆ ಹೆಚ್ಚಿನ ಅನುಕೂಲ ಓದಗಿಸಿದೆ. ಮುಂದಿನ ಪಂದ್ಯಲ್ಲಿ ಹೆಚ್ಚಿನ ರನ್‌ ರೇಟ್‌ನೊಂದಿಗೆ ಕೆಕೆಆರ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲೂಬಹುದು. ಆದರೆ ಸದ್ಯಕ್ಕೆ ರನ್ ರೇಟ್ ಆಧಾರದಲ್ಲಿ ಎಸ್‌ಆರ್‌ಎಚ್‌ಗೆ ಪ್ಲೇ ಆಫ್ ಅವಕಾಶವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿಕೆ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಶಿಮ್ರನ್ ಹೆಟ್ಮೇಯರ್, ಹೆನ್ರಿಕ್ ಕ್ಲಾಸೆನ್, ಗುರ್‌ಕೀರತ್ ಸಿಂಗ್ ಮನ್, ಪವನ್ ನೇಗಿ, ಉಮೇಶ್ ಯಾದವ್, ನವೀದೀಪ್ ಸೈನಿ, ಕುಲ್ವಂತ್ ಖೇಜೋಲಿಯ, ಯುಜುವೇಂದ್ರ ಚಾಹಲ್.

ಸನ್ ರೈಸರ್ಸ್ ಹೈದರಾಬಾದ್ ತಂಡ: ವೃದ್ಧಿಮಾನ್ ಸಹಾ (ವಿಕೆ), ಮಾರ್ಟಿನ್ ಗಪ್ಟಿಲ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹ್ಮದ್, ಬಸಿಲ್ ತಂಪಿ.

Story first published: Sunday, May 5, 2019, 0:06 [IST]
Other articles published on May 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X