ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯ

Bangalore vs Mumbai, 7th Match - Live Cricket Score

ಬೆಂಗಳೂರು, ಮಾರ್ಚ್ 28: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 28) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 7ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ರನ್ ರೋಚಕ ಗೆಲುವನ್ನಾಚರಿಸಿತು. ತೀವ್ರ ಕುತೂಹಲ ಘಟಕ್ಕೆ ತಲುಪಿದ್ದ ಪಂದ್ಯವನ್ನು ಕೊನೆಗೂ ಮುಂಬೈ ಜಯಿಸಿ ಐಪಿಎಲ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ.

ಐಪಿಎಲ್ 2019: ಹ್ಯಾಟ್ರಿಕ್ ಸಿಕ್ಸ್‌ ಸಿಡಿಸಿದ ಯುವಿಗೆ ಟ್ವಿಟರ್‌ನಲ್ಲಿ ಮೆಚ್ಚುಗೆಐಪಿಎಲ್ 2019: ಹ್ಯಾಟ್ರಿಕ್ ಸಿಕ್ಸ್‌ ಸಿಡಿಸಿದ ಯುವಿಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ 23, ರೋಹಿತ್ ಶರ್ಮಾ 48, ಯುವರಾಜ್ ಸಿಂಗ್ 23, ಹಾರ್ದಿಕ್ ಪಾಂಡ್ಯ 32 ರನ್ ನೆರವಿನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 187 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿ ಶರಣಾಯಿತು. 20 ರನ್‌ಗೆ ಆರ್‌ಸಿಬಿ 3 ವಿಕೆಟ್ ಮುರಿದ ಜಸ್‌ಪ್ರೀತ್ ಬೂಮ್ರಾ ಪಂದ್ಯಶ್ರೇಷ್ಠರೆನಿಸಿದರು.

ಕೇದಾರ್ ಮುಖಕ್ಕೆ ಕೇಕ್ ಹಚ್ಚಿ ಬರ್ತ್ ಡೇ ಆಚರಿಸಿದ ಸಿಎಸ್‌ಕೆ: ವಿಡಿಯೋಕೇದಾರ್ ಮುಖಕ್ಕೆ ಕೇಕ್ ಹಚ್ಚಿ ಬರ್ತ್ ಡೇ ಆಚರಿಸಿದ ಸಿಎಸ್‌ಕೆ: ವಿಡಿಯೋ

ಪಂದ್ಯದಲ್ಲಿ ಆರ್ಸಿಬಿ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತಾದರೂ ಫಲಿತಾಂಶವನ್ನು ಒಲಿಸಿಕೊಳ್ಳಲಾಗಲಿಲ್ಲ. ಪಾರ್ಥಿವ್ ಪಟೇಲ್ 31, ಮೊಯೀನ್ ಆಲಿ 13, ವಿರಾಟ್ ಕೊಹ್ಲಿ 46, ಎಬಿ ಡಿ ವಿಲಿಯರ್ಸ್ 70 ರನ್ ಸೇರಿಸಿ ಪಂದ್ಯ ಜಿದ್ದಾಜಿದ್ದಿ ಅನ್ನಿಸಲು ಕಾರಣರಾದರು. ಪಂದ್ಯದಲ್ಲಿ ಕೊಹ್ಲಿ ಐಪಿಎಲ್‌ನಲ್ಲಿ 5000 ರನ್ ಪೂರೈಸಿ ಮೈಲಿಗಲ್ಲು ಸ್ಥಾಪಿಸಿದರು. ಎಬಿಡಿ ಕೂಡ ಐಪಿಎಲ್‌ನಲ್ಲಿ 4000+ ರನ್‌ ಗಾಗಿ ಮಿಂಚಿದರು.

'ಬಟ್ಲರ್ ಮೇಲೆ ಅಶ್ವಿನ್ 'ಮಂಕಡ್' ಪ್ರಯೋಗಿಸಿದ್ದು ಕ್ರೀಡಾಸ್ಫೂರ್ತಿಯೊಳಗಿಲ್ಲ!''ಬಟ್ಲರ್ ಮೇಲೆ ಅಶ್ವಿನ್ 'ಮಂಕಡ್' ಪ್ರಯೋಗಿಸಿದ್ದು ಕ್ರೀಡಾಸ್ಫೂರ್ತಿಯೊಳಗಿಲ್ಲ!'

ಅಂತೂ ಆರ್‌ಸಿಬಿ-ಮುಂಬೈ ನಡುವಿನ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ರಂಜನೆ ನೀಡಿದ್ದಂತೂ ಸುಳ್ಳಲ್ಲ. ಕೊನೆಯ ಎಸೆತಕ್ಕೆ ಆರ್‌ಸಿಬಿ ಗೆಲ್ಲಲು 7 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಶಿವಂ ದೂಬೆ 1 ರನ್ ಗಳಿಸಿದರು. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಮಾಲಿಂಗ ಎಸೆದ ಕೊನೆಯ ಎಸೆತ ನೋ ಬಾಲ್ ಆಗಿತ್ತು. ಆದರೆ ಪಂದ್ಯ ಮುಕ್ತಾಯಕ್ಕೂ ಮುನ್ನ ಅದು ಪರಿಗಣನೆಗೆ ಒಳಗಾಗಿರಲಿಲ್ಲ!

ಆರ್‌ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್ಆರ್‌ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ (ಸಿ), ಪಾರ್ಥಿವ್ ಪಟೇಲ್ (ವಿಕೆ), ಮೊಯೆನ್ ಅಲಿ, ಎಬಿ ಡಿ ವಿಲಿಯರ್ಸ್, ಶಿಮ್ರನ್ ಹೆಟ್ಮರ್, ಶಿವಮ್ ದುಬೆ, ಕಾಲಿನ್ ಡಿ ಗ್ರಾಂಡ್ಹೋಮ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚೆಲ್ ಮ್ಯಾಕ್ಕ್ಲೆನಾಘನ್, ಲಸಿತ್ ಮಾಲಿಂಗ, ಮಾಯಾಂಕ್ ಮಾರ್ಕೆಂಡೆ, ಜಸ್‌ಪ್ರೀತ್ ಬೂಮ್ರಾ.

Story first published: Friday, March 29, 2019, 15:30 [IST]
Other articles published on Mar 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X